ಕ್ರಿಕೆಟ್: ರೋಟರಿ ತಂಡಕ್ಕೆ ಜಯ
ಅರಸೀಕೆರೆ: ತಾಲೂಕು ಪತ್ರಕರ್ತರ ಸಂಘ ಮತ್ತು ರೋಟರಿ ಕ್ಲಬ್ ನಡುವೆ ಪತ್ರಿಕಾ ದಿನಾಚರಣೆ ಅಂಗವಾಗಿ ನಡೆದ ಸೌಹಾರ್ಧ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪತ್ರಕರ್ತರ ತಂಡವನ್ನು ಮಣಿಸುವ ಮೂಲಕ ರೋಟರಿ ತಂಡವು ರೋಚಕ ಜಯವನ್ನು ತನ್ನದಾಗಿಸಿಕೊಂಡಿತು. ಜೇನುಕಲ್ ಕ್ರೀಡಾಂಗಣದಲ್ಲಿ ಪತ್ರಕರ್ತರ ತಂಡ ಮತ್ತು ರೋಟರಿ ತಂಡಗಳ ನಡುವೆ ನಡೆದ ಸೌಹಾರ್ಧಯುತ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲಿಗೆ ಟಾಸ್ ಗೆದ್ದ ರೋಟರಿ ತಂಡ ಕ್ಷೇತ್ರ ರಕ್ಷಣೆಯನ್ನು ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಪತ್ರಕರ್ತರ ಸಂಘದ ಆನಂದ್ 40, ಶೇಖರ್ ಸಂಕೋಡನಹಳ್ಳಿ 16, ನವೀನ್ 15 ಗಳಿಸುವ ಮೂಲಕ ತಂಡ ನಿಗಧಿತ 10 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 84 ರನ್ಗಳನ್ನು ಕಲೆ ಹಾಕುವಲ್ಲಿ ಯಶಸ್ವಿಯಾಯಿತು. ನಂತರ ಬ್ಯಾಟಿಂಗ್ ತೆಗೆದುಕೊಂಡ ರೋಟರಿ ತಂಡ ಎನ್.ಜಿ.ಮಧು ಅಜೇಯ 50 ರನ್ಗಳಿಂದ ಕಡೆಯ 2 ಎಸೆತಗಳು ಬಾಕಿ ಇರುವಾಗಲೇ ರೋಚಕ ಜಯ ದಾಖಲಿಸಲು ಯಶಸ್ವಿಯಾಯಿತು. ಇದಕ್ಕೆ ಪತ್ರಕರ್ತರ ಸಂಘದ ಕಳಪೆ ಕ್ಷೇತ್ರ ರಕ್ಷಣೆ, ಬೋಲರ್ಗಳು ದುಬಾರಿಯಾಗಿದ್ದೇ ಸೋಲಿಗೆ ಪ್ರಮುಖ ಕಾರಣವಾಯಿತು. ಇದಕ್ಕೂ ಮುನ್ನ ರೋಟರಿ ತಂಡದ ನಾಯಕ ಪ್ರವೀಣ್ಕುಮಾರ್ ಬೋಲಿಂಗ್ಗೆ ಪತ್ರಕರ್ತರ ತಂಡ ನಾಯಕ ರಾಮಚಂದ್ರ ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.
ತರಬೇತಿ ಕಾರ್ಯಕ್ರಮ
ಚನ್ನರಾಯಪಟ್ಟಣ: ಹಾಸನದ ಕೃಷಿ ವಿಜ್ಞಾನ ಕೇಂದ್ರದಿಂದ ತಾಲೂಕಿನ ಗ್ಯಾರಳ್ಳಿ ಗ್ರಾಮದಲ್ಲಿ ರೈತರಿಗೆ ಸಮಗ್ರ ಕೃಷಿಯಲ್ಲಿ ಜೈವಿಕ ಇಂಧನ ಸಸಿಗಳ ಅಳವಡಿಕೆ ಬಗ್ಗೆ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಕೇಂದ್ರದ ವಿಜ್ಞಾನಿ ಡಾ ಎ.ಸಿ.ಗಿರೀಶ್ ಮಾತನಾಡಿ, ರೈತರು ಬಂಡವಾಳವಿಲ್ಲದೆ ಅಧಿಕ ಆದಾಯ ಪಡೆಯಲು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಅತ್ಯವಶ್ಯಕ ಹಾಗೂ ನಾನಾ ಬೆಳೆಗಳಲ್ಲಿ ಹೊಸ ತಳಿಗಳನ್ನು ಬಳಕೆಮಾಡುವುದರ ಬಗ್ಗೆ ತಿಳಿಸಿದರು. ಕೃಷಿಯಲ್ಲಿ ಜೈವಿಕ ಇಂಧನ ಸಸಿಗಳಾದ ಕಸಿ ಮಾಡಿದ ಹೊಂಗೆ, ಬೇವು, ಹಿಪ್ಪೆ ಹಾಗೂ ಸಿಮರೂಬ ಸಸಿಗಳನ್ನು ಬದುಗಳಲ್ಲಿ, ಬಂಜರು ಭೂಮಿಯಲ್ಲಿ ಹಾಗೂ ರಸ್ತೆ ಬದುಗಳಲ್ಲಿ ನೆಟ್ಟು ಹೆಚ್ಚಿನ ಆದಾಯ ಪಡೆಯಲು ಹಾಗೂ ಸಂಘ ರಚನೆ ಮಾಡಿಕೊಂಡು ಬೀಜ, ಎಣ್ಣೆಯ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಳ್ಳಲು ಸಲಹೆ ನೀಡಿದರು. ಗ್ರಾಮದ ಪ್ರಗತಿಪರ ರೈತ ರವೀಶ್, ಹನುಮಂತೇಗೌಡರು ರೈತರು ಭಾಗವಹಿಸಿದ್ದರು. ಕ್ಷೇತ್ರ ಸಹಾಯಕ ತಿರುಮಲ್ಲೇಶ್, ವೇಣು, ಕರಡೇವು ಮಂಜುನಾಥ ಇದ್ದರು. ಕಾರ್ಯಕ್ರಮದ ನಂತರ ಕೃಷಿ ವಿಜ್ಞಾನ ಕೇಂದ್ರದವರು ರೈತರ ತಾಕುಗಳಿಗೆ ಭೇಟಿ ಕೊಟ್ಟು ಜೈವಿಕ ಇಂಧನ ಬೆಳೆ ನಿರ್ವಹಣೆ ಬಗ್ಗೆ ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

