ಹಾಸನ

ಯುಗಾದಿ: ಸಂಭ್ರಮದ ಸಿದ್ಧತೆ

Published On :

 ಪಿ. ರವಿಕುಮಾರ್
ಹಾಸನ: ಒಂದು ಕಡೆ ಬರಗಾಲ, ವಿಧಾನಸಭೆ ಚುನಾವಣೆ ಭರಾಟೆ ನಡುವೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿಯಿದ್ದಾಗ್ಯೂ ಯುಗಾದಿ ಹಬ್ಬ ಸಂಭ್ರಮದಿಂದ ಆಚರಿಸಲು ಜಿಲ್ಲೆಯ ಜನತೆ ಎಂದಿನಂತೆ ಭರದ ಸಿದ್ಧತೆನಡೆಸಿದ್ದಾರೆ.
ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಜನರು ಹಬ್ಬಕ್ಕೆ ಬೇಕಾದಂತಹ ಅಗತ್ಯ ವಸ್ತುಗಳ ಖರೀದಿಯಲ್ಲಿ ಮಗ್ನರಾಗಿ ಏರಿದ ಬೆಲೆಗಳನ್ನು ಲೆಕ್ಕಿಸದೆ ವಸ್ತುಗಳನ್ನು ಖರೀಸಿದರು. ಆದರೆ ವ್ಯಾಪಾರದಲ್ಲಿ ಯಾವುದೇ ಲಾಭ ಕಾಣ ಬರುತ್ತಿಲ್ಲ.  ಎಲ್ಲಾ ವಸ್ತುಗಳ ಬೆಲೆ ಏರಿಕೆ ದುಪ್ಪಟ್ಟು. ಹೀಗಾಗಿ ಭರ್ಜರಿ ವ್ಯಾಪಾರವೂ, ನಿರೀಕ್ಷಿತ ಲಾಭವೂ ಇಲ್ಲವೆಂದು ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.
ಬೇವು, ಬೆಲ್ಲ, ಹೂವು-ಹಣ್ಣು ಖರೀದಿ ಮಾಡುವಲ್ಲಿ ಜನತೆ ಮಗ್ನರಾಗಿದ್ದರು. ಕಳೆದ ಬಾರಿಗಿಂತ ಈ ಬಾರಿ ವಸ್ತುಗಳ ಬೆಲೆಗಳೆ ಏರಿಕೆಯಾಗಿರುವುದರಿಂದ ವ್ಯಾಪಾರ ಮಂದಗತಿಯಲ್ಲಿ ನಡೆಯುತ್ತಿದೆ. ವ್ಯಾಪಾರಸ್ಥರಿಗೆ ಕೊಂಚ ನಿರಾಸೆ. ಹೂವು ಮತ್ತು ಹಣ್ಣಿನ ಬೆಲೆ ಕೊಂಚ ಎರಿಕೆಯಾಗಿದೆ. ಆದರೆ ಜನತೆ ಬೆಲೆಯನ್ನು ಲೆಕ್ಕಿಸದೆ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದಾರೆ.
ಹೊಸವರ್ಷದಲ್ಲಿ ಯುಗಾದಿ ಮೊದಲ ಹಬ್ಬವಾಗಿದ್ದು, ಇದೇ ಹಿಂದೂಗಳಿಗೆ ಹೊಸವರ್ಷವಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕೊಂಚ ವಿಭಿನ್ನವಾಗಿ ಆಚರಿಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಬೆಳಗ್ಗೆ ಬೇಗ ಎದ್ದು ಮನೆಯನ್ನೆಲ್ಲ ಸ್ವಚ್ಛಗೊಳಿಸಿ ಬಾಗಿಲಿಗೆ ಮಾವಿನ ತೋರಣ ಕಟ್ಟಿ ಸಿಂಗರಿಸಲಾಗುತ್ತದೆ. ಮನೆಯಲ್ಲಿ ಬೇವು ಸಿಹಿ, ಬೆಲ್ಲ ಕಹಿ ಎಂದು ಬೇವು ಬೆಲ್ಲವನ್ನು ತಿಂದು ಹಬ್ಬದ ಶುಭಾಶಯವನ್ನು ಕೋರುತ್ತಾರೆ.
