ಕರಪತ್ರ ಮೂಲಕ ಅಪ್ರಪಚಾರ
ಕನ್ನಡಪ್ರಭ ವಾರ್ತೆ ಹಾಸನ ಏ 18
ದುರುದ್ದೇಶದಿಂದ ನನ್ನ ವಿರುದ್ಧ ಜಾತಿ ಹೆಸರಿನಲ್ಲಿ ಅಪಪ್ರಚಾರ ಹಾಗೂ ಸುಳ್ಳು ಕರಪತ್ರ ಮುದ್ರಿಸಿ ಕ್ಷೇತ್ರದ ಜನರದಲ್ಲಿ ಅಪಪ್ರಚಾರ ಉಂಟು ಮಾಡುತ್ತಿರುವವರ ವಿರುದ್ಧ ಚುನಾವಣಾ ಆಯೋಗ ಹಾಗೂ ಪೊಲೀಸ ಇಲಾಖೆ ಕಾನೂನು ಕ್ರಮಕೈಗೊಳ್ಳುವಂತೆ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾಸಕ ಎಚ್.ಎಸ್.ಪ್ರಕಾಶ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.24ರಂದು ತಾಲೂಕಿನ ಕಸಬಾ ಹೋಬಳಿಯ ಹಾಚಗೌಡನಹಳ್ಳಿ, ಕೋರಹಳ್ಳಿ, ಉದ್ದೂರರು, ಹೂವನಹಳ್ಳಿ, ಹೂವಿನಹಳ್ಳಿಕಾವಲು, ಮಣಚನಹಳ್ಳಿ ಗ್ರಾಮಗಳು ಹಾಸನ ನಗರಕ್ಕೆ ಹೊಂದಿಕೊಂಡಂತಿದ್ದು, ಈ ಗ್ರಾಮಗಳ ಜಮೀನುಗಳು ವಸತಿ ನಿವೇಶನಗಳಾಗಿ ಅತೀ ವೇಗವಾಗಿ ಪರಿವರ್ತನೆ ಹೊಂದುತ್ತಿವೆ ಹಾಗೂ ಇವುಗಳ ಬೆಲೆಗಳು ಗಗನಕ್ಕೆ ಏರುತ್ತಿವೆ. ಬಡವರು ಹಾಗೂ ಮಧ್ಯಮವರ್ಗದವರು ಈ ನಿವೇಶನ ಖರೀದಿಸಲು ಕಷ್ಟವಾಗುತ್ತಿದೆ.
ಹೀಗೆ ಪರಿವರ್ತನೆ ಹೊಂದಿದ ಸದರಿ ನಿವೇಶನಗಳು ಸಮರ್ಪಕವಾದ ರಸ್ತೆ ಹಾಗೂ ಚರಂಡಿ ಇಲ್ಲದೆ ವಿರೂಪವಾಗಿದೆ. ಆದ್ದರಿಂದ ಹಾಸನ ನಗರವನ್ನು ಸುಂದರ ನಗರವನ್ನಾಗಿಸುವ ನಿಟ್ಟಿನಲ್ಲಿ ಉತ್ತಮ ಬಡಾವಣೆಗಳನ್ನು ನಿರ್ಮಿಸಬೇಕಾದ ಸುದುದ್ದೇಶದಿಂದ ಈ ಗ್ರಾಮಗಳ ಜಮೀನುಗಳಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಬಡಾವಣೆ ನಿರ್ಮಿಸುವ ಸಲುವಾಗಿ 750 ಎಕರೆ ಪ್ರದೇಶ ಭೂಸ್ವಾದೀನ ಪಡಿಸಿಕೊಳ್ಳಲು ನಿರ್ದೇಶನ ನೀಡಬೇಕೆಂದು ನಾನು ಮುಖ್ಯಮಂತ್ರಿಗೆ ಪತ್ರ ಬರೆದಿರುವಂತೆ ಸುಳ್ಳು ಪತ್ರ ಮುದ್ರಿಸಿ ಅಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮುದ್ರಕರ ವಿಳಾಸ ಇಲ್ಲದ ಕರಪತ್ರ: ಅಲ್ಲದೆ ದಾಸ ಒಕ್ಕಲಿಗ ಶಾಸಕ ಎಚ್.ಎಸ್.ಪ್ರಕಾಶ್ಗೆ ಮತ ಏಕೆ ನೀಡಬೇಕು. ಯಾವುದೇ ವಿಳಾಸ ಹಾಗೂ ಮುದ್ರಕರ ವಿಳಾಸ ಇಲ್ಲದ ಕರಪತ್ರವನ್ನು ಕ್ಷೇತ್ರದಲ್ಲಿ ಹಂಚಲಾಗಿದೆ.
