22, 23 ರಂದು ದೇವಾಲಯ ಜೀರ್ಣೋದ್ಧಾರ
ಬಾಗೂರು: ಸಮೀಪದ ಕೆ.ತಿಮ್ಲಾಪುರ ಗ್ರಾಮದ ಪ್ರಸಿದ್ಧ ಮುತ್ತುರಾಯಸ್ವಾಮಿ, ಚೌಡೇಶ್ವರಿ, ಚಾಮುಂಡೇಶ್ವರಿ ದೇವಾಲಯಗಳ ಜೀರ್ಣೋದ್ಧಾರ, ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವ ಆ.22 ಮತ್ತು 23 ರಂದು ಏರ್ಪಡಿಸಲಾಗಿದೆ.
ಸಂಜೆ 5.30ಕ್ಕೆ ಕೆಂಕೆರೆ ಬೆಂಕಿ ಬ್ರಹ್ಮಲಿಂಗೇಶ್ವರಸ್ವಾಮಿ ಕಳಸದೊಂದಿಗೆ ಬಸವೇಶ್ವರ ಸ್ವಾಮಿಗಳ ಆಗಮನ, ಮೂಲದೇವತಾ ಪ್ರಾರ್ಥನೆ, ಗಂಗೆ ಪೂಜೆ, ಪ್ರದಕ್ಷಿಣ ಪೂರ್ವಕ, ತೀರ್ಥ ಸಂಗ್ರಹಣೆ ಗಣಪತಿ ಪೂಜೆ ಸ್ವಸ್ತಿವಾಚನೆ ವಾಸ್ತು ರಕ್ಷೋಘ್ನ ಹೋಮ, ಬಿಂಬ ಶುದ್ಧಿ, ರಕ್ಷಾ ಬಂಧನೆ ಮುತ್ಸಂಗ್ರಹಣ, ಅಂಕುರಾರ್ಪಣೆ, ಮಹಾಮಂಗಳಾರತಿ ನಡೆಯಲಿದೆ. 23 ರಂದು ಶುಕ್ರವಾರ ಬೆಳಗ್ಗೆ 7 ಕ್ಕೆ ಗೋಪೂಜೆ, ಯಾಗಶಾಲಾ ಪ್ರವೇಶ, ಗಣಪತಿ ಪೂಜೆ, ಸ್ವಸ್ತಿವಾಚನಾ, ಋತ್ವಿಕ್ವರಣ, ಗಣಪತಿ ನವಗ್ರಹ ಹೋಮ, ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಸಂಜೆ 4 ಗಂಟೆಗೆ ಆದಿಚುಂಚನಗಿರಿ ಮಂಗಳೂರು ಶಾಖೆಯ ಧರ್ಮಪಾಲಸ್ವಾಮಿಜೀ ಧಸರಿಘಟ್ಟ ಶಾಖಾಮಠದ ಚಂದ್ರಶೇಖರ ಸ್ವಾಮೀಜಿ, ಮಾಜಿ ಶಾಸಕ ಪುಟ್ಟೇಗೌಡ ಜಿಪಂ ಮಾಜಿ ಉಪಾಧ್ಯಕ್ಷ ಎ.ಇ ಚಂದ್ರಶೇಖರ್ ಉಪಸ್ಥಿತಿಯಲ್ಲಿ ವೇದ ಪಾರಾಯಣ ಗಣಪತಿ ಪೂಜೆ ಸ್ವಸ್ತಿವಾಚನಾ ಗ್ರಾಮ ಪ್ರದಕ್ಷಿಣಾವಿಮಾನ ಗೊಪುರಕ್ಕೆ ಪಂಚಲೋಹ ಕಳಸ ಸ್ಥಾಪನೆ ಆಂಜನೇಯ ದ್ವಾದಶಾಕ್ಷರಿ, ದುರ್ಗಾ, ಲಕ್ಷ್ಮಿಹೋಮ, ಚೌಡೇಶ್ವರಿ ಚಾಮುಂಡೆಶ್ವರಿ ದೇವಿಗೆ ಕ್ಷೀರಾಧಿವಾಸ, ಧಾನ್ಯಧಿವಾಸ, ಪುಷ್ಪಾಧಿವಾಸ, ಶಯ್ಯಾಧಿವಾಸ, ನವರತ್ನನ್ಯಾಸ ಪೂರ್ವಕ ಹಾಗೂ ಮಹಾಮಂಗಳಾರತಿ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷೆ ಸುಮಿತ್ರ ಪ್ರಭಾಕರ್ ಶಮಂತಗೌಡ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

