ಹೇಮಾವತಿ ಭರ್ತಿ, 1 ಅಡಿ ಬಾಕಿ
ಕನ್ನಡಪ್ರಭ ವಾರ್ತೆ ಹಾಸನ ಆ.1
ಇಲ್ಲಿನ ಹೇಮಾವತಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಈಗ ಜಲಾಶಯದ ಮಟ್ಟ 2921 ಅಡಿ ತಲುಪಿದೆ. ಇನ್ನೂ ಕೇವಲ ಒಂದೇ ಒಂದು ಅಡಿ ನೀರು ಬಂದರೆ ಜಲಾಶಯ ಪೂರ್ಣ ಭರ್ತಿ.
ಜಲಾಶಯದ ಗರಿಷ್ಠ ಮಟ್ಟ 2922 ಅಡಿಗಳು. 22,888 ಕ್ಯುಸೆಕ್, ಹೊರ ಹರಿವು 7630 ಕ್ಯುಸೆಕ್, ಈಗ ಜಲಾಶಯದಲ್ಲಿ 33.695 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 37.103 ಟಿಎಂಸಿ. ಹೇಮಾವತಿ ಜಲಾನಯನ ಪ್ರದೇಶದಲ್ಲಿ ಶುಕ್ರವಾರ ಕೂಡ ಮಳೆ ಬಿರುಸಿನಿಂದ ಕೂಡಿದ್ದು, ಸಕಲೇಶಪುರ ಮತ್ತು ಮೂಡಿಗೆರೆ ವ್ಯಾಪ್ತಿಯಲ್ಲಿ ಅಧಿಕ ಮಳೆಯಾಗುತ್ತಿದೆ. ವಾಟೆಹೊಳೆ ಜಲಾಶಯ: 3149.60 ಅಡಿ. ಒಳ ಹರಿವು 505 ಕ್ಯುಸೆಕ್, ಹೊರ ಹರಿವು ಇಲ್ಲ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ 0.624, ಜಲಾಶಯದ ಇಂದಿನ ನೀರಿನ ಸಂಗ್ರಹ 0.480, ಟಿಎಂಸಿ.
ಯಗಚಿ ಜಲಾಶಯ: ಯಗಚಿ ಜಲಾಶಯದ ನೀರಿನ ಮಟ್ಟ 3157.671 ಅಡಿ. ಒಳ ಹರಿವು 1750 ಕ್ಯುಸೆಕ್, ನಾಲೆಗೆ 250 ಕ್ಯುಸೆಕ್, ಜಲಾಶಯದ ಒಟ್ಟು ಸಂಗ್ರಹ ಮಟ್ಟ 3.600 ಟಿಎಂಸಿ, ಜಲಾಶಯದಲ್ಲಿ ಇಂದಿನ ನೀರಿನ ಸಂಗ್ರಹ 2.494 ಟಿಎಂಸಿ.
ಜಿಲ್ಲೆಯ ಮಳೆ ವಿವರ (ಮಿಮೀ.ಗಳಲ್ಲಿ): ಆಲೂರು-17, ಪಾಳ್ಯ-21.18, ಕೆಂಚಮ್ಮನ ಹೊಸಕೋಟೆ-3.6, ಕುಂದೂರು-24, ಅರಕಲಗೂಡು-10.2, ಮಲ್ಲಿಪಟ್ಟಣ-24, ರಾಮನಾಥಪುರ-13.8, ಕೊಣನೂರು-11.2, ದೊಡ್ಡಮಗ್ಗೆ-16.2, ದೊಡ್ಡಬೆಮ್ಮತ್ತಿ-15.4, ಬಸವಾಪಟ್ಟಣ-14.3, ಅರಸೀಕೆರೆ-4.5, ಬಾಣಾವರ-7.8, ಗಂಡಸಿ-5.2, ಕಣಕಟ್ಟೆ-3.6, ಯಳವಾರೆ-6.6, ಜಾವಗಲ್-8.4, ಬೇಲೂರು-17.6, ಹಳೇಬೀಡು-12, ಹಗರೆ-16, ಅರೇಹಳ್ಳಿ-64.8, ಬಿಕ್ಕೋಡು-27, ಗೆಂಡೆಹಳ್ಳಿ-46, ಚನ್ನರಾಯಪಟ್ಟಣ-5.6, ಉದಯಪುರ-3.6, ಬಾಗೂರು-8.3, ಹಿರಿಸಾವೆ-7.8, ಶ್ರವಣಬೆಳಗೊಳ-7 ಮಿ.ಮೀ.ಮಳೆ.ಹಾಸನ-13.6, ಕಟ್ಟಾಯ-15, ಶಾಂತಿಗ್ರಾಮ-9.1,ದುದ್ದ-8,ಮಳೆಯಾಗಿದೆ.
ನೀರು ಬಿಡುಗಡೆ ಇಂದು
ಹಾಸನ: ಹೇಮಾವತಿ ಜಲಾಶಯ ಭರ್ತಿಯಾಗಿರುವುದರಿಂದ ಶನಿವಾರ ಬೆಳಗ್ಗೆ ಜಲಾಶಯದ ಗೇಟ್ಗಳನ್ನು ತೆರೆದು ಭಾರಿ ನೀರನ್ನು ಬಿಡುಗಡೆ ಮಾಡಲಾಗುವುದು. ಆದ್ದರಿಂದ ಜಲಾಶಯದ ಅಜುಬಾಜಿನಲ್ಲಿ ಇರುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

