ವೀರಭದ್ರ, ಅಣ್ಣಪ್ಪ ಕೆಂಡೋತ್ಸವ
ಕನ್ನಡಪ್ರಭ ವಾರ್ತೆ , ಹಾಸನ , ಏ.12
ಯುಗಾದಿ ಹಬ್ಬದ ಅಂಗವಾಗಿ ನಗರದ ಸಮೀಪ ಗುಂಡೇಗೌಡನಕೊಪ್ಪಲು ಉದ್ಭವ ಗಣಪತಿ ದೇವಾಲಯದವರೆಗೂ ಶ್ರೀ ಶನೇಶ್ವರ, ರೇಣುಕದೇವಿ, ವೀರಭದ್ರ, ಅಣ್ಣಪ್ಪ ದೇವರುಗಳ ಉತ್ಸವ ನಡೆಯಿತು.
ಶುಕ್ರವಾರ ಬೆಳಗ್ಗೆ 6 ರಲ್ಲಿ ಉದ್ಭವ ಗಣಪತಿ ದೇವಸ್ಥಾನದ ಹತ್ತಿರ ಕೆಂಡಕೊಂಡ ನಡೆಯಿತು. ಮೊದಲು ದೇವರನ್ನು ಹೊತ್ತವರು ಕೆಂಡದಲ್ಲಿ ನಡೆದರೆ ನಂತರ ಭಕ್ತಾಧಿಗಳು ಸಾಲು ಸಾಲಾಗಿ ಕೆಂಡದಲ್ಲಿ ನಡೆದರು. 101 ಎಡೆ ಸೇವೆ ಹಾಗೂ ದೂಪದ ಸೇವೆ ಹಮ್ಮಿಕೊಂಡಿದ್ದರು. ನಂತರ ಮಹಾ ಮಂಗಳಾರತಿ ನಡೆಯಿತು. ಗುಂಡೇಗೌಡನಕೊಪ್ಪಲು, ಬಟ್ಲರ್ ಕೊಪ್ಪಲು, ವಿದ್ಯಾನಗರ, ವಿವೇಕನಗರ, ಗೌರಿಕೊಪ್ಪಲಿನ ಭಕ್ತರು ಆಗಮಿಸಿದ್ದರು. ಶನಿದೇವಸ್ಥಾನದ ಅಧ್ಯಕ್ಷ ಜಿ.ಎನ್. ನಂಜಪ್ಪ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

