ಲೋಕಾಯುಕ್ತ ಎಸ್ಪಿ ಪ್ರವಾಸ
ಹಾಸನ: ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಪ್ರೊ.ಸಿ.ಬಿ.ವೇದಮೂರ್ತಿ ಹಾಗೂ ತಂಡದವರು ಸೆ. 4 ರಂದು ಅರಕಲಗೂಡು ತಾಲೂಕಿನ ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1.30 ರವರೆಗೆ ನಂತರ ಹೊಳೆನರಸೀಪುರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ನ 2 ರಿಂದ ಸಂಜೆ 5.30 ರವರೆಗೆ ಭೇಟಿ ನೀಡಲಿದ್ದು, ಆ ಸಮಯದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದು, ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಬಹುದಾಗಿದೆ.
ಸಾಂಸ್ಕೃತಿಕ ಸಮಾರಂಭ
ಹಾಸನ: ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೆ.4ರಂದು ಬೆಳಗ್ಗೆ 10.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಸಾಂಸ್ಕೃತಿಕ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.ಶಾಸಕ ಹೆಚ್.ಎಸ್. ಪ್ರಕಾಶ್ ಉದ್ಘಾಟನೆನೆರವೇರಿಸುವರು. ವಿಧಾನಪರಿಷತ್ ಸದಸ್ಯ ಪಟೇಲ್ ಶಿವರಾಂ, ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಜೆ.ಕೆ.ರಶ್ಮಿ ಆಗಮಿಸುವರು. ಹಾಸನಾಂಬ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲೆ ಎಸ್.ಗೀತಾ ಮುಖ್ಯ ಭಾಷಣ ಮಾಡುವರು. ಪ್ರಾಂಶುಪಾಲ ಪ್ರೊ. ಎಚ್.ಎನ್. ರೂಪ್ರಾಜ್ ಚಂದನ್ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
6 ರಿಂದ ಕೊಬ್ಬರಿ ಖರೀದಿ
ಅರಸೀಕೆರೆ: ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ಉಂಡೆ ಕೊಬ್ಬರಿಯನ್ನು ಈ ಕೆಳಕಂಡಂತೆ ಖರೀದಿಸಲಾಗುವುದು.ಸೆ.6ರಂದು ಜೇಷ್ಠತಾ ಕ್ರಮಸಂಖ್ಯೆ 1439ರಿಂದ 1513, ಹಾಗೂ 2352ರಿಂದ 2525ರವರೆಗೆ ಖರೀದಿಸಲಾಗುವುದು, ಸೆ. 7ರಂದು 1514 ರಿಂದ 1588ರವರೆಗೆ ಹಾಗೂ 2527 ರಿಂದ 2601ವರೆಗೆ ಖರೀದಿಸಲಾಗುವುದು. ಸೆ.10ರಂದು 1589 ರಿಂದ 1663 ಹಾಗೂ 2602 ರಿಂದ 2676ರವರೆಗೆ ಖರೀದಿ, ಸೆ.11ರಂದು 1664 ರಿಂದ 1810ರವರೆಗೆ ಮತ್ತು 2677ರಿಂದ 2751 ರವರೆಗೆ ಖರೀದಿ, ಸೆ.12ರಂದು 1811ರಿಂದ 1885ರವರೆಗೆ ಹಾಗೂ 2752ರಿಂದ 2826 ರವರೆಗೆ ಖರೀದಿ, ಸೆ.13 ರಂದು 1886 ರಿಂದ 1911ರವರೆಗೆ ಮತ್ತು 2827 ರಿಂದ 2950ರವರೆಗೆ ಖರೀದಿಸಲಾಗುವುದು.ರೈತರು ತಮ್ಮ ಕೊಬ್ಬರಿಯನ್ನು ಮಾರುಕಟ್ಟೆ ಪ್ರಾಂಗಣದ ಖರೀದಿ ಕೇಂದ್ರಕ್ಕೆ ತರುವುದು ಎಂದು ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ನಾಳೆ ಶಿಕ್ಷಕರ
ದಿನಾಚರಣೆ
ಕೆ.ಆರ್. ನಗರ: ಜಿಪಂ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಸೆ. 5ರ ಬೆಳಗ್ಗೆ 10ಕ್ಕೆ ಪುರಸಭಾ ಬಯಲು ರಂಗಮಂದಿರದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯನ್ನು ಸಂಸದೆ ರಮ್ಯಾ ಉದ್ಘಾಟಿಸುವರು. ಶಾಸಕ ಸಾ.ರಾ. ಮಹೇಶ್ ಅಧ್ಯಕ್ಷತೆ ವಹಿಸುವರು, ಮಾಜಿ ಸಚಿವ ಎಸ್. ನಂಜಪ್ಪ ನಿವೃತ್ತ ಶಿಕ್ಷಕರಿಗೆ ಗೌರವ ಸಮರ್ಪಿಸುವರು. ಜಿಪಂ ಹಂಗಾಮಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್ ಮತ್ತು ತಾಪಂ ಅಧ್ಯಕ್ಷೆ ಕವಿತಾ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾ ವಿಜೇತ ಶಿಕ್ಷಕರಿಗೆ ಬಹುಮಾನ ವಿತರಿಸುವರು. ನಿವೃತ್ತ ಪ್ರಾಂಶುಪಾಲ ಮೋದೂರು ಮಹೇಶಾರಾಧ್ಯ ಮಾತನಾಡುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಸಿದ್ದರಾಜು, ಮರಿತಿಬ್ಬೇಗೌಡ, ಸಂದೇಶ್ ನಾಗರಾಜು, ಆರ್. ಧರ್ಮಸೇನಾ, ಸಿ.ಎಚ್. ವಿಜಯಶಂಕರ್, ಗೋ. ಮಧುಸೂದನ್, ಮಾಜಿ ಸದಸ್ಯ ತೋಂಟದಾರ್ಯ, ಕೆ.ಸಿ. ಪುಟ್ಟಸಿದ್ದಶೆಟ್ಟಿ, ಟಿ.ಕೆ. ಚಿನ್ನಸ್ವಾಮಿ ಭಾಗವಹಿಸುವರು.
ರಸ್ತೆ ದುರ್ನಾತ;
ತೀವ್ರ ಖಂಡನೆ
ಬನ್ನೂರು: ಪುರಸಭಾ ವ್ಯಾಪ್ತಿಯ ತ್ಯಾಗರಾಜ ಮೊಹಲ್ಲಾದ 19 ಮತ್ತು 6ನೇ ವಾರ್ಡಿಗೆ ಸೇರಿದ ರಸ್ತೆಗಳು ಮಲ, ಮೂತ್ರ ವಿಸರ್ಜನೆಯ ಗಲೀಜಾಗಿದ್ದು, ಆಡಳಿತ ವ್ಯವಸ್ಥೆ ಕಣ್ಣು ಮುಚ್ಚಿ ಕುಳಿತಿರುವುದು ನಾಚಿಕೇಡಿನ ಸಂಗತಿಯಾಗಿದೆ ಎಂದು ವನಿತಾ ಮಹಿಳಾ ಸಮಾಜದ ಅಧ್ಯಕ್ಷೆ ಜೆ. ವರಲಕ್ಷ್ಮೀ ಖಂಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

