ಸೋಲು, ಗೆಲವಿನ ಲೆಕ್ಕಾಚಾರ
ಕ.ಪ್ರ. ವಾರ್ತೆ ್ಣ ಅರಸೀಕೆರೆ ್ಣ ಮಾ 9
ಪಟ್ಟಣ ಪುರಸಭಾ ಚುನಾವಣೆ ಮುಕ್ತಾಯಗೊಂಡು ಮತ ಎಣಿಕೆಗೆ ಕ್ಷಣಗಣನೆ ಆರಂಭಗೊಳ್ಳುತ್ತಿದ್ದಂತೆ ಅಭ್ಯರ್ಥಿಗಳು ಚಲಾಯಿಸಲ್ಪಟ್ಟ ಮತಗಳ ಆಧಾರದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದರೆ ಕಾರ್ಯಕರ್ತರು, ಅಭಿಮಾನಿಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಬೆಟ್ಟಿಂಗ್ ಕಟ್ಟುವುದರಲ್ಲಿ ನಿರತರಾಗಿದ್ದಾರೆ.
ಬಸವೇಶ್ವರ ವೃತ್ತ, ಬಸ್ನಿಲ್ದಾಣ, ಹೋಟೆಲ್, ಪ್ರತಿವಾರ್ಡಿನ ಸರ್ಕಲ್ಗಳು ಬಾಜಿ ಕಟ್ಟುವ ಕೇಂದ್ರಗಳಾಗಿ ಮಾರ್ಪಾಡಾಗಿವೆ. ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಆರಂಭವಾಗಿ ಯಾವ ಭಾಗದಲ್ಲಿ ತಮಗೆ ಹೆಚ್ಚಿನ ಮತ ಬಂದಿದೆ.
ಇಂತಹ ಜನಾಂಗ ನಮ್ಮನ್ನು ಬೆಂಬಲಿಸಿದೆ. ನಮ್ಮ ಜಯ ನಿಶ್ಚಿತ ಎಂಬ ಅಂತಿಮ ಅಂಶವನ್ನು ನೀಡಿ ಗೆದ್ದೇ ಗೆಲ್ಲುತ್ತಾರೆ ಎಂಬ ದೃಢ ನಿಶ್ಚಯದಿಂದ ಬೆಟ್ಟಿಂಗ್ ಕಟ್ಟಲು ಮುಂದಾಗುತ್ತಾರೆ. ಆಗ ಒಂದಕ್ಕೆ ಒಂದು ಹಾಗೂ ಒಂದಕ್ಕೆ ಎರಡು ಆಧಾರದ ಮೇಲೆ ಜೂಜು ನಡೆಯುತ್ತಿದೆ.
ಒಂದಕ್ಕೆ ಎರಡು ಬೆಟ್ಟಿಂಗ್: ಪಟ್ಟಣದ 27 ವಾರ್ಡ್ಗಳಲ್ಲೂ ಈ ರೀತಿಯ ಬೆಟ್ಟಿಂಗ್ ನಡೆಯುತ್ತಿದ್ದು ಪ್ರತಿಷ್ಠಿತ ಕ್ಷೇತ್ರ ಮಾಜಿ ಪುರಸಭಾಧ್ಯಕ್ಷರು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಬಾರಿ ಬೆಟ್ಟಿಂಗ್ ನಡೆಯುತ್ತಿದ್ದು 15ನೇ ವಾರ್ಡಿನಲ್ಲಿ ಮಾಜಿ ಅಧ್ಯಕ್ಷ ಜಿ.ಟಿ.ಗಣೇಶ್ ವಿರುದ್ಧ ಕೆಜೆಪಿಯ ಶೈಲೆಂದ್ರಕುಮಾರ್ ಗೆಲ್ಲುತ್ತಾರೆ ಎಂದು ಒಂದಕ್ಕೆ ಒಂದೂವರೆಯಷ್ಟು ಬೆಟ್ಟಿಂಗ್ ನಡೆಯುತ್ತಿದೆ.
ಪ್ರತಿಷ್ಠಿತ ಕ್ಷೇತ್ರವೆನಿಸಿರುವ 21ನೇ ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ.ಎನ್. ವಿದ್ಯಾದರ ಪರ ಒಂದಕ್ಕೆ ಎರಡು ಬೆಟ್ಟಿಂಗ್ ನಡೆಯುತ್ತಿದೆ.
