ಮತದಾರರ ಹೆಸರೇ ನಾಪತ್ತೆ...!
ಕನ್ನಡಪ್ರಭ ವಾರ್ತೆ ಹಾಸನ ಮಾ 7
ಪಟ್ಟಿಯಲ್ಲಿ ಮತದಾರರ ಹೆಸರು ನಾಪತ್ತೆ, ಜನರ ಅಸಮಾಧಾನ... ಮತಯಂತ್ರ ಕೈಕೊಟ್ಟ ಪರಿಣಾಮವಾಗಿ ಕೆಲವೆಡೆ ಮತದಾನ ವಿಳಂಬ.
ಈ ಎಲ್ಲಾ ಗೊಂದಲ, ಸಮಸ್ಯೆಗಳ ನಡುವೆಯೂ ಗುರುವಾರ ನಗರಸಭೆಯ 35 ವಾರ್ಡ್ಗಳಿಗೆ ನಡೆದ ಮತದಾನ ಶಾಂತಿಯುತವಾಗಿ ನಡೆಯಿತು.
ನಗರಸಭೆಯ 32ನೇ ವಾರ್ಡ್ನಲ್ಲಿ ಮತಯಂತ್ರ ಕೆಟ್ಟ ಹೋದ ಹಿನ್ನೆಲೆಯಲ್ಲಿ 45 ನಿಮಿಷಗಳ ಕಾಲ ತಡವಾಗಿ ಮತದಾನ ಪ್ರಾರಂಭವಾಯಿತು. ವಾರ್ಡ್ ನಂ 6, 5, 28, 32 ರಲ್ಲಿ ಮತ ಪಟ್ಟಿಯಲ್ಲಿ ಹೆಸರು ಇಲ್ಲದೇ ಗೊಂದಲ ಉಂಟಾಯಿತು. ಗುರುತಿನ ಕಾರ್ಡ್ ಇದ್ದರೂ ಮತಪಟ್ಟಿಯಲ್ಲಿ ಹೆಸರನ್ನು ತೆಗೆದು ಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡ ಮತದಾರರ ಮತಗಟ್ಟೆ ಅಧಿಕಾರಿಗಳ ನಡುವೆ ವಾಗ್ವಾದ ನಡೆಸಿದರು.
ಉಳಿದಂತೆ 35 ವಾರ್ಡ್ಗಳನ್ನು ಹೊಂದಿರುವ ಹಾಸನ ನಗರ ಸಭೆ 126 ಮತಗಟ್ಟೆಗಳಲ್ಲಿ ಮತದಾನ ಯಾವುದೇ ಅಹಿತಕರ ಘಟನೆ ಜರುಗದೇ ಶಾಂತಿಯುತವಾಗಿ ಮತದಾನ ನಡೆಯಿತು. ಮತಗಟ್ಟೆಗಳ ಬಳಿ ಅಭ್ಯರ್ಥಿ ಮತ್ತವರ ಬೆಂಬಲಿಗರು ಅಂತಿಮ ಕ್ಷಣದ ಮತಯಾಚನೆ ಮಾಡಿದರು.
ಈ ಪೈಕಿ 17 ಸೂಕ್ಷ್ಮ ಮತಗಟ್ಟೆಗಳು ಹಾಗೂ 15 ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಿದ್ದರಿಂದ ಯಾವುದೇ ರೀತಿಯ ಗೊಂದಲ, ಗಲಾಟೆಗಳು ಆಗದೇ ಮತದಾರರು ಮತ ಹಾಕಿದರು.
