ಬಸ್ ಪಾಸ್ ಅವಧಿ ವಿಸ್ತರಣೆ
ಹಾಸನ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 2012ನೇ ಸಾಲಿಗೆ ಅಂಗವಿಕಲರಿಗೆ ರಿಯಾಯಿತಿ ದರದ ಬಸ್ ಪಾಸುಗಳನ್ನು ನೀಡಿರುತ್ತದೆ. ಈ ಪಾಸುಗಳ ಅವಧಿ ಡಿಸೆಂಬರ್ 31ಕ್ಕೆ ಅಂತ್ಯಗೊಂಡಿದ್ದು, ಈ ಪಾಸ್‌ಗಳ ಅವಧಿಫೆ. 28ಕ್ಕೆ ಅನುಮತಿಸಲಾಗಿತ್ತು. ಆಡಳಿತಾತ್ಮಕ ಕಾರಣಗಳಿಂದ ಈ ಪಾಸುಗಳ ಅವಧಿಯನ್ನು ಮಾ.31 ರವರೆಗೆ ಪ್ರಯಾಣಿಸಲು ಅವಧಿ ವಿಸ್ತರಿಸಲಾಗಿದೆ ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಮನಮೆಚ್ಚಿದ ಹಾಡುಗಳು
ಹಾಸನ: ಹಾಸನ ಆಕಾಶವಾಣಿ ಕೇಂದ್ರವು ಇದೇ ಪ್ರಥಮ ಬಾರಿಗೆ ಶ್ರೋತಣಗಳ ಪತ್ರಗಳನ್ನಾಧರಿಸಿದ ಮನ ಮೆಚ್ಚಿದ ಹಾಡುಗಳು ಕಾರ್ಯಕ್ರಮವನ್ನು ಈಗಾಗಲೇ ಪ್ರತಿ ಭಾನುವಾರ ಬಿತ್ತರಿಸಲಾಗುತ್ತಿದೆ. ಭಾನುವಾರ ಬೆಳಗ್ಗೆ 11.00 ಗಂಟೆಯಿಂದ 11.30 ನಿಮಿಷದ ವರೆಗೆ ಸರಣಿ ರೂಪದಲ್ಲಿ ಬಿತ್ತರಿಸಲಾಗುತ್ತಿದೆ. ಶ್ರೋತೃಗಳು ತಮಗೆ ತುಂಬ ಇಷ್ಟವಾದ ಚಿತ್ರಗೀತೆಗಳ ಕುರಿತು ತಮ್ಮ ಭಾವನೆಗಳನ್ನು ಈ ಕಾರ್ಯಕ್ರಮದಲ್ಲಿ ಪತ್ರಮುಖೇನ ಹಂಚಿಕೊಂಡಿದ್ದಾರೆ. ಆಕಾಶವಾಣಿ ಧ್ವನಿಭಂಡಾರದಿಂದ ಆಯ್ದ ಜನಪ್ರಿಯ ಮತ್ತು ಅಚ್ಚುಮೆಚ್ಚಿನ ಚಿತ್ರಗೀತೆಗಳನ್ನು, ಈ ಕಾರ್ಯಕ್ರಮದಲ್ಲಿ ಅಳವಡಿಸಿಕೊಳ್ಳಲಾಗಿದೆ. ವಿಶಿಷ್ಟ ನಿರೂಪಣೆಯೊಂದಿಗೆ ಕಾರ್ಯಕ್ರಮ ಮೂಡಿಬರಲಿದೆ. ಅತ್ಯುತ್ತಮ ಪತ್ರ ಬರೆದ ಆಯ್ದು ಶ್ರೋತೃಗಳಿಗೆ ಪ್ರಾಯೋಜಕ ಜಿ.ಎಲ್.ಆಚಾರ್ಯ ಜ್ಯುವೆಲರ್ಸ್‌ನವರು ಬಹುಮಾನ ನೀಡಲಿದ್ದಾರೆ ಎಂದು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ನಾರಾಯಣ ಎಂ.ಭಟ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

