ಹಾಸನ

ಜವರೇಗೌಡಗೆ ಟಿಕೆಟ್-ಆಗ್ರಹ

Published On :

ಅರಸೀಕೆರೆ: ಮೂರ್ನಾಲ್ಕು  ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿ ಕೊಂಡಿರುವ ರಾಜ್ಯ ಸಭಾ ಮಾಜಿ ಸದಸ್ಯ ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಚ್.ಕೆ.ಜವರೇಗೌಡರಿಗೆ ಬೇಲೂರು ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ನೀಡಬೇಕೆಂದು ಜಾವಗಲ್ ಹೋಬಳಿ ಜೆಡಿಎಸ್ ಕಾರ್ಯಕರ್ತರು,ಅಭಿಮಾನಿಗಳು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಎಚ್.ಡಿ.ರೇವಣ್ಣರನ್ನು ಒತ್ತಾಯಿಸಿದ್ದಾರೆ.
  ಮೀಸಲು ಕ್ಷೇತ್ರ ಬದಲಾದ ನಂತರ ಪಕ್ಷ ಸಂಘಟನೆಯಲ್ಲಿ ಜವರೇಗೌಡರು ನಿರಂತರವಾಗಿ ಶ್ರಮಿಸತೊಡಗಿದ್ದಾರೆ. ಎಚ್.ಕೆ.ಕುಮಾರಸ್ವಾಮಿ ಸಕಲೇಶಪುರ ಕ್ಷೇತ್ರಕ್ಕೆ ತೆರಳಿದ ಮೇಲೆ ಪಕ್ಷ ಸಂಘಟನೆಯ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಅವರಿಗೆ ಟಿಕೆಟ್ ನೀಡಲು ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ.
   ಎಲ್ಲ ಜನಾಂಗದವರ ವಿಶ್ವಾಸಗಳಿಸುವಲ್ಲಿ ಜವರೇಗೌಡರು ಸಫಲರಾಗಿದ್ದಾರೆ. ಕಾರ್ಯಕರ್ತರ ನಾಡಿ ಮಿಡಿತ ಅರಿತಿರುವ ವ್ಯಕ್ತಿಗೆ ಅವಕಾಶ ದೊರೆತಲ್ಲಿ ಗೆಲುವು ಸಾಧ್ಯ ಎಂದು ವೀರಶೈವ ಮುಖಂಡ  ಮಾದನಹಳ್ಳಿ ರವಿಕುಮಾರ್ ಹಾಗೂ ವಕೀಲ ಸಿದ್ದಮಲ್ಲಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗುರುವಂದನಾ ಕಾರ್ಯಕ್ರಮ ನಾಳೆ
ಅರಸೀಕೆರೆ:
ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲೆ ಆವರಣದಲ್ಲಿ ಏ.14 ರಂದು ಬೆಳಗ್ಗೆ 10ಕ್ಕೆ ತಾಲೂಕು ವಾಲ್ಮೀಕಿ ನಾಯಕ ಮಹಾಸಭಾದಿಂದ ಗುರುವಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವಾಲ್ಮೀಕಿ ಮಹಾಸಭಾ ತಾಲೂಕುಅಧ್ಯಕ್ಷ ಟಿ.ಜಿ.ಬಸವರಾಜು ಅವರುತಿಳಿಸಿದ್ದಾರೆ.
  ಅಂದು ಸಮಾಜದ ಜಗದ್ಗುರು ಪ್ರಸನ್ನಾನಂದ ಸ್ವಾಮೀಜಿಗೆ ಗುರುವಂದನೆ, ಅರಸೀಕೆರೆ ವಾಲ್ಮೀಕಿ ಸಮಾಜ ಸಂಘ ಉದ್ಘಾಟನಾ ಕಾರ್ಯಕ್ರಮ ಹಾಗೂ ಸಮಾವೇಶ ಏರ್ಪಡಿಸಲಾಗಿದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರು ಆಗಮಿಸುತ್ತಿದ್ದು, ತಾಲೂಕಿನ ವಾಲ್ಮೀಕಿ ಸಮುದಾಯ ಸೇರಿದಂತೆ ಇತರೆ ಎಲ್ಲಾ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ ಕೊಡಬೇಕೆಂದು ಮನವಿ ಮಾಡಿದ್ದಾರೆ.
 ಮುಖಂಡ ಚಲುವನಹಳ್ಳಿ ಶೇಖರಪ್ಪ, ಕೆಲ್ಲೆಂಗೆರೆ ಗಿರೀಶ್, ಕೃಷ್ಣಮೂರ್ತಿ, ರಮೇಶ್, ಧನ್‌ಪಾಲ್, ರಂಗನಾಯಕ, ಯೋಗೀಶ್ ಇನ್ನಿತರರು ಇದ್ದರು.