ಕೆಲವು ದಿನಗಳ ಹಿಂದೆ ಈ ಜಾತಿ ಆಧಾರಿತ ಅಪಪ್ರಚಾರ ಕರಪತ್ರಗಳನ್ನು ನನ್ನ ವಿರುದ್ಧ ಕಿಡಿಗೇಡಿಗಳು ಹಂಚಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 13 ವರ್ಷಗಳ ಇವರ ಆಡಳಿತದಲ್ಲಿ ಯಾವುದೇ ರೀತಿಯಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ಆರೋಪಿಸಿದರು. ಎಚ್.ಎಸ್.ಪ್ರಕಾಶ್ಗೆ ದಾಸ ಒಕ್ಕಲಿಗರು ಮತ ಹಾಕದೆ ಅವರ ವಿರುದ್ಧ ಧ್ವನಿ ಎತ್ತುವ ಕಾರ್ಯ ಮಾಡಬೇಕು ಎಂದು ಅಪಪ್ರಚಾರ ಮಾಡಲಾಗಿದೆ. ಆದ್ದರಿಂದ ಈ ವಿರುದ್ಧ ಚುನಾವಣಾ ಆಯೋಗ ಹಾಗೂ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಕೈಗೊಂಡು ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವಂತೆ ಒತ್ತಾಯಿಸಿದರು.
ಕಣದಿಂದ ಹಿಂದಕ್ಕೆ: ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿರುವವರು ಕರಪತ್ರದಲ್ಲಿ ಮುದ್ರಿಸಿರುವುದನ್ನು ನಿಜ ಎಂದು ದಾಖಲೆ ಸಮೇತ ಸಾಬೀತು ಪಡಿಸಿದರೆ ನಾನು ಒಂದು ಕಣದಲ್ಲಿ ಉಳಿಯುವುದಿಲ್ಲ ಎಂದು ಸವಾಲು ಹಾಕಿದ್ದಾರೆ.
ಸತ್ಯಕ್ಕೆ ದೂರವಾದ ಆರೋಪಗಳನ್ನು ನನ್ನ ವಿರುದ್ಧ ಬೇಕು ಅಂತಾನೆ ಕಣದಲ್ಲಿ ಇರುವ ಅಭ್ಯರ್ಥಿಯೇ ಈ ದುಷ್ಕೃತ್ಯ ಎಸಗಿದ್ದಾರೆ. ಅದು ಯಾರು ಅಂತ ಸ್ವಷ್ಟವಾದ ಮಾಹಿತಿ ಇಲ್ಲ. ಆದ್ದರಿಂದ ಆಯೋಗ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ಕೊನೆ ಚುನಾವಣೆ: ಈ ಸಲದ ವಿಧಾನಸಭೆ ಚುನಾವಣೆ ನನಗೆ ಕೊನೆಯದಾಗಿದ್ದು, ಮುಂದೆ ವಿಧಾನಸಭೆಗೆ ಸ್ಪರ್ಧಿಸುವುದಿಲ್ಲ. ಹಾಸನ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೂ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ.
ಪಕ್ಷಕ್ಕಾಗಿ ದುಡಿಯುವುದಾಗಿ ಹೇಳಿದ ಅವರು, ಆಕಾಂಕ್ಷಿಗಳು ಕ್ಷೇತ್ರದಲ್ಲಿ ಹೆಚ್ಚಾಗಿರುವುದರಿಂದ ಎಲ್ಲ ನಾಯಕರನ್ನು ಗಣನೆಗೆ ತೆಗೆದುಕೊಂಡು ಬಿ ಫಾರಂ ನನಗೆ ನೀಡಲು ಸ್ವಲ್ಪ ತಡವಾಯಿತು ಎಂದು ಹೇಳಿದರು ಎಂದು ಸ್ಪಷ್ಟಪಡಿಸಿದರು.
ಜವರೇಗೌಡರು ನಮ್ಮೊಂದಿಗೆ ಇರಬೇಕು: ಜಿಲ್ಲಾಧ್ಯಕ್ಷ ಎಚ್.ಕೆ.ಜವರೇಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ನನಗೆ ಯಾವುದೇ ರೀತಿ ಅಧಿಕೃತ ಮಾಹಿತಿ ಇಲ್ಲ.
ಅವರು ರಾಜಿನಾಮೆ ನೀಡುವ ನಿರ್ಧಾರದಿಂದ ಹಿಂದಕ್ಕೆ ಸರಿದು ನಮ್ಮೊಂದಿಗೆ ಪಕ್ಷದಲ್ಲಿಯೇ ಉಳಿಯಬೇಕು ಎಂದು ಆಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