ನಗರ ಪ್ರದೇಶದಲ್ಲಿ ಮನೆ ಮನೆಗಳಲ್ಲಿ ಬೇವು-ಬೆಲ್ಲ ಹಂಚಿ ವರ್ಷದ ಕಷ್ಟಗಳನ್ನು ಮರೆತು ಮುಂದೆ ಒಳ್ಳೆಯದಾಗಲಿ ಎಂದು ಶುಭ ಕೋರಲಾಗುತ್ತದೆ. ಹಬ್ಬದ ಮತ್ತೊಂದು ವಿಶೇಷತೆ ಎಂದರೆ ಹಬ್ಬದ ದಿನದಂದು ಮನೆಯಲ್ಲಿ ಹಬ್ಬದ ಅಡುಗೆ ಮಾಡಿ ದೇವರಿದೆ ನೈವೇದ್ಯೆ ಇಟ್ಟು ಸಂಭ್ರಮಿಸಲಾಗುತ್ತದೆ.
 ಇತ್ತೀಚೆಗೆ ಹಬ್ಬಗಳ ಸೊಗಡು ನಶಿಸಿ ಹೋಗುತ್ತಿದ್ದು, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹಬ್ಬದ ಸೊಗಡು ದಿನೇ ದಿನೇ ಕಡಿಮೆಯಾಗುತ್ತಿದೆ. ಜನರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ, ದುಡಿಮೆ ಹಾಗೂ ಸಂಪಾದನನೆಯಲ್ಲಿ ಲೀನವಾಗಿ ಸಂಪ್ರದಾಯ, ಆಚಾರ, ವಿಚಾರಗಳಿಗೆ ಅಷ್ಟಾಗಿ ಪ್ರಾಮುಖ್ಯತೆ ನೀಡುತ್ತಿಲ್ಲ.
ಹಬ್ಬದ ಹಿನ್ನೆಲೆಯಲ್ಲಿ ಹಳದಿ ಸೇವಂತಿಗೆ, ಬಣ್ಣದ ಸೇವಂತಿಗೆ, ಮಲ್ಲಿಗೆ ಹೂವು, ಕಾಕಡ ಹೂವು, ಕನಕಾಂಬರ ಬೆಲೆ ಗಗನಕ್ಕೇರಿದೆ. ಬೇವು ಒಂದು ಕಟ್ಟಿಗೆ 5 ರು. ಇದ್ದದ್ದು 10 ರು. ಆಗಿದೆ. ಮಾವು, ಸೊಪ್ಪು ಬೆಲೆ ಹೆಚ್ಚಾಗಿದೆ. ಸಾರ್ವಜನಿಕರು ವಿಧಿ ಇಲ್ಲದೆ ಅಗತ್ಯವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.
ಹಿಂದೆ ಹಣ್ಣುಗಳ ಬೆಲೆ ದುಬಾರಿಯಾಗಿದ್ದು ಕೊಳ್ಳುವವರ ಸಂಖ್ಯೆ ಕಡಿಮೆ ಇದ್ದರು. ಆಗ ತರಕಾರಿಯ ಬೆಲೆಗಳು ಕೊಂಚ ಕಡಿಮೆ ಇದ್ದವು. ಸೇಬು, ದ್ರಾಕ್ಷಿ,  ಕಿತ್ತಲೆ, ಸಪೋಟ, ಮೋಸಂಬಿ, ಕಿತ್ತಲೆ, ಕಲ್ಲಂಗರಿ ಹಣ್ಣಿನ ದರ ಏರಿಕೆಯಾಗಿದೆ.
ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಏರಿಕೆಯಾಗಿದ್ದರು ಜನತೆ ಬೆಲೆಯನ್ನು ಲೆಕ್ಕಿಸದೆ ಖರೀದಿಯಲ್ಲಿ ನಿರತರಾಗದ್ದು, ಯುಗಾದಿ ಹಬ್ಬದ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.