ಚರ್ಚಾ ಸ್ಪರ್ಧೆಉದ್ಘಾಟನೆ
ಚನ್ನರಾಯಪಟ್ಟಣ:
ಮನುಷ್ಯ ಆರ್ಥಿಕ, ಶೈಕ್ಷಣಿಕವಾಗಿ ಸಬಲನಾಗುತ್ತಿದ್ದು ಅದೇ ನೈತಿಕವಾಗಿ, ಸಾಂಸ್ಕೃತಿಕವಾಗಿ ಆಳವಾದ ಪ್ರಪಾತಕ್ಕೆ ಬೀಳುತ್ತಿದ್ದಾನೆ ಎಂದು ಹಾಸನ ಮಹಿಳಾ ಕಾಲೇಜು ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಕೆ. ಜಿ. ಕವಿತ ವಿಷಾದಿಸಿದರು.   ಅವರು ಪಟ್ಟಣದ ಸರ್ಕಾರಿ ಪದವಿ ಕಾಲೇಜು ಆಯೋಜಿಸಿದ್ದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆ, ಭಾವಗೀತೆ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
  ಹೆಣ್ಣು ಬಲವಾಗಿ ನಿಂತರೆ ಕುಟುಂಬದ ಏಳ್ಗೆಯಾಗುತ್ತದೆ. ಹೆಣ್ಣು ಆತ್ಮವಿಶ್ವಾಸದ ಪ್ರತೀಕ. ವಸ್ತ್ರಸಂಹಿತೆಗೂ ಅತ್ಯಾಚಾರಕ್ಕೂ ಸಂಬಂಧ ಇಲ್ಲ, ಶಿಕ್ಷೆ ಇಲ್ಲದ ಶಿಕ್ಷಣದಿಂದ ನೈತಿಕತೆ ಕುಸಿದಿದೆ ಎಂದು ವ್ಯಾಖ್ಯಾನಿಸಿದರು. ಪ್ರಾಂಶುಪಾಲರಾದ ಪ್ರೊ. ಎಂ. ಕೆ. ಉಮಾನಾಥ್, ಪ್ರೊ. ಗುರಪ್ಪ, ಸಹ ಪ್ರಾಧ್ಯಾಪಕರಾದ ಪ್ರೊ. ಮಲ್ಲಯ್ಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಎನ್. ಲೊಕೇಶ್ ಇದ್ದರು. ಸೌಮ್ಯ ಪ್ರಾರ್ಥಿಸಿದರು, ಲೋಕೇಶ್ ಸ್ವಾಗತಿಸಿದರು.

ಬಿಸಿಯೂಟ: ಬಿಇಓ ಸೂಚನೆ
ಅರಕಲಗೂಡು:
ತಾಲೂಕು ಬರಗಾಲ ಪೀಡಿತ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಶಾಲೆಗಳಿಗೆ ರಜೆ ಇದ್ದರೂ ಬಿಸಿಯೂಟ ಕಾರ್ಯಕ್ರಮವನ್ನು ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳಲ್ಲಿ ಮುಂದುವರೆಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇವಣ್ಣ ಅವರು ತಾಲೂಕಿನ ಎಲ್ಲಾ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.