ಹಾಸನ

ಕೆ.ಟಿ.ಪ್ರಕಾಶ್ ದಾಸಪ್ಪ ನಿಧನ

Published On :

ಹಾಸನ: ನಗರಸಭೆ ಮಾಜಿ ಅಧ್ಯಕ್ಷ, ಹಿರಿಯ ರಾಜಕಾರಣಿ  ಕೆ.ಟಿ. ಪ್ರಕಾಶ್ ದಾಸಪ್ಪ ಸೋಮವಾರ ನಿಧನರಾದರು.ನಗರದ ಹಳೆ ಮಟನ್ ಮಾರ್ಕೆಟ್ ರಸ್ತೆ ಸಮೀಪ ನಿವಾಸಿಯಾಗಿದ್ದ ಪ್ರಕಾಶ್ದಾಸಪ್ಪನಗರಸಭೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇತ್ತೀಚೆಗೆ ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು.
ಕೆಲದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ನಂತರ ಅವರನ್ನು ಹಾಸನದ ಖಾಸಗಿ ಆಸ್ವತ್ರೆಗೆ ಕರೆ ತರಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಪ್ರಕಾಶ್ ದಾಸಪ್ಪ ನಿಧನಕ್ಕೆ ಶಾಸಕ ಎಚ್.ಎಸ್.ಪ್ರಕಾಶ್, ಕಾಂಗ್ರೆಸ್ ಮುಖಂಡ  ಎಚ್.ಕೆ.ಜವರೇಗೌಡ, ವಿಧಾನಪರಿಷತ್ ಸದಸ್ಯ  ಪಟೇಲ್ ಶಿವರಾಂ ಮತ್ತಿತರರು ಸಂತಾಪ ಸೂಚಿಸಿದ್ದಾರೆ.


