ಹಾಸನ

ಚಿನ್ನಾಭರಣ ಕಳವು

Published On :

ಹಾಸನ: ಮನೆ ಬಾಗಿಲು ಮುರಿದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳ್ಳತನ ನಡೆಸಿರುವ ಘಟನೆ  ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ  ಮಂಗಳವಾರ ರಾತ್ರಿ ನಡೆದಿದೆ. ಬಡಾವಣೆಯ ಮೊಹಮ್ಮದ್ ಅಲೀ  ಮನೆಯಲ್ಲಿ ಕಳ್ಳತನ ನಡೆದಿದೆ. ಮದುವೆಗೆಂದು ಕುಟುಂಬ ಸಮೇತರಾಗಿ ಮಂಗಳೂರಿಗೆ ಹೋಗಿದ್ದ ಸಂದರ್ಭದಲ್ಲಿ  ಕಳ್ಳತನ ನಡೆಸಲಾಗಿದ್ದು ಮನೆಯಲ್ಲಿದ್ದ ಬೀರುವಿನಲ್ಲಿದ್ದ ನಗದು, ಚಿನ್ನದ ಚೈನ್, ಉಂಗುರ, ಡಿವಿಡಿ ಸೇರಿದಂತೆ ಲಕ್ಷಾಂತರ ರು. ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ.ಪಟ್ಟಣ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.



ಹೇಮೆಗೆ 4,642 ಕ್ಯುಸೆಕ್ ಒಳಹರಿವು  
ಹಾಸನ: ಹೇಮಾವತಿ ಜಲಾಶಯಕ್ಕೆ ಬುಧವಾರ 4,642 ಕ್ಯುಸೆಕ್ ನೀರು ಹರಿದು ಬಂದಿದೆ. ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ನೀರಿನ ಮಟ್ಟ 2921.65, ಜಲಾಶಯದಿಂದ ನದಿಗೆ 1800 ಕ್ಯುಸೆಕ್, ನಾಲೆಗೆ 3850 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಪ್ರಸ್ತುತ 36.764 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ಇಂದಿನ ನೀರಿನ ಮಟ್ಟ 3164.726 ಅಡಿ, ಒಳ ಹರಿವು 400 ಕ್ಯುಸೆಕ್, ಹೊರ ಹರಿವು ನಾಲೆಗೆ 50, ನದಿಗೆ 350 ಕ್ಯುಸೆಕ್, ಒಟ್ಟು ನೀರಿನ ಸಂಗ್ರಹ ಮಟ್ಟ 3.600 ಟಿಎಂಸಿ ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: ಇಂದಿನ ಮಟ್ಟ 3165.25 ಅಡಿ, ಒಳ ಹರಿವು 40 ಕ್ಯುಸೆಕ್, ಒಟ್ಟು 1.280 ಟಿಎಂಸಿ ನೀರು ಸಂಗ್ರಹವಾಗಿದೆ.
ತಾಲೂಕುವಾರು ಮಳೆ ವಿವರ: ಅರಕಲಗೂಡು 0.2, ಅರಸೀಕೆರೆ 0.5, ಬೇಲೂರು 5.0, ಹಾಸನ 2.4, ಸಕಲೇಶಪುರ 4.4, ಮಿ.ಮೀಟರ್ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: ಅರಕಲಗೂಡು 0.2,ಮಲ್ಲಿಪಟ್ಟಣ್ಣ 3, ದೊಡ್ಡಬೆಮ್ಮತ್ತಿ 2.2 ಅರಸೀಕೆರೆ 0.5, ಗಂಡಸಿ 6,ಕಣಕಟ್ಟೆ 3.2,ಯಳವಾರೆ 6.6,ಜಾವಗಲ್ 4, ಬೇಲೂರು ಕಸಬ 5.0, ಹಳೇಬೀಡು 1.2,ಹಗರೆ 4.4,ಬಿಕ್ಕೋಡು 8.1,ಗೆಂಡೆಹಳ್ಳಿ 14.2,ಅರೆಹಳ್ಳಿ 2.4, ಚನ್ನರಾಯಪಟ್ಟಣ ತಾಲ್ಲೂಕಿನ ಉದಯಪುರ 0.6,ಹಾಸನ 2.4,ಸಾಲಗಾಮೆ 6.4, ಶಾಚಿತಿಗ್ರಾಮ 6.4,ದುದ್ದ 4,ಗೊರೂರು 0.5 ಸಕಲೇಶಪುರ ಕಸಬ 4.4,ಬಾಳ್ಳುಪೇಟೆ 4.2,ಯಸಳೂರು 15, ಶುಕ್ರವಾರ ಸಂತೆ 3.4,ಮಾರನಹಳ್ಳಿ 15,ಹೊಸೂರು 14, ಬೆಳಗೊಡು 5, ಹಾನಬಾಳು 5, ಹೆತ್ತೂರು 14.6 ಮಿ.ಮೀಟರ್ ಮಳೆಯಾಗಿದೆ.
ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ
ಚನ್ನರಾಯಪಟ್ಟಣ: ಪಟ್ಟಣದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 342ನೇ ಆರಾಧನಾ ಮಹೋತ್ಸವ ಅಂಗವಾಗಿ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೋಟೆ ರಾಘವೇಂದ್ರ ಸ್ವಾಮಿ ಮಠದ ಆಡಳಿತ ಮಂಡಳಿ ಉಪಾಧ್ಯಕ್ಷ ಸುಬ್ಬರಾಯಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ತತ್ಸಂಬಂಧ ಆ.19ರಿಂದ 23ರ ವರೆಗೆ ರಾಯರ ಆರಾಧನೆ ಹಾಗೂ ಧ್ಯಾನ ಹಮ್ಮಿಕೊಳ್ಳಲಾಗಿದೆ.  19ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ, 20ಕ್ಕೆ ಸಂಗೀತ ಕಾರ್ಯಕ್ರಮ, 21ರಂದು ಮೈಸೂರಿನ ವಿದ್ವಾನ್ ಮಂಜು ತಂಡದವರಿಂದ ಭಾವಗೀತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  22ರಂದು ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆ, 23ರಂದು ಉತ್ತರಾರಾಧನೆ ಹಾಗೂ ಚಂದ್ರಮೌಳೇಶ್ವರ ಭಜನಾ ಮಂಡಲಿ ವತಿಯಿಂದ ಭಜನೆ ಕಾರ್ಯಕ್ರಮ, ಗುರುರಾಯ ಪಲ್ಲಕ್ಕಿ ಉತ್ಸವ  ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.