ಸಂತಮೇರಿ ಶಾಲೆ ಬಾಲಕಿಯರ ವಿಭಾಗಕ್ಕೆ ಸಮಗ್ರ ಪ್ರಶಸ್ತಿ
ಕನ್ನಡಪ್ರಭ ವಾರ್ತೆ ಅರಸೀಕೆರೆ ಆ. 22
ಪಟ್ಟಣದ ಜೇನುಕಲ್ ಕ್ರೀಡಾಂಗಣದಲ್ಲಿ ನಡೆದ ನಗರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟ ಮುಕ್ತಾಯವಾಗಿದ್ದು ಸಂತ ಮೇರಿ ಶಾಲೆ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದಿದ್ದು, ಬಾಲಕರ ವಿಭಾಗದಲ್ಲಿ ಆದಿಚುಂಚನಗಿರಿ ಶಾಲೆ ಬಾಲಕರು ಸಮಗ್ರ ಪ್ರಶಸ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವೈಯಕ್ತಿಕ ವಿಭಾಗದಲ್ಲಿಯೂ ಈ ಶಾಲೆಗಳು ಮುಂದಿವೆ.
ಬಾಲಕಿಯರ ವಿಭಾಗ: 600ಮೀ. ಓಟದಲ್ಲಿ ಸಂತಮೇರಿ ಕನ್ನಡ ಶಾಲೆಯ ಸುಪ್ರಿತಾ ಪ್ರಥಮ, ಸಂತಮೇರಿ ಆಂಗ್ಲ ಶಾಲೆಯ ಅನನ್ಯ ದ್ವಿತೀಯ, ಇದೇ ಶಾಲೆಯ ತಮನ್ನಾ ತೃತೀಯ ಸ್ಥಾನ ಪಡೆದಿದ್ದಾರೆ. 400 ಮೀ. ಓಟದಲ್ಲಿ ಪ್ರಿಯಾ ಜೆ. ಪ್ರಥಮ, ಸಂತ ಮೇರಿ ಕನ್ನಡ ಶಾಲೆಯ ಶ್ವೇತಾ ಕೆ.ಎಂ. ದ್ವಿತೀಯ ಹಾಗೂ ಸಂತಮೇರಿ ಆಂಗ್ಲ ಶಾಲೆಯ ಯಶಸ್ವಿನಿ ಬಿ.ಎಸ್. ತೃತೀಯ ಸ್ಥಾನ ಪಡೆದಿದ್ದು 100 ಮೀ. ಓಟದಲ್ಲಿ ಆದಿಚುಂಚನಗಿರಿ ರಕ್ಷಾ ಎ.ವಿ.ಪ್ರಥಮ, ಶಾರದ ಆಂಗ್ಲ ಶಾಲೆಯ ಮೇಘನಾ ದ್ವಿತೀಯ, ಆದಿಚುಂಚನಗಿರಿ ಶಾಲೆಯ ಭಾವನಾ ತೃತೀಯ ಸ್ಥಾನ ಪಡೆದಿದ್ದಾರೆ.
ರಿಲೇ ವಿಭಾಗದಲ್ಲಿ ಆದಿಚುಂಚನಗಿರಿ ಪ್ರಥಮ, ಸಂತ ಮೇರಿ ಆಂಗ್ಲ ದ್ವಿತೀಯ, ವಾಲಿಬಾಲ್, ಥ್ರೋಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರೆ, ಖೋ ಖೋನಲ್ಲಿ ಸಂತಮೇರಿ ಕನ್ನಡ ಶಾಲೆ ಪ್ರಥಮ ಹಾಗೂ ಕಬಡ್ಡಿಯಲ್ಲಿ ರೇಣುಕಾಂಬ ಶಾಲೆ ಪ್ರಥಮ ಸ್ಥಾನ ಗಿಟ್ಟಿಸಿದೆ.
