ಸಾಲ ಬಾಧೆ; ರೈತ ಆತ್ಮಹತ್ಯೆ
ಅರಕಲಗೂಡು: ಸಾಲದ ಹೊರೆ ತಾಳಲಾರದೇ ರೈತ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಕೊಣನೂರು ಹೋಬಳಿ, ಕಬ್ಬಳಿಗೆರೆ ಗ್ರಾಮದಲ್ಲಿ ನಡೆದಿದೆ. ರೈತ ರಮೇಶ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸಾಲ ಕೊಟ್ಟವರ ಒತ್ತಡಕ್ಕೆ ಹೆದರಿ ಮನೆಯೊಳಗೆ ರಾತ್ರಿ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಮೇಶ ಸುಮಾರು 4 ಲಕ್ಷ ಸಾಲ ಮಾಡಿದ್ದು, ಹುಲಿಕಲಲ್ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ನಲ್ಲಿ ಬೆಳೆ ಸಾಲವಾಗಿ 50 ಸಾವಿರ ರೂಗಳನ್ನು ಪಡೆದಿದ್ದು, ಇದಕ್ಕೆ ಸಂಭಂದಿಸಿದಂತೆ ಬ್ಯಾಂಕ್ ನೋಟಿಸ್ ನೀಡಿತ್ತು ಎಂದು ತಿಳಿದು ಬಂದಿದೆ. ಎಲ್ಲಾ ಸಾಲವನ್ನು ತಂಬಾಕು ಮತ್ತು ಭತ್ತದ ಬೆಳೆಯನ್ನು ಪಡೆದ ನಂತರ ಅವುಗಳನ್ನು ಮಾರಾಟ ಮಾಡಿ ಸಾಲ ತೀರಿಸಬೇಕೆಂದುಕೊಂಡಿದ್ದರು.
ಕೈಸಾಲಗಾರರಿಗೆ ನೀಡಿದ್ದ ಚೆಕ್ ಅವಧಿ ಮುಗಿದಿದ್ದರಿಂದ ಸಾಲ ಕೊಟ್ಟವರು ನ್ಯಾಯಾಲಯದ ಮೆಟ್ಟಿಲೇರಿ ದಾವೆ ಹೂಡಿದ್ದರು.
ನ್ಯಾಯಾಲಯದಿಂದ ಬಂದ ಸಮನ್ಸ್: ಕಳೆದ ವಾರ ಕೊಣನೂರು ಪೊಲೀಸರು ಮನೆಗೆ ಬಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಿದ್ದರು. ಅಂದಿನಿಂದ ಮನೆಯಲ್ಲಿ ಯಾರೊಡನೆ ಮಾತನಾಡದೆ ಮಂಕಾಗಿದ್ದ ರಮೇಶ ಗುರುವಾರ ತನ್ನ ಹೆಂಡತಿ ಸುನಂದರವರನ್ನ ಮಗಳ ಮನೆಗೆ ಕಳುಹಿಸಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯೊಳಗೆ ಹಗ್ಗದಿಂದ ನೇಣು ಬಿಗಿದುಕೊಂಡಿರುವ ಘಟನೆ ನಡೆದಿದೆ. ಪ್ರಕರಣವನ್ನು ಕೊಣನೂರು ಪೊಲೀಸರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಕೊಣನೂರು ಹೋಬಳಿ ರೆವಿನ್ಯೂ ಇನ್ಸ್ಪೆಕ್ಟರ್ ಸೋಮಣ್ಣ ಸ್ಥಳ ಪರಿಶೀಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

