ಸಮರ್ಥ ಶಿಕ್ಷಕ ರಾಷ್ಟ್ರ ರಕ್ಷಕನಾಗಬಲ್ಲ: ವತ್ಸಲಾ ನಾರಾಯಣ್
ಹಾಸನ: ಶಿಕ್ಷಕರ ಸದ್ಗುಣಗಳನುಢಿ ಗಮನಿಸಿಕೊಳ್ಳುತ್ತಾ ಬೆಳೆಯುವ ವಿದ್ಯಾರ್ಥಿ ತಾನೂ ಸದ್ಗುಣಿಯಾಗುತ್ತಾನೆ. ಅದರಿಂದ ಸಮಾಜದಲ್ಲಿ ಶಾಂತಿ ತನ್ನಷ್ಟಕ್ಕೆ ತಾನೇ ಸ್ಥಾಪನೆಯಾಗುತ್ತದೆ ಎಂದು ಸಮಾಜ ಸೇವಕಿ ವಾಸವಿ ವಿದ್ಯಾಕೇಂದ್ರ ಟ್ರಸ್ಟಿನ ಉಪಾಧ್ಯಕ್ಷೆ ವತ್ಸಲಾ ನಾರಾಯಣ್ ಅಭಿಪ್ರಾಯಪಟ್ಟರು. ನಗರದ ವಾಸವಿ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಸರ್.ಎಂ.ವಿ. ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮರ್ಥ ಶಿಕ್ಷಕ ರಾಷ್ಟ್ರ ರಕ್ಷಕನಾಗಬಲ್ಲ. ಶಿಕ್ಷಕ ತಾನು ಕೇವಲ ಬೋಧನೆಯನ್ನು ಮಾತ್ರವಷ್ಟೇ ಮಾಡುವುದಲ್ಲ. ತನ್ನ ನಡತೆಯಿಂದಲೂ ವಿದ್ಯಾರ್ಥಿಗಳಿಗೆ ಪ್ರೇರಕನಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮ ಆಯೋಜಿಸಿದ್ದ ವಿದ್ಯಾರ್ಥಿಗಳು ಎಲ್ಲ ಶಿಕ್ಷಕರಿಂದ ಸಸಿಗಳನ್ನು ನಡೆಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ್ದುದು ವಿಶೇಷವೆನಿಸಿತು. ವಾಸವಿ ವಿದ್ಯಾಕೇಂದ್ರ ಟ್ರಸ್ಟಿನ ಅಣ್ಣಯ್ಯಶೆಟ್ಟಿ, ಮಂಜುನಾಥಶೆಟ್ಟಿ, ಕಾರ್ಯದರ್ಶಿ ಗೋಪಾಲಕೃಷ್ಣ, ಜಂಟಿ ಕಾರ್ಯದರ್ಶಿ ಶೈಲಾಪ್ರಸಾದ್ ಭಾಗವಹಿಸಿದ್ದರು. ಸಂಸ್ಥೆಯು ಎಲ್ಲಾ ಶಿಕ್ಷಕರಿಗೂ ಉತ್ತಮ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿತು. ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದ ಬಾಲಕಿಯರ ವಾಲಿಬಾಲ್ ಸ್ಪರ್ಧೆಯಲ್ಲಿ ವಿಜೇತರಾಗಿ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಗೊಂಡ ಕ್ರೀಡಾಪಟುಗಳು, ತರಬೇತುದಾರ ಜಯಶಂಕರ್, ನೆರವು ನೀಡಿದ ಮನೋಹರ್ ಅವರನ್ನು ಪುರಸ್ಕರಿಸಲಾಯಿತು.
ನಗರದಲ್ಲಿ ಸದ್ಭಾವನಾ ದಿನಾಚರಣೆ ಉದ್ಘಾಟನೆ
ಹಾಸನ: ಜಡವಸ್ತು ಬತ್ತಿಯು ತನ್ನನ್ನೆ ತಾನೇ ಸುಟ್ಟುಕೊಂಡು ಇತರರಿಗೆ ಬೆಳಕನ್ನು ನೀಡುವಂತೆ ರಾಷ್ಟ್ರೀಯ ಸೇವಾ ಯೋಜನೆ ಸೇರಿದ ಸ್ವಯಂ ಸೇವಕರು ಸೇವಾ ಮನೋಭಾವದ ಜೊತೆಗೆ ಸಮಯ, ರಾಷ್ಟ್ರಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ ತಿಳಿಸಿದರು.
ನಗರದ ಎನ್ಡಿಆರ್ಕೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಸದ್ಭಾವನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಎನ್ಎಸ್ಎಸ್ನಿಂದ ಉತ್ತಮ ನಾಯಕತ್ವ, ಸಹಬಾಳ್ವೆ, ಭಾವೈಕ್ಯತೆ ಹಾಗೂ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ. ಶಾಮ್ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜ್ಯೋತಿಯಿಂದಲೇ ಬದುಕಿಗೆ ಆಧಾರ ಇನ್ನೊಬ್ಬರಿಗೂ ಬೆಳಕಾಗಿರ ಬೇಕು. ಬತ್ತಿ ಯಾವ ಕಡೆಯಾಗಿದ್ದರೂ ಜ್ಯೋತಿ ಮೇಲ್ಮುಖವಾಗಿರುತ್ತದೆ. ಹಾಗೆಯೇ ಜೀವನದಲ್ಲಿಯೂ ಜ್ಯೋತಿಯ ಜ್ವಾಲೆಯಂತೆ ಮೇಲ್ಮುಖವಾಗಿರಬೇಕು ಎಂದು ತಿಳಿಸಿದರು.
ಡಾ.ನೀಲಕಂಠ, ಎನ್. ಮನ್ವಾಚಾರ್ ಕೆ.ಯು.ಬಸಪ್ಪ, ವಿ.ಎ.ಜೋಸೆಫ್, ಡಾ.ಕುಂತಗಲ್, ಅರ್ಜುನ್, ಜಯಣ್ಣ ಹರ್ಷಲತ ಇದ್ದರು. ಮೈಸೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಎನ್ಎಸ್ಎಸ್ನಲ್ಲಿ ಉತ್ತಮ ಅಧಿಕಾರಿಯಾಗಿ ಪ್ರಶಸ್ತಿ ಪಡೆದ ಎಚ್.ಕೆ. ಜಯರಾಮುರನ್ನು ಸನ್ಮಾನಿಸಲಾಯಿತು. ಎಚ್.ಎಸ್.ನಿಂಗಪ್ಪ ಸದ್ಭಾವನೆಯ ಪ್ರತಿಜ್ಞಾ ವಿಧಿ ಬೋಧಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