ಎತ್ತರ ಜಿಗಿತ ಸ್ಪರ್ಧೆಯಲ್ಲಿ ಸಂತಮೇರಿ ಕನ್ನಡ ಶಾಲೆಯ ಸುಪ್ರಿತಾ ಎ. ಪ್ರಥಮ, ಸಂತಮೇರಿ ಆಂಗ್ಲ ಶಾಲೆಯ ಆಶಾ ದ್ವಿತೀಯ, ಸರ್ಕಾರಿ ಹಿ.ಪ್ರಾ.ಶಾಲೆಯ ಆಯಿಷಾ ಬಾನು ತೃತೀಯ ಸ್ಥಾನ ಪಡೆದಿದ್ದಾರೆ. ಉದ್ದ ಜಿಗಿತ ಸ್ಪರ್ಧೆಯಲ್ಲಿ ಶಾರದ ಆಂಗ್ಲ ಶಾಲೆಯ ಮೇಘನಾ ಎಚ್.ಆರ್. ಪ್ರಥಮ, ಸಂತಮೇರಿ ಆಂಗ್ಲ ಶಾಲೆಯ ಅನುಷಾ ಟಿ.ಎಸ್. ದ್ವಿತೀಯ, ಸಂತಮೇರಿ ಕನ್ನಡ ಶಾಲೆಯ ಸುವರ್ಣ ತೃತೀಯ ಸ್ಥಾನ ಪಡೆಯಲು ಸಫಲರಾಗಿದ್ದಾರೆ.
ಗುಂಡು ಎಸೆತದಲ್ಲಿ ಶಾಂತಿನಿಕೇತನ ಪಬ್ಲಿಕ್ ಶಾಲೆಯ ದೀಪ್ತಿ, ಸಂತಮೇರಿ ಆಂಗ್ಲ ಶಾಲೆಯ ಅನುಷಾ, ಸಂತಮೇರಿ ಕನ್ನಡ ಶಾಲೆಯ ಮಾನಸ ಹಾಗೂ ಇದೇ ವಿದ್ಯಾರ್ಥಿಗಳು ತಟ್ಟೆ ಎಸೆತದಲ್ಲಿಯೂ ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗ: 600ಮೀ. ಓಟದಲ್ಲಿ ಸಂತಮೇರಿ ಕನ್ನಡ ಶಾಲೆಯ ರಾಹುಲ್ ಪಿಂಟೋ ಪ್ರಥಮ, ಸಂತಮೇರಿ ಕನ್ನಡ ಶಾಲೆಯ ರಾಕೇಶ್ ದ್ವಿತೀಯ ಇದೇ ಶಾಲೆಯ ಗಂಧರ್ವ ತೃತೀಯ ಸ್ಥಾನ ಪಡೆದಿದ್ದಾರೆ.
400 ಮೀ. ಓಟದಲ್ಲಿ ಜೇನುಕಲ್ ನಗರ ಶಾಲೆಯ ಗಣೇಶ್ ಎ.ಎಂ. ಪ್ರಥಮ, ಸಂತ ಮೇರಿ ಕನ್ನಡ ಶಾಲೆಯ ರಾಕೇಶ್, ದ್ವಿತೀಯ ಹಾಗೂ ಶಾರದ ಆಂಗ್ಲ ಶಾಲೆಯ ಯಶವಂತಯ್ಯ ತೃತೀಯ ಸ್ಥಾನ ಪಡೆದಿದ್ದಾರೆ. 100 ಮೀ. ಓಟದಲ್ಲಿ ಆದಿಚುಂಚನಗಿರಿ ಹರಿಪ್ರಸಾದ್ ಪ್ರಥಮ, ಕಮಲಾ ಆಂಗ್ಲ ಶಾಲೆಯ ರುದ್ರೇಶ್ ದ್ವಿತೀಯ, ಮಾದರಿ ಎಚ್.ಪಿ.ಎಸ್. ಶಾಲೆಯ ಜಾಹೀದ್ ತೃತೀಯ ಸ್ಥಾನ ಪಡೆದಿದ್ದಾರೆ.
