ಹಾಸನ

ವಿಧಾನಸಭೆ ಚುನಾವಣೆ: ಅಧಿಕಾರಿಗಳ ಪೂರ್ವಭಾವಿ ಸಭೆ

Published On :

ಕ.ಪ್ರ ವಾರ್ತೆ ಹೊಳೆನರಸೀಪುರ ಮಾ.22
ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಹಾಸನ ಉಪ ವಿಭಾಗಾಧಿಕಾರಿ ಜಗದೀಶ್ ಅಧ್ಯಕ್ಷತೆಯಲ್ಲಿ ವಿಧಾನಸಭೆ ಚುನಾವಣೆ ನೀತಿ ನಿಯಮಗಳ ಪೂರ್ವಭಾವಿ ಸಭೆ ಇತ್ತೀಚೆಗೆ ನಡೆಯಿತು.
ಜಗದೀಶ್ ಮಾತನಾಡಿ, ಬರಲಿರುವ ವಿಧಾನಸಭೆ ಚುನಾವಣೆಗೆ ಮೊದಲು ಹೊಸದಾಗಿ ಮತದಾರರ ಸೇರ್ಪಡೆ ಮತ್ತು ಕೈಬಿಟ್ಟು ಹೋದ ಮತದಾರರ ಸೇರ್ಪಡೆ ಬಗ್ಗೆ ಮಾಹಿತಿ ನೀಡಿದರು. ಕ್ಷೇತ್ರದಲ್ಲಿನ ಎಲ್ಲ ಮತಗಟ್ಟೆಗಳ ಪೂರ್ಣ ವಿವರ ಈಗಾಗಲೇ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದ್ದು, ಈಗ ನಿರ್ಧರಿಸಿರುವ ಮತಗಟ್ಟೆಗಳನ್ನು ಬೇರೆಡೆಗೆ ಬದಲಾಯಿಸುವುದಾಗಲಿ, ವರ್ಗಾವಣೆ ಮಾಡಲು ಸಾದ್ಯವಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಯಾ ಮತಗಟ್ಟೆಗಳಲ್ಲಿ ಮೂಲಭೂತವಾಗಿ ಬೇಕಾದ ವಿದ್ಯುತ್, ಕುಡಿಯುವ ನೀರಿನ ಸವಲತ್ತುಗಳನ್ನು ತಾವುಗಳೇ  ಮಾಡಿಕೊಳ್ಳಬೇಕಾಗಿದೆ.
ಆದ್ದರಿಂದ ಅಧಿಕಾರಿಗಳು ತಮಗೆ ವಹಿಸಿರುವ ಚುನಾವಣಾ ಕೆಲಸಗಳನ್ನು ಯಾವುದೇ ನಿರ್ವಂಚನೆ ಇಲ್ಲದಂತೆ  ನಿರ್ವಹಿಸಬೇಕೆಂದು ಸಲಹೆ ನೀಡಿದರು.
ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಆಗಿರುವ ಬಗ್ಗೆ ಮತದಾರರ ಸೇರ್ಪಡೆ ಅರ್ಜಿಯಲ್ಲಿ ತಮ್ಮ ಮೊಬೈಲ್ ಸಂಖ್ಯೆ ನಮೂದಿಸಿದ್ದಲ್ಲಿ, ಅವಶ್ಯಕತೆ ಬಿದ್ದಲ್ಲಿ ಅಂತಹ ಮತದಾರನಿಗೆ ಮಾಹಿತಿ ನೀಡಲು ಸುಲಭವಾಗಲಿದೆ ಎಂದರು.
ಮಾ.31 ರವರೆಗೆ ಹೊಸದಾಗಿ ಮತದಾರರ ಸೇರ್ಪಡೆ ಮತ್ತು ಡಿಲಿಷನ್ ಮಾಡಿಸಲು ಅವಕಾಶವಿದೆ ಎಂದರು.
ಸಭೆಯಲ್ಲಿ ನಾನಾ ಇಲಾಖೆ ಅಧಿಕಾರಿಗಳು, ನಾನಾ  ರಾಜಕೀಯ ಪಕ್ಷಗಳ ಮುಖಂಡರುಗಳು ಹಾಜರಿದ್ದು,  ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.
ತಾಲೂಕು ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಈಶ್ವರಪ್ಪ, ಬಿಇಒ ಯೋಗೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಂಗರಾಜು, ಅರಣ್ಯಾಧಿಕಾರಿ ರವೀಂದ್ರ, ಸಹಾಯಕ ಕೃಷಿ ಅಧಿಕಾರಿ ಯು.ಎಚ್.ಭಾನುಪ್ರಕಾಶ್, ಪಶು ಇಲಾಖೆಯ ವೈದ್ಯ ಶಿವರಾಜು, ಲೋಕೋಪಯೋಗಿ ಇಲಾಖೆಯ ಕೋದಂಡರಾಮಯ್ಯ, ಕಾಂಗ್ರೆಸ್ನ ಸಿ.ಕೆ.ಸುರೇಶ್, ಹರೀಶ್, ಬಿಜೆಪಿಯ  ಮೈಲಾರಯ್ಯ, ಕೆಜೆಪಿ ಮುಖಂಡ ಎಚ್.ಆರ್.ಕೃಷ್ಣಪ್ಪ ಸೇರಿದಂತೆ ನಾನಾ ಇಲಾಖೆಗಳು ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.