ಮತದಾನ ಮಂದಗತಿಯಲ್ಲಿ ಪ್ರಾರಂಭ: ರಾಜ್ಯ ಚುನಾವಣಾ ಆಯೋಗ ನಿಗದಿಪಡಿಸಿರುವಂತೆ ಚುನಾವಣೆಯು ಬೆಳಗ್ಗೆ 7ರಿಂದ 5ರ ತನಕ ಮತದಾನ ನಡೆಯಿತು. ಬೆಳಗ್ಗೆ ಮಂಜು ಕವಿದ ವಾತಾವರಣವಿದ್ದರಿಂದ ಮತದಾನ ಮಂದಗತಿಯಲ್ಲಿ ಪ್ರಾರಂಭವಾಗಿ, ಬಿಸಿಲು ಏರುತ್ತಿದ್ದಂತೆ ಮತದಾರರು ಮತಗಟ್ಟೆಯತ್ತ ಧಾವಿಸಿ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಇನ್ನೂ ಅಭ್ಯರ್ಥಿಗಳು ಬೆಳಗ್ಗೆ ಬೇಗ ಎದ್ದು ದೇವರಿಗೆ ಪೂಜೆ ಸಲ್ಲಿಸಿ ಮತಗಟ್ಟೆಗಳತ್ತ ಧಾವಿಸಿದರು. ಅಭ್ಯರ್ಥಿಗಳು ಹಾಗೂ ಕುಟುಂಬದವರು ಮತದಾನದ ಹಕ್ಕನ್ನು ಚಲಾಯಿಸಿದರು.
ನಗರದ 35 ವಾರ್ಡ್ಗಳ 126 ಮತಗಟ್ಟೆಗಳಿಗೆ ಅವಶ್ಯಕ ಇರುವಷ್ಟು ವಿದ್ಯುನ್ಮಾನ ಮತಯಂತ್ರಗಳನ್ನು ಒದಗಿಸಿದ್ದರಿಂದ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗಲಿಲ್ಲ. ಕೆಲವು ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದೆ ಪರದಾಡುವಂತಾಯಿತು. ಮತ್ತೆ ಕೆಲವು ಗುರುತಿನ ಚೀಟಿ ಬದಲಾವಣೆಯಾಗಿದ್ದರಿಂದ ಮತದಾನ ಮಾಡಲು ಸಾಧ್ಯವಾಗದೆ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ತೆರಳಿದರು.
ಹೊಸದಾಗಿ ಮತದಾನದ ಗುರುತಿನ ಚೀಟಿ ಪಡೆದ ಯುವಕರು ಹಾಗೂ ಮೊದಲ ಬಾರಿಗೆ ಮತದಾನದ ಹಕ್ಕನ್ನು ಚಲಾಯಿಸಿದಂತಹವರು ಮತದಾನ ಮಾಡುವ ವಿಧಾನ ತಿಳಿಯದೇ ತಬ್ಬಿಬ್ಬಾದರು. ಆ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳು ಮಾರ್ಗದರ್ಶನ ನೀಡಿದರು. ವಯೋವೃದ್ಧರು ಸಾಕಷ್ಟು ಸಂಖ್ಯೆಯಲ್ಲಿ ಬಂದು ಮತದಾನ ಮಾಡಿದರು.
ಹಾಸನ ನಗರಸಭೆಯಲ್ಲಿ: 43,262 ಪುರುಷ ಮತದಾರರು ಮತ್ತು 43,337 ಮಹಿಳಾ ಮತದಾರರು ಸೇರಿದಂತೆ ಒಟ್ಟಾರೆಯಾಗಿ 86,599 ಮತದಾರರು ಇದ್ದಾರೆ. ಮತದಾರರನ್ನು ವಾಹನಗಳಲ್ಲಿ ಕರೆತರುವಂತಿಲ್ಲ ಹಾಗೂ ಮತಗಟ್ಟೆಯಿಂದ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವಾಹನ ನಿಲ್ಲಿಸುವಂತಿಲ್ಲವಾದರೂ ಮತಗಟ್ಟೆಯ ಸಮೀಪವೇ ವಾಹನಗಳನ್ನು ನಿಲ್ಲಿಸಿಕೊಂಡಿದ್ದರು.
ಮತದಾರರು ಮತವನ್ನು ಹಾಕದೆ ಇದ್ದಂತಹವರನ್ನು ಅಭ್ಯರ್ಥಿಗಳು ಮತ್ತು ಅವರ ಕಡೆಯವರು ದೂರವಾಣಿ ಮೂಲಕ ಕರೆ ಮಾಡಿ ಮತ ಹಾಕುವಂತೆ ಪೀಡಿಸಿದರು. ಮಧ್ಯಾಹ್ನ ಅಭ್ಯರ್ಥಿಗಳು ಹಿಂಬಾಲಕರು ಮನೆ ಮನೆಗಳಿಗೆ ತೆರಳಿ ಬಾಗಿಲು ತಟ್ಟಿ ಮತ ಹಾಕುವಂತೆ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