ಶಾಸಕ ಕೆ.ಎಂ.ಶಿವಲಿಂಗೇಗೌಡರ ನಿವಾಸವಿರುವ 26 ಹಾಗೂ 27ನೇ ವಾರ್ಡಿನಲ್ಲಿ ಜೆಡಿಎಸ್ ಮೂರನೇ ಸ್ಥಾನಕ್ಕಿಳಿಯಲಿದೆ. ಎರಡನೆ ಸ್ಥಾನಕ್ಕೆ ಬರುತ್ತದೆ ಗೆಲ್ಲುತ್ತಾರೆ ಎಂಬ ಬಗ್ಗೆ ಬಾರಿ ಬಾಜಿ ನಡೆದಿದ್ದು ಪುರಸಭೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತದೆ. 2 ಪಕ್ಷಗಳೂ ಸೇರಿ ಆಡಳಿತ ನಡೆಸುತ್ತವೆ ಎಂಬ ಬಗ್ಗೆ ಬಾಜಿ ನಡೆಯುತ್ತಿದ್ದು ಬೆಟ್ಟಿಂಗ್ಗಾಗಿ ಹಣ ಮಾತ್ರವಲ್ಲದೇ ಬೈಕ್, ಮನೆ, ಜಮೀನು ಇನ್ನಿತರ ವಸ್ತುಗಳು ಬಾಜಿಗೆ ತುತ್ತಾಗಿವೆ.
ಕೆಜೆಪಿ ಖಾತೆ ತೆರೆಯುವ ಲೆಕ್ಕಾಚಾರ: ಮತದಾನದ ನಂತರದ ಸನ್ನಿವೇಶವನ್ನು ಅವಲೋಕಿಸಿದರೆ 27 ವಾರ್ಡ್ಗಳಿರುವ ಪುರಸಭೆಯಲ್ಲಿ ಈ ಬಾರಿ ಕಾಂಗ್ರೆಸ್ ಗಣನೀಯ ಸಾಧನೆ ಮಾಡಿದರೆ, ಜೆಡಿಎಸ್ ಇರುವ ಸಂಖ್ಯೆಯನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದರೆ, ಕೆಜೆಪಿ ಖಾತೆ ತೆರೆಯುವ ಲೆಕ್ಕಾಚಾರ ಆರಂಭಿಸಿದೆ. ಬಿಜೆಪಿಯ ಒಬ್ಬ ಹಾಗೂ ಒಂದೆರಡು ಪಕ್ಷೇತರರು ಪುರಸಭೆ ಪ್ರವೇಶಿಸುವ ಅವಕಾಶ ದಟ್ಟವಾಗಿದೆ.
2007ರಲ್ಲಿ ನಡೆದಿದ್ದ ಪುರಸಭಾ ಚುನಾವಣೆಯಲ್ಲಿ ಜೆಡಿಎಸ್ 22 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಕಾಂಗ್ರೆಸ್, ಬಿಜೆಪಿ ತಲಾ 2 ಸ್ಥಾನಗಳಿಗೆ ತೃಪ್ತಿಪಟ್ಟರೆ ಒಬ್ಬ ಪಕ್ಷೇತರರು ಚುನಾಯಿತರಾದರು.
ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಅಭ್ಯರ್ಥಿಗಳ ನಾಡಿಮಿಡಿತ ಹೆಚ್ಚಾಗುತ್ತಿದ್ದು ಫಲಿತಾಂಶ ಏನಾಗಲಿದೆ ಎಂಬ ಕುತೂಹಲ ತಾಳಲಾರದೆ ಮತದಾನದ ಅಂಕಿ ಅಂಶವಿಡಿದು ಎಷ್ಟೆಷ್ಟು ಮತಗಳು ಬರಬಹುದು ಎಂಬ ಲೆಕ್ಕಾಚಾರ ಹಾಕುತ್ತಿದ್ದರೆ ಗೆದ್ದೇ ಗೆಲ್ಲುವೆನೆಂಬ ವಿಶ್ವಾಸ ಹೊಂದಿರುವ ಅಭ್ಯರ್ಥಿಗಳು ಅಂತರದ ಬಗ್ಗೆ ಅಂದಾಜು ಮಾಡುತ್ತಿದ್ದರೆ ಫಲಿತಾಂಶ ತಮಗೆ ವ್ಯತಿರಿಕ್ತವಾಗಬಹುದು ಎಂಬ ಅಂಜಿಕೆಯಲ್ಲಿರುವ ಅಭ್ಯರ್ಥಿಗಳು ದೇವರಿಗೆ ಮೊರೆ ಹೋಗಿ ವ್ರತ ಆರಂಭಿಸಿದ್ದಾರೆ.
ಈ ಹಿಂದೆ ಸದಸ್ಯರಾಗಿ ಅಧಿಕಾರ ಅನುಭವಿಸಿರುವವರಿಗೆ ಈ ಚುನಾವಣೆಯಿಂದ ತಮ್ಮ ರಾಜಕೀಯ ಭವಿಷ್ಯ ಏನಾಗಬಹುದೆಂಬ ಚಿಂತೆ ಕಾಡಲಾರಂಭಿಸಿದ್ದರೆ ಮೂವರು ಮಾಜಿ ಅಧ್ಯಕ್ಷರ ಪೈಕಿ ಇಬ್ಬರು ಸೋಲಿನ ಭಯ ಎದುರಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