ಅಕ್ಕನಹಳ್ಳಿ ಶಾಲೆಗೆ  ಚಾಂಪಿಯನ್ಶಿಪ್
ನುಗ್ಗೇಹಳ್ಳಿ: ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಅಕ್ಕನಹಳ್ಳಿ ಕ್ರಾಸ್ನಲ್ಲಿ ಇತ್ತೀಚೆಗೆ ನಡೆದ ನುಗ್ಗೇಹಳ್ಳಿ ಹೋಬಳಿ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ ಅಕ್ಕನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ಸತತ 5ನೇ ಬಾರಿ ಗ್ರೂಪ್ ಚಾಂಪಿಯ ಯನ್ಷಿಪ್ ಪಟ್ಟ ದೊರೆತಿದೆ. ಬಾಲಕಿಯರ ವಿಭಾಗದಲ್ಲಿ ಮೊನಿಕಾ- 400 ಮೀ. ಓಟ ಪ್ರಥಮ, ವಾಣಿ -200 ಮೀ. ಓಟ ದ್ವಿತೀಯ, ಜಯಲಕ್ಷ್ಮಿ-ಚಕ್ರ ಎಸೆತ ದ್ವಿತೀಯ, ಆಶಾ-ಉದ್ದ ಜಿಗಿತ ದ್ವಿತೀಯ, ಹರ್ಷಿತಾ- ಗುಂಡು ಎಸೆತ ತೃತೀಯ,  4 ್ಢ 100ಮೀ. ರಿಲೇ ಓಟದಲ್ಲಿ ಸೋನಾ, ಹರ್ಷಿತಾ, ವಾಣಿ, ಮೋನಿಕಾ, ಪ್ರಥಮ ಸ್ಥಾನ ಗಳಿಸಿದ್ದು ಹಾಗೂ ವಾಲಿಬಾಲ್ ದ್ವಿತೀಯ ಸ್ಥಾನ, ಕಬಡ್ಡಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.ಬಾಲಕರ ವಿಭಾಗದಲ್ಲಿ ಸುದೀಪ್ ಚಕ್ರ ಎಸೆತ ಪ್ರಥಮ, ಸಂಜು- ಉದ್ದ ಜಿಗಿತ ದ್ವಿತೀಯ, ಶರತ್ಕುಮಾರ್ 600 ಮೀಟರ್ ದ್ವಿತೀಯ, 4್ಢ 100ಮೀ. ರಿಲೇ ಓಟದಲ್ಲಿ ಕಾರ್ತಿಕ್, ರಾಜೇಶ್, ಸುದೀಪ್, ಸಂಜು ದ್ವಿತೀಯ ಸ್ಥಾನ ಗಳಿಸಿದ್ದು ಈ ವಿದ್ಯಾರ್ಥಿಗಳು ಗೆಲವು ಸಾಧಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಗೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳಿಗೆ  ಶಾಲಾ ಮುಖ್ಯ ಶಿಕ್ಷಕ ಡಿ.ಲಿಂಗಯ್ಯ, ದೈಹಿಕ ಶಿಕ್ಷಕರು ಮತ್ತು ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರು ಅಭಿನಂದಿಸಿದ್ದಾರೆ.
ಆಧಾರ್ ಕೇಂದ್ರ ಸ್ಥಾಪನೆಗೆ ಆಗ್ರಹ
ಹಾರನಹಳ್ಳಿ: ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್ಕಾರ್ಡ್ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಹಾರನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಧಾರ್ ನೋಂದಣಿ ಕೇಂದ್ರ ಆರಂಭಿಸುವಂತೆ ಹಾರನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಕೃಷ್ಣಪ್ಪ ಒತ್ತಾಯಿಸಿದ್ದಾರೆ.ಹಾರನಹಳ್ಳಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಾದ ಗುತ್ತಿನಕೆರೆ, ಮಾಕನಹಳ್ಳಿ, ಜಾಡಘಟ್ಟ, ಯರೇಹಳ್ಳಿ, ದೊಡ್ಡೇನಹಳ್ಳಿ, ಮಲದೇವಿಹಳ್ಳಿ, ಕನಕಂಚೇನಹಳ್ಳಿ, ಬಿ ತಾಂಡ್ಯ, ಯಳವಾರೆ ಹಾಗೂ ಇನ್ನು ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರಿಗೆ ಹಾರನಹಳ್ಳಿ ಕೇಂದ್ರ ಸ್ಥಾನವಾಗಿದ್ದು, ಶೀಘ್ರವಾಗಿ ಆಧಾರ್ ನೋಂದಣಿ ಕೇಂದ್ರವನ್ನು ಹಾರನಹಳ್ಳಿಯಲ್ಲಿ ಆರಂಭಿಸುವಂತೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತವನ್ನು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
'ಜಿಲ್ಲಾ ಮಟ್ಟದಲ್ಲಿ
 ಕೆರೆ ಅಭಿವೃದ್ಧಿ'
ಹಾಸನ: ಜಿಲ್ಲಾ ಮಟ್ಟದಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರಗಳ ರಚನೆ ಮಾಡಿ, ಸರ್ಕಾರಕ್ಕೆ ಸೇರಿದ ಎಲ್ಲಾ ಕೆರೆಗಳ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿದ್ದು, ಈ ವರ್ಷದಿಂದಲೇ ಜಾರಿಯಾಗಲಿದೆ ಎಂದು ಜಿ ಪಂ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ ತಿಳಿಸಿದ್ದಾರೆ.ಅವರು ಸೋಮವಾರ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ವಿಷಯತಿಳಿಸಿ, ಈ ಯೋಜನೆಯಡಿ ಜಿಲ್ಲೆಯಲ್ಲಿರುವ 4, 366 ಕೆರೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.ಹಾಸನ ಜಿಲ್ಲೆಯಲ್ಲಿ 2, 774 ಕೆರೆಗಳು ಒತ್ತುವರಿಯಾಗಿದ್ದು,  ಅವುಗಳ ಸರ್ವೆ ಕಾರ್ಯ ನಡೆಯುತ್ತಿದೆ. ಜಿಲ್ಲಾಧಿಕಾರಿ ಇದರ ಉಸ್ತುವಾರಿ ವಹಿಸಿದ್ದಾರೆ ಎಂದರು.ಅಭಿವೃದ್ಧಿಗೆ ಆಯ್ಕೆ ಮಾಡಿಕೊಳ್ಳುವ ಕೆರೆಯನ್ನು  ಸೆ. 5ರೊಳಗೆ ವಿಶೇಷ ಗ್ರಾಮ ಸಭೆ ನಡೆಸಿ ಆಯ್ಕೆ ಮಾಡಿಕೊಳ್ಳಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಬಿಡುಗಡೆ ಮಾಡುವ ಹಣವನ್ನು ಬಳಸಿಕೊಂಡು ಬಂಡ್ ಕಮಿಟಿ ಮೂಲಕ ಕೆರೆ ಸರ್ವೆ ಮಾಡಿ  ಬೌಂಡರಿ  ಗುರುತಿಸಲಾಗುವುದು. ಶೀಘ್ರವೇ ವಿಶೇಷ ಕ್ರಿಯಾ ಯೋಜನೆ ಸಿದ್ಧಪಡಿಸಿ ಕೆರೆಯ ಬದು ನಿರ್ಮಾಣ, ಹೂಳೆತ್ತುವುದು, ರಾಜಕಾಲುವೆ ನಿರ್ಮಾಣ, ಸ್ವಚ್ಛತೆ, ಗಿಡ ಗಂಟೆಗಳ ತೆರವು, ಮತ್ತಿತರ ಕಾಮಗಾರಿಗಳನ್ನು  ಅಳವಡಿಸಿಕೊಳ್ಳಲಾಗುವುದು ಎಂದರು.ಸೆ. 20ರೊಳಗೆ ಇದು ಸಿದ್ದವಾಗಿ 25ರೊಳಗೆ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ಪಡೆದುಕೊಳ್ಳಬೇಕು, ಅ. 2 ರಂದು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.