ವೈಭವದ ಪರ್ವತ ಹುಣ್ಣಿಮೆ
ಜಾವಗಲ್: ಇಲ್ಲಿನ ಬಂದೂರು ಗ್ರಾಮದಲ್ಲಿ ಮಂಗಳವಾರ ಮಲ್ಲಿಕಾರ್ಜುನಸ್ವಾಮಿ ಮತ್ತು ಬೀರಲಿಂಗೇಶ್ವರಸ್ವಾಮಿಯ ವೈಭವದ ಪರ್ವತ ಹುಣ್ಣಿಮೆ ನಡೆಯಿತು.
ಬಂದೂರು ಗ್ರಾಮ ತನ್ನದೆಯಾದ ಇತಿಹಾಸ ಹೊಂದಿದ್ದು, ಈ ಗ್ರಾಮಕ್ಕೆ ಪರಶಿವನು ಸನ್ಯಾಸಿ ವೇಷದಿಂದ ಬಂದ ಹಿನ್ನೆಲೆಯಲ್ಲಿ ಈ ಗ್ರಾಮಕ್ಕೆ ಶಿವಬಂದೂರು ಗ್ರಾಮ ಎಂದು ಕರೆಯುತ್ತಾರೆ ಎಂದು ದೇವಾಲಯದ ಅರ್ಚಕ ನಾಗರಾಜು ತಿಳಿಸಿದರು.
ಈಶ್ವರನು ಹುಣ್ಣಿಮೆಯಂದು ಭಕ್ತರ ಮನೆಗೆ ಬಂದು ಭಿಕ್ಷೆ ಬೇಡಿದ ಕಾರಣ ಅಂದಿನ ದಿನದಿಂದ ಗ್ರಾಮದಲ್ಲಿ ಎಲ್ಲರೂ ಸೇರಿ ಈ ಹುಣ್ಣಿಮೆ ದಿನ ಹಬ್ಬವನ್ನು ಆಚರಣೆ ಮಾಡುತ್ತಾರೆ ಎಂದು ಹೇಳಿದರು.
ಅಂದು ಗ್ರಾಮದ ಹಿರಿಯ ದೇವತೆಗಳಾದ ಶ್ರೀ ಮಲ್ಲಿಕಾರ್ಜುನಸ್ವಾಮಿ ಮತ್ತು ಬೀರಲಿಂಗೇಶ್ವರ ಸ್ವಾಮಿಯ ನಾನಾ ಪೂಜೆ ವಿಧಾನದಿಂದ ಅಲಂಕರಿಸಿ ಮೆರವಣಿಗೆಯ ಮೂಲಕ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿ ಬಂದು ಹತ್ತಿರದ ಕಾಳನಕೋಪ್ಪಲಿಗೆ ಆಗಮಿಸಿ ಭಕ್ತರಿಂದ ಮಂಗಳಾರಾತಿ ಸ್ವೀಕರಿಸಿ ನಂತರದಲ್ಲಿ ತನ್ನ ಮೂಲ ಸ್ಥಾನಕ್ಕೆ ಮರಳುತ್ತಾವೆ, ಅಂದು ಮನೆಯಲ್ಲಿ ಕರಿಗಡಬು, ಕಡಬು, ಇನ್ನಿತರ ಖಾಧ್ಯಗಳ ಮಾಡಿಸಿ ಬಂದು ಬಳಗದೊಡನೆ ಊಟ ಮಾಡುವ ಪದ್ದತಿ ಇಂದು ಕಾರ್ಯ ರೂಪದಲ್ಲಿ ಇದೆ ಎಂದ ಅವರು, ಈ ಹುಣ್ಣಿಮೆಯಂದು ಸುಗ್ಗಿ ಹಬ್ಬವನ್ನು ಆಚರಣೆ ಮಾಡುವ ಪದ್ಧತಿ ನಮ್ಮ ಗ್ರಾಮದಲ್ಲಿ ಇದೆ ಎಂದು ತಿಳಿಸಿದರು.
ಕೆಜೆಪಿ ಮುಖಂಡ ಕೊರಟಿಕೆರೆ ಪ್ರಕಾಶ್, ಮಹದೇವ್, ಉಮಾಶಂಕರ್, ಬಿ.ಎನ್.ಮನು, ಶಶಿ, ಧನಂಜಯ್, ಮನು, ಲಕ್ಷ್ಮೀಶ್, ಸಂದೀಪ್ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

