ರೋಟರಿಯಲ್ಲಿ ಒಆರ್ಎಸ್ ದಿನ
ಹಾಸನ: ರೋಟರಿ ಹಾಸನ್ ಮಿಡ್ಟೌನ್ ಸಂಸ್ಥೆ ವತಿಯಿಂದ ನಗರದ ಮಣಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ಒಆರ್ಎಸ್ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದೆ ಸಂದರ್ಭದಲ್ಲಿ ಮಕ್ಕಳ ತಜ್ಞ ಡಾ. ದಿನೇಶ್ ಕಬ್ಳಿಗೆರೆ ಒಆರ್ಎಸ್ ಜೀವ ಜಲದ ಮಹತ್ವದ ಬಗ್ಗೆ ತಿಳಿಸಿದರು. ಒಆರ್ಎಸ್ ಫಾರ್ಮುಲಾವನ್ನು 1961ರಲ್ಲಿ ರಾಬರ್ಟ್ ಕ್ರೇನ್ ಎಂಬ ವ್ಯಕ್ತಿ ಕಂಡು ಹಿಡಿದಿದ್ದು, 1971ರ ಬಾಂಗ್ಲಾ ಯುದ್ಧದಲ್ಲಿ ಹೆಚ್ಚಾಗಿ ಬಳಕೆಗೆ ಬಂದಿತು ಎಂದು ಅವರು ತಿಳಿಸಿದರು. ಅಲ್ಲಿಯವರೆಗೆ ವಾಂತಿ-ಭೇದಿ (ಅತಿಸಾರ)ಗೆ ರಕ್ತನಾಳಕ್ಕೆ ಗ್ಲೂಕೋಸ್ ನೀಡಲಾಗುತ್ತಿತ್ತು ಎಂದು ತಿಳಿಸಿದರು.
ಮಾತ್ರವಲ್ಲ, ಇದರಿಂದ ಯುದ್ಧ ಭೂಮಿಯ ಎಲ್ಲಾ ಕಡೆ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಒಆರ್ಎಸ್ ಜೀವಜಲವನ್ನು ಎಲ್ಲಾ ಕಡೆ ಬಳಸಬಹುದಾಗಿದ್ದರಿಂದ ನಂ. 1ಕಿಲ್ಲರ್ ರೋಗವಾಗಿದ್ದ ಅತಿಸಾರ ಭೇದಿಯನ್ನು ನಿಯಂತ್ರಿಸಲಾಯಿತು. ಸರಳವಾಗಿ ಮನೆಯಲ್ಲೇ ತಯಾರಿಸ ಬಹುದಾದ ಒಆರ್ಎಸ್ ಜೀವಜಲದ ಬಗ್ಗೆ ವಿವರವಾಗಿ ತಿಳಿಸಿದರು.
ಸಮಾರಂಭದಲ್ಲಿ ರೋಟರಿ ಮಿಡ್ಟೌನ್ ಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣ್, ಸದಸ್ಯ ಸುರೇಶ್, ಡಾ. ಸೌಮ್ಯಮಣಿ, ಡಾ ಜೆ.ಕೆ. ಯತೀಶ್ಕುಮಾರ್, ಡಾ. ಪೂರ್ಣಿಮಾ, ತಾಯಂದಿರು, ಸಾರ್ವಜನಿಕರು ಹಾಗೂ ಆಸ್ಪತ್ರೆ ಸಿಬ್ಬಂದಿ ಮತ್ತಿತರರು ಭಾಗವಹಿಸಿದ್ದರು. ಈ ವೇಳೆ ಭಾಗವಹಿಸಿದ್ದ ಎಲ್ಲರಿಗೂ ಒಆರ್ಎಸ್ ಜೀವಜಲವನ್ನು ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