ಉದ್ದಜಿಗಿತ ಸ್ಪರ್ಧೆಯಲ್ಲಿ ಆದಿಚುಂಚನಗಿರಿ ಆಂಗ್ಲ ಶಾಲೆಯ ನೂತನ್ ಪ್ರಥಮ, ವೈಎಂಎಲ್ಎ ಶಾಲೆಯ ಮಹಮ್ಮದ್ ಸುಲ್ತಾನ್ ದ್ವಿತೀಯ, ಜೇನುಕಲ್ ನಗರ ಶಾಲೆಯ ಚೇತನ್ ತೃತೀಯ ಸ್ಥಾನ ಗಿಟ್ಟಿಸಿದ್ದಾರೆ. ಎತ್ತರ ಜಿಗಿತ ಸ್ಪರ್ಧೆಯಲ್ಲಿ ಸಂತಮೇರಿ ಕನ್ನಡ ಶಾಲೆಯ ರಾಹುಲ್ ಪಿಂಟೋ ಪ್ರಥಮ, ಸಂತಮೇರಿ ಕನ್ನಡ ಶಾಲೆಯ ಅಲೆಕ್ಸ್ ಬ್ರಿಟ್ರೋ ದ್ವಿತೀಯ, ಸಂತಮೇರಿ ಆಂಗ್ಲ ಶಾಲೆಯ ಶಾಹಿದ್ ಪಾಷ ತೃತೀಯ ಸ್ಥಾನ ಪಡೆದಿದ್ದಾರೆ.
ಗುಂಡು ಎಸೆತ ಸ್ಪರ್ಧೆಯಲ್ಲಿ ಸಂತಮೇರಿ ಆಂಗ್ಲ ಶಾಲೆಯ ಯೂನಸ್ ಪ್ರಥಮ, ಆದಿಚುಂಚನಗಿರಿ ಆಂಗ್ಲ ಶಾಲೆಯ ಚೌಹಾಣ್ ದ್ವಿತೀಯ, ಸಂತಮೇರಿ ಆಂಗ್ಲ ಶಾಲೆಯ ಪ್ರತೀಕ್ ತೃತೀಯ ಸ್ಥಾನ ಪಡೆದಿದ್ದಾರೆ.
ತಟ್ಟೆ ಎಸೆತ ಸ್ಪರ್ಧೆಯಲ್ಲಿ ಸಂತಮೇರಿ ಆಂಗ್ಲ ಶಾಲೆಯ ಮನೋಜ್ ಬಜ್ಕೆ ಎಂ. ಪ್ರಥಮ, ಆದಿಚುಂಚನಗಿರಿ ಆಂಗ್ಲ ಶಾಲೆಯ ಸುಮಂತ್ ದ್ವಿತೀಯ, ಸಂತಮೇರಿ ಕನ್ನಡ ಶಾಲೆಯ ಕಿರಣ್ ತೃತೀಯ ಸ್ಥಾನ ಪಡೆದಿದ್ದಾರೆ.
ರಿಲೇ ವಿಭಾಗದಲ್ಲಿ ಆದಿಚುಂಚನಗಿರಿ ಪ್ರಥಮ, ಸಂತ ಮೇರಿ ಆಂಗ್ಲ ದ್ವಿತೀಯ, ವಾಲಿಬಾಲ್ ಸಂತ ಮೇರಿ ಆಂಗ್ಲ ಪ್ರಥಮ, ಆದಿಚುಂಚನಗಿರಿ ದ್ವಿತೀಯ, ಥ್ರೋಬಾಲ್ನಲ್ಲಿ ಸಂತ ಮೇರಿ ಆಂಗ್ಲ ಪ್ರಥಮ ಸ್ಥಾನ ಪಡೆದಿದ್ದಾರೆ.
ಆದಿಚುಂಚನಗಿರಿ ದ್ವಿತೀಯ, ಕಬಡ್ಡಿಯಲ್ಲಿ ಮೊರಾರ್ಜಿ ಶಾಲೆ ಪ್ರಥಮ ಸ್ಥಾನ, ಬಸವೇಶ್ವರ ದ್ವಿತೀಯ, ಖೋ ಖೋನಲ್ಲಿ ನಿವೇದಿತಾ ಶಾಲೆ ಪ್ರಥಮ ಸ್ಥಾನ ಹಾಗೂ ಶಾರದ ಆಂಗ್ಲ ಶಾಲೆ ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

