ಹಾಸನ

ಉಚಿತ ಆರೋಗ್ಯ ತಪಾಸಣಾ ಶಿಬಿರ

Published On :

ಹಾಸನ: ಕಂದಲಿ ಕಾರ್ಪೊರೇಷನ್ ಬ್ಯಾಂಕ್ ಶಾಖೆಯು ತನ್ನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮಾ.17ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಸಹಯೋಗದೊಂದಿಗೆ ಹಂಪನಕುಪ್ಪೆಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಲಾಗಿದೆ. ಬೆ.9.30ರಿಂದ ಮ.2ರವರೆಗೆ ನಡೆಯುವ ಈ ಶಿಬಿರದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ತಜ್ಞ ವೈದ್ಯರು ಭಾಗವಹಿಸಲಿದ್ದು ಎಲ್ಲಾ ತರಹದ ಖಾಯಿಲೆಗಳಿಗೆ ಉಚಿತವಾಗಿ ಸೂಕ್ತ ಸಲಹೆ ಹಾಗೂ ತಪಾಸಣೆಯನ್ನು ನಡೆಸಲಿದ್ದಾರೆ. ಹಂಪನಕುಪ್ಪೆ ಸುತ್ತಮುತ್ತಲಿನ ಗ್ರಾಮಗಳಾದ ಕಿರಗಡಲು, ಉಪ್ಪಳ್ಳಿ, ಮೇದರಹಳ್ಳಿ, ಮಳಿಗನಹಳ್ಳಿ, ಸಿಂಗೋಡನಹಳ್ಳಿಕೊಪ್ಪಲು ಮತ್ತು ದೇವರಮನೆ ಕೊಪ್ಪಲು ಗ್ರಾಮದ ಜನತೆ ಈ ಶಿಬಿರದ ಪ್ರಯೋಜನ ಪಡೆಯಬಹುದಾಗಿದೆ. ಮಾಹಿತಿಗೆ ಕಂದಲಿ ಕಾರ್ಪೊರೇಷನ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ.ಬಾಲಚಂದ್ರ ಮೊ. 9449148705ಗೆ ಸಂಪರ್ಕಿಸಿ.


ನಗರಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲವು ಸಾಧಿಸಿರುವ ಮೂವರು ಪಕ್ಷೇತರರು ಬುಧವಾರ ಬಿಎಸ್ಪಿ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಕಾಣಿಸಿಕೊಂಡರು.
ಬೆಳಗ್ಗೆ 10-30ಕ್ಕೆ ಸೆಸ್ಕಾಂ ಇಲಾಖಾ ಕಚೇರಿ ಮುಂದೆ ಕಾಣಿಸಿಕೊಂಡ ಪಕ್ಷೇತರ ಸದಸ್ಯರಾದ ಮುಡಿಗುಂಡ ರಂಗಸ್ವಾಮಿ, ನಾಗಸುಂದ್ರಮ್ಮ ಜಗದೀಶ, ಅಣಗಳ್ಳಿ ರಾಮಕೃಷ್ಣ ಪ್ರತಿಭಟನೆ ಮುಗಿಯುವವರೆಗೂ ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಅವರ ಜೊತೆ ಗುರುತಿಸಿಕೊಂಡರು. ನಗರಸಭೆ ಚುನಾವಣೆ ಸಂದರ್ಭದಲ್ಲಿ ಬಿಎಸ್ಪಿ ವಾರ್ಡ್ಗಳಿಗೆ ಅಭ್ಯರ್ಥಿ ಕಣಕ್ಕಿಳಿಸದೆ ತಮ್ಮ ಬೆಂಬಲಿತರನ್ನು ಪಕ್ಷೇತರವಾಗಿ ನಿಲ್ಲಿಸಿ ಚುನಾವಣಾ ಪ್ರಚಾರದಲ್ಲೂ ಎನ್.ಮಹೇಶ್ ಭಾಗವಹಿಸಿ ಗೆಲುವಿಗೆ ಶ್ರಮಿಸಿದ್ದರು. ಹಾಗಾಗಿ ಗೆದ್ದ ಐವರು ಪಕ್ಷೇತರ ಸದಸ್ಯರ ಪೈಕಿ ಮೂವರು ಬಿಎಸ್ಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ.
'ನಾವು ಪಕ್ಷೇತರವಾಗಿ ಕಣದಲ್ಲಿ ಉಳಿಯಲು ಹಾಗೂ ಅವಿರತ ಹೋರಾಟ ನಡೆಸಿ ಗೆಲ್ಲಲು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಅವರು ಕಾರಣರಾಗಿದ್ದಾರೆ. ಹಾಗಾಗಿ ನಾವು ಮುಂದಿನ ದಿನಗಳಲ್ಲಿ ಬಿಎಸ್ಪಿ ಬೆಂಬಲಿತ ಸದಸ್ಯರಾಗಿ ಕೆಲಸ ಮಾಡುತ್ತೇವೆ. ನಮ್ಮ ವಾರ್ಡ್ಗಳಿಗೆ ಮೂಲ ಸೌಲಭ್ಯ ಒದಗಿಸಲು ಕ್ರಮ ವಹಿಸುತ್ತೇವೆ' ಎಂದು ಪಕ್ಷೇತರ ಅಭ್ಯರ್ಥಿ ನಾಗಸುಂದ್ರಮ್ಮ ಜಗದೀಶ 'ಕನ್ನಡಪ್ರಭ'ಕ್ಕೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.