ಗ್ರಂಥಾಲಯ ಬರಿದಾಗದ ಜ್ಞಾನದ ಗಣಿ
ಹಾಸನ: ಗ್ರಂಥಾಲಯಗಳು ಮನಸ್ಸನ್ನು ವಿಕಾಸಗೊಳಿಸುವ ಜ್ಞಾನದೇಗುಲಗಳಿದ್ದಂತೆ ಹಾಗೂ ಅವು ಎಂದೂ ಬರಿದಾಗದ ಜ್ಞಾನದ ಗಣಿಗಳು ಎಂದು ಬೆಂಗಳೂರಿನ ಸ್ನಾತಕೋತ್ತರ ಕಾಲೇಜಿನ ಗ್ರಂಥಪಾಲಕ ಎಫ್.ಡಿ.ಗುರುರಾಜ್ ಅಭಿಪ್ರಾಯಪಟ್ಟರು.
ತಾಲೂಕಿನ ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ಜನ್ಮದಿನ ಹಾಗೂ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಮಾಹಿತಿ ತಂತ್ರಜ್ಞಾನ ಎಷ್ಟೇ ಬೆಳೆಯಲಿ, ಆ ಕ್ಷೇತ್ರಕ್ಕೆ ಮೂಲ ಸಂಪನ್ಮೂಲವೇ ಗ್ರಂಥಾಲಯಗಳು. ಅವುಗಳಿಂದ ಪಡೆಯುವ ಜ್ಞಾನಕ್ಕೆ ಬೆಲೆ ಕಟ್ಟಲಾಗದು. ಒಂದು ಪುಸ್ತಕ ಓದಿದಾಗ ಸಿಗುವ ಅನುಭವ ಕಂಪ್ಯೂಟರ್ ಮುಂದೆ ಕುಳಿತಾಗ ಸಿಗುವುದಿಲ್ಲ. ಗ್ರಂಥಾಲಯ, ದೇವಾಲಯ, ವಿದ್ಯಾಲಯ ಇವು ಮನುಷ್ಯನ ಜೀವನವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಗ್ರಂಥಾಲಯಗಳು ಯಾವುದೇ ಶೈಕ್ಷಣಿಕ ಸಂಸ್ಥೆಯ ಆತ್ಮವಿದ್ದಂತೆ. ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯ, ಶಾಂತಿಯನ್ನು ಅರಸುವುದಾದರೆ ಅದು ದೊರೆಯುವುದು ಗ್ರಂಥಾಲಯದಲ್ಲಿ ಮಾತ್ರ ಎಂದು ಹೇಳಿದರು.
ಪುಸ್ತಕ ಕೊಳ್ಳುವ ಮತ್ತು ಓದುವ ಹವ್ಯಾಸ ಉಳಿದ ಎಲ್ಲ ಹವ್ಯಾಸಗಳಿಗಿಂತ ಆರೋಗ್ಯಕರವಾದುದು. ವಿದ್ಯಾರ್ಥಿ ಗಳು ಇಂತಹ ಹವ್ಯಾಸವನ್ನು ಬೆಳೆಸಿ ಕೊಂಡು ಉತ್ತಮ ಪುಸ್ತಕಗಳನ್ನು ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳು ವಂತೆ ಸಲಹೆ ನೀಡಿದರು.
ಸಹ ಪ್ರಾಧ್ಯಾಪಕ ಡಾ.ಡಿ. ಶ್ರೀನಿವಾಸ ಕಾರ್ಯಕ್ರಮ ಉದ್ಘಾಟಿಸಿ, ಪುಸ್ತಕಗಳು ಪರಂಪರೆಯಿಂದ ಪರಂಪರೆಗೆ ಮಾಹಿತಿಯನ್ನು ನೀಡುವ ಜ್ಞಾನವಾಹಕಗಳು. ಅವು ಮಹಾನ್ ತತ್ವಜ್ಞಾನಿಗಳ, ಸಮಾಜ ಸುಧಾರಕರ, ಸಾಹಿತಿಗಳ, ಸಾಧಕರ ಅನುಭವದ ಗಣಿಗಳು. ಅವನ್ನು ಓದಿದ ಅಸಂಖ್ಯಾತರು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಗ್ರಂಥಪಾಲಕ ಎನ್.ಮಂಜುನಾಥ್, ಡಾ.ಎಸ್.ಆರ್.ರಂಗನಾಥನ್ ಅವರ ಜೀವನ ಮತ್ತು ಸಾಧನೆ ಬಗ್ಗೆ ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಂ.ಪಿ.ಗೋಪಾಲ್ ಮಾತನಾಡಿ ಮನುಷ್ಯನ ಜೀವನವನ್ನು ಸಕಾರಾತ್ಮಕವಾಗಿ ಬದಲಾಯಿಸುವ ಶಕ್ತಿ ಪುಸ್ತಕಗಳಿಗಿವೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಪುಸ್ತಕಗಳ ಮಹತ್ವ ಇಂದಿಗೂ ಕುಗ್ಗಿಲ್ಲ ಎಂದು ನುಡಿದರು.
ಉಪನ್ಯಾಸಕ ಮಮತ ಸ್ವಾಗತಿಸಿದರು. ಆನಂದ್ಕುಮಾರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

