'ಕೃಷಿ ಹೊಂಡ ನಿರ್ಮಾಣವಾಗಲಿ'
ನುಗ್ಗೇಹಳ್ಳಿ: ರೈತರು ಜಲಾನಯನ ಇಲಾಖೆಯಿಂದ ಕೃಷಿ ಹೊಂಡ ನಿರ್ಮಿಸಿಕೊಂಡು ಮಳೆ ನೀರನ್ನು ಇಂಗಿಸಿ ಅಂತರ್ಜಲ ಹೆಚ್ಚಿಸಿಕೊಳ್ಳಿ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ರೈತರಿಗೆ ಹೇಳಿದರು. ಅವರು ಇಲ್ಲಿಗೆ ಸಮೀಪದ ಸಂತೆಶಿವರ ಗ್ರಾಪಂ ಆವರಣದಲ್ಲಿ ಇತ್ತೀಚೆಗೆ ನಡೆದ ಅನ್ನಭಾಗ್ಯ ಯೋಜನೆ ಪಡಿತರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದುಳಿದ ವರ್ಗದವರು ಕೃಷಿ ಬದು ಕೃಷಿ ಹೊಂಡಕ್ಕೆ ಅರ್ಜಿ ಸಲ್ಲಿಸಲು ತಿಳಿಸಿದರು. ತಾಲೂಕಿಗೆ ಮಳೆಯ ಅಭಾವ ಇರುವುದರಿಂದ ಪಂಚಾಯಿತಿ ಅಧಿಕಾರಿಗಳು ಕಾರ್ಡ್ ವಿತರಿಸಲು ಕಂದಾಯ ತೆಗೆದು ಕೊಳ್ಳಬೇಡಿ ಕಾರ್ಡ್ಗೆ ಮಾತ್ರ 20 ರು ಹಣ ಪಡೆಯಲು ಸೂಚಿಸಿದರು. 13ನೇ ಹಣಕಾಸು ಯೋಜನೆ ಹಣವನ್ನು ಸದಸ್ಯರು ಪೂರ್ತಿ ಹಣವನ್ನು ಕ್ರಿಯಾ ಯೋಜನೆಗೆ ಸೇರಿಸಿ ಕೆಲಸ ಮಾಡಕೊಳ್ಳಬೇಡಿ ಶೇ.50 ರಷ್ಟು ಹಣ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಉಪಯೋಗಿಸಿ ಎಂದರು. ಅಡಿಗೆ ಅನಿಲ ಇರುವಂತವರಿಗೂ ಸರ್ಕಾರ ಮನೆ ದೀಪ ಉರಿಸಲು 3 ಲೀಟರ್ ಸೀಮೆಎಣ್ಣೆ ವಿತರಿಸಬೇಕು ಎಂದು ಆಗ್ರಹಿಸಿದರು. ಗ್ರಾಪಂ ಅಧ್ಯಕ್ಷ ಪ್ರಕಾಶ, ಹೆಚ್.ಡಿ.ಸಿ.ಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಕೆಂಪನಂಜೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಗಂಜಿಗೆರೆ ಕೆಂಪೇಗೌಡ, ಮಾಜಿ ಕೃಷಿ ಪತ್ತಿನ ಅಧ್ಯಕ್ಷ ಗಿರಿಗೌಡ, ಎನ್.ಡಿ ಶಂಕರ್, ಗ್ರಾಪಂ ಮಾಜಿ ಅಧ್ಯಕ್ಷ ಕುಳ್ಳೇಗೌಡ, ಧನಪಲ್, ಗ್ರಾಪಂ ಸದಸ್ಯ ವಿಜಯ ಕುಮಾರ್, ಜಯಲಿಂಗೇಗೌಡ, ಧನಂಜಯ, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ಅಧಿಕಾರಿ ಧೋರಣೆಗೆ ದಸಂಸ ಖಂಡನೆ
ಬೇಲೂರು: ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಬರುವ ಸಾರ್ವಜನಿಕರೊಂದಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಭಿವೃದ್ಧಿ ಅಧಿಕಾರಿ ದಯಾನಂದ್ ಉಡಾಫೆಯಿಂದ ವರ್ತಿಸುತ್ತಿದ್ದಾರೆ ಎಂದು ದಸಂಸ ತಾಲೂಕು ಸಂಚಾಲಕ ಹೊಯ್ಸಳ ಮಾಡ್ಗೋಡು ಆರೋಪಿಸಿದ್ದಾರೆ.ನಿಗಮದ ಅಭಿವೃದ್ಧಿ ಅಧಿಕಾರಿ ದಯಾನಂದ್ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಬರುವ ಸಾರ್ವಜನಿಕರು ಮತ್ತು ಮಹಿಳೆಯರೊಂದಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಉಡಾಫೆಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಚಾರಿಸಲು ಹೊದರೆ ಬೇಕಿದ್ದರೆ ಮೇಲಾಧಿಕಾರಿಗಳಲ್ಲಿ ಕೇಳಿಕೊಳ್ಳಿ ಎನ್ನುತ್ತಾರೆ. ಸಮಾಜ ಕಲ್ಯಾಣ ಇಲಾಖೆಯ ಆವರಣಕ್ಕೆ ವಾರದಲ್ಲಿ ಒಂದು ದಿನ ಬರುವ ಇವರು ಸರಿಯಾದ ಸಮಯಕ್ಕೆ ಬಾರದೆ ಮಧ್ಯಾಹ್ನದ ಸಮಯಕ್ಕೆ ಬರುತ್ತಾರೆ. ಅರ್ಜಿ ಸಲ್ಲಿಸಲು ಈ ತಿಂಗಳ 30 ರವರೆಗೆ ವಿಸ್ತರಿಸಬೇಕು ಎಂದು ದಸಂಸ ಹೋಬಳಿ ಸಂಚಾಲಕ ಮಾಲೂರು ಸತೀಶ್, ಪಾಪು ತಲಗೋಡು. ರವಿ ಮಾಡ್ಗೋಡು. ಧರ್ಮೇಳ್ ಬೆಳ್ಳೂರು ಮತ್ತಿತರರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

