ಸಮುದಾಯ ಭವನ ಲೋಕಾರ್ಪಣೆ
ಹಾರನಹಳ್ಳಿ: ಧಾರ್ಮಿಕ ಕ್ಷೇತ್ರವಾಗಿರುವ ಶ್ರೀಚಿಕ್ಕಗಿರಿ ರಂಗನಾಥಸ್ವಾಮಿ ಕ್ಷೇತ್ರದ ಬೆಟ್ಟದ ಮೇಲೆ 30 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನ ಲೋಕಾರ್ಪಣೆಗೊಂಡಿತು.
ನಾನಾ ಧಾರ್ಮಿಕ ವಿಧಿ ವಿಧಾನಗಳು, ಹೋಮಾದಿಗಳು ನಡೆದು ಸಮುದಾಯ ಭವನ ಲೋಕಾರ್ಪಣೆಗೆ ಬೆಲಗೂರಿನ ಬಿಂಧುಮಾಧವಶರ್ಮ, ಹಾಸನದ ಶಂಭುನಾಥಸ್ವಾಮೀಜಿ ಸಾಕ್ಷಿಯಾಗಿದ್ದರು. ನಾನಾ ಕಡೆಯಿಂದ ಆಗಮಿಸಿದ್ದ ಭಕ್ತರ ಮಹಾಪೂರ ಕಾರ್ಯಕ್ರಮಗಳಲ್ಲಿ ಸಕ್ರಿಆದಿಚುಂಚನಗಿರಿ ಶಾಖಾ ಮಠದ ಶಂಭುನಾಥಸ್ವಾಮೀಜಿ ಆಶೀರ್ವಚನ ನೀಡಿ, ಹಿಂದೂ ಧರ್ಮ ಮಾನವಕುಲಕ್ಕೆ ಒಳಿತು ಬಯಸುವ ಧರ್ಮವಾಗಿದೆ. ಇದು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಧರ್ಮ ಎಂದರು.
ಧರ್ಮ ಎಂದರೆ ಪರೋಪಕಾರ ಎಂಬುದಾಗಿದೆ. ಪರೋಪಕಾರ ಪುಣ್ಯದ ಕೆಲಸ. ಆ ನಿಟ್ಟಿನಲ್ಲಿಯೇ ಈ ಭವನ ನಿರ್ಮಾಣವಾಗಿದೆ. ಎಲ್ಲರೂ ಸೇರಿ ಇಂತಹ ಮಹತ್ಕಾರ್ಯ ಮಾಡಿರುವುದು ಸಂತೋಷ ಎಂದರು.
ಚಿಕ್ಕಗಿರಿ ಸೇವಾನ್ಯಾಸದ ಮುಖ್ಯನಿರ್ವಾಹಣಾಧಿಕಾರಿ ಎಚ್.ಎನ್.ರಾಮಮಮೂರ್ತಿ ಮಾತನಾಡಿ, ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಅನುವಾಗುವಂತೆ ವಸತಿ ಹಾಗೂ ದಾಸೋಹ ಮೊದಲಾದ ಕಾರ್ಯಗಳಿಗೆ ಪೂರಕವಾಗಿ ಈ ಸಮುದಾಯ ಭವನ ನಿರ್ಮಿಸಲು ಚಿಂತನೆ ಮಾಡಲಾಯಿತು. ಇದಕ್ಕೆ ಭಕ್ತರು ಮತ್ತು ಹಾಸನ ಶಾಸಕ ಎಚ್.ಎಸ್.ಪ್ರಕಾಶ್ ಹಾಗೂ ಗ್ರಾಮಸ್ಥರು ನೀಡಿದ ಸಹಕಾರ ಈ ಮಹತ್ಕಾರ್ಯ ಯಶಸ್ವಿಗೆ ಕಾರಣವಾಗಿದೆ ಎಂದರು.
ನೆರವು ನೀಡಿರುವ ಎಲ್ಲರಿಗೂ ಕೃತಜ್ಞತೆ ತಿಳಿಸಿದ ಅವರು ಮುಂದಿನ ದಿಗಳಲ್ಲಿ ದೇವಾಲಯ ಜೀರ್ಣೋದ್ಧಾರ ಮಾಡಬೇಕೆಂಬ ಚಿಂತನೆ ಇದೆ. ಸ್ವಾಮಿ ಅನುಗ್ರಹ ಹಾಗೂ ನಿಮ್ಮಗಳ ಸಹಕಾರ ಸಿಕ್ಕಲ್ಲಿ ಅದನ್ನು ಮಾಡು ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.
ಬೆಂಗಳೂರಿನ ಶಾಸಕ ರವಿಸುಬ್ರಹ್ಮಣ್ಯ ಮಾತನಾಡಿ, ಭಗವಂತನ ಸಾಕ್ಷಾತ್ಕಾರಕ್ಕೆ ಇಂಥಹ ಕಾರ್ಯಗಳು ಮೆಟ್ಟಲಾಗುತ್ತದೆ ಎಂದರು. ಹಾಸನ ಶಾಸಕ ಎಚ್.ಎಸ್.ಪ್ರಕಾಶ್ ಮಾತನಾಡಿ, ಸಮುದಾಯ ಭವನ ನಿರ್ಮಾಣ ಕಾರ್ಯಕ್ಕೆ ಮುಂದಾದ ಸೇವಾನ್ಯಾಸದ ಪದಾಧಿಕಾರಿಗಳು ಇದರ ನಿರ್ಮಾಣಕ್ಕೆ ಸಹಕಾರ ಬಯಸಿದರು ಸಾಧ್ಯವಾದಷ್ಟು ನೆರವು ದೊರಕಿಸಿಕೊಡುವಲ್ಲಿ ಪ್ರಯತ್ನ ಮಾಡಿದ್ದೇನೆ. ಇನ್ನೂ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ ಇದಕ್ಕೆ ನನ್ನ ಸಹಕಾರ ಇರುತ್ತದೆ ಎಂದರು,
ದಾನಿ ಅಟ್ಟಾವರ ರಾಮದಾಸ್ ಭವನ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸೇವಾನ್ಯಾಸದ ಅಧ್ಯಕ್ಷ ಟಿ.ಆರ್.ದಿವಾಕರ್, ಗೌರವಾಧ್ಯಕ್ಷ ಎಚ್.ಎನ್.ಸುಬ್ಬರಾವ್, ಉಪಾಧ್ಯಕ್ಷ ಕೆ.ರಂಗಸ್ವಾಮಿ, ಕಾರ್ಯದರ್ಶಿ ಬಾಗೇಶಪುರ ರಂಗಸ್ವಾಮಿ, ಸಹಕಾರ್ಯದರ್ಶಿ ಹಾರನಹಳ್ಳಿ ಎಚ್.ಎಸ್.ಶ್ರೀನಿವಾಸಮೂರ್ತಿ, ಖಜಾಂಚಿ ಬಿ.ಎ. ವೆಂಕಟರಾಮು, ಸದಸ್ಯ ತಳಲೂರು ಅನಂತಯ್ಯ, ಬಿ.ಎಸ್.ಪ್ರಕಾಶ್, ಸುಧಾಕರ, ಶ್ರೀಧರ್, ಸುಬ್ರಹ್ಮಣ್ಯ, ರಂಗನಾಥಮೂರ್ತಿ, ಎಚ್.ಎನ್.ಗುಂಡಪ್ಪ ಇದ್ದರು. ಭಕ್ತರಿಗೆ ದಾಸೋಹ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

