167.58 ಕೋಟಿ ತಂಬಾಕು ವಹಿವಾಟು
ಕ.ಪ್ರ. ವಾರ್ತೆ ರಾಮನಾಥಪುರ ಏ.13
ಇಲ್ಲಿನ ತಂಬಾಕು ಹರಾಜು ಮಾರುಕಟ್ಟೆಯ ಎರಡು ಹರಾಜು ಮಾರುಕಟ್ಟೆಗಳಲ್ಲಿ 167.58 ಕೋಟಿ ರು. ವಹಿವಾಟು ನಡೆದಿದೆ. ಪ್ಲಾಟ್ಫಾರಂ 7 ಹಾಗೂ 63 ಎರಡು ಮಾರುಕಟ್ಟೆಗಳಲ್ಲಿ ಕಳೆದ 2012 ರ ಸೆಪ್ಟಂಬರ್ 7 ರಿಂದ ತಂಬಾಕು ಹರಾಜು ಪ್ರಕ್ರಿಯೆ ಆರಂಭಗೊಂಡಿತು.
ಇದುವರೆಗೆ ಎರಡು ಮಾರುಕಟ್ಟೆಗಳಿಂದಲೂ ಸುಮಾರು 145 ಲಕ್ಷ 43 ಸಾವಿರ 749 ಕೆ.ಜಿ. ತಂಬಾಕಿಗೆ 115.60 ರೂ ಸರಾಸರಿ ಬೆಲೆ ಸಿಗುತ್ತಿದೆ. ಪ್ರತಿದಿನ 50 ರಿಂದ 150 ಕೆ.ಜಿ. ಒಳಗೊಂಡ ಒಂದು ಬೇಲ್ ಪ್ರಕಾರ ಎರಡು ಹರಾಜು ಕಟ್ಟೆಗಳಿಂದ 1500 ರಿಂದ 1800 ಕ್ಕೂ ಹೆಚ್ಚು ಬೇಲ್ ತಂಬಾಕು ಮಾರುಕಟ್ಟೆಗೆ ಬರುತ್ತಿವೆ. ಕನಿಷ್ಠ ದರ್ಜೆಯ ತಂಬಾಕಿಗೆ 70 ರು. ನಿಂದ ಪ್ರಾರಂಭವಾಗಿ ಗರಿಷ್ಠ 152.60 ರು. ದೊರೆಯುತ್ತಿದೆ.
ಪ್ರಸಕ್ತ ಸಾಲಿನ ಮಾರುಕಟ್ಟೆಯಲ್ಲಿ ಕೆಲವೇ ತಂಬಾಕು ಬೆಲ್ಗೆ ಉತ್ತಮ ದರ ಕೆ.ಜಿ.ಗೆ 120 ರಿಂದ 152.60 ಪೈಸೆ ದೊರೆತಿದ್ದರೆ, ಎರಡನೇ ದರ್ಜೆ ಹಾಗೂ ತರಗಲು ಸೊಪ್ಪಿಗೆ ಹೇಳಿ ಕೊಳ್ಳುವ ಬೆಲೆ ಸಿಗಲಿಲ್ಲ. ಇದರ ವಿರುದ್ಧ ಬೆಳೆಗಾರರು ಹರಾಜು ಮಾರುಕಟ್ಟೆಯಲ್ಲಿ ಪ್ರತಿಭಟನೆ, ಹೋರಾಟ ನಡೆಸಿದರೂ ಪ್ರಯೋಜನ ವಾಗಲಿಲ್ಲ. ಕೊನೆಯ ತನಕವು ಬೆಲೆ ನಿರೀಕ್ಷೆಯಲ್ಲಿ ರೈತರು ಇದ್ದರು.
ತಂಬಾಕಿನ ವ್ಯವಸಾಯಕ್ಕೆ ಮಾಡಿರುವ ಬ್ಯಾಂಕ್, ಕೈ ಸಾಲ ಹಾಗೂ ಮನೆಯಲ್ಲಿರುವ ಆಭರಣಗಳ ಮೇಲಿನ ಸಾಲ ತೀರಿಸುವ ಚಿಂತೆಯಲ್ಲಿ ಶೇ.50 ರಷ್ಟು ಬೆಳೆಗಾರರು ಮುಳುಗಿದ್ದಾರೆ. ಇದೇ ಕಾರಣಕ್ಕೆ ಮೂರು ನಾಲ್ಕು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಉಂಟು.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ 2020ರ ವೇಳೆಗೆ ಹಂತ ಹಂತವಾಗಿ ತಂಬಾಕು ಬೆಳೆ ನಿಷೇಧ ಮಾಡುವ ಪ್ರಸ್ತಾಪ ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಕೇಂದ್ರ ತಂಬಾಕು ಮಂಡಳಿ ಬೇರೆ ಪರ್ಯಾಯ ಮಾರ್ಗವನ್ನು ರೈತರು ಕೈಗೊಳ್ಳುವುದು ಸೂಕ್ತ ಎಂಬ ಸಂದೇಶವನ್ನು ನೀಡಿದೆ.
ಇದನ್ನು ಮನಗಂಡಿರುವ ತಂಬಾಕು ಬೆಳೆಗಾರರು ಕಡಿಮೆ ಪ್ರದೇಶದಲ್ಲಿ ಬೆಳೆ ಕೈಗೊಂಡು, ಇತರೆ ಬೆಳೆ ಕಡೆ ಆಸಕ್ತಿ ಹೊಂದಿದರೆ ಅನುಕೂಲವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

