ಹಾಸನ

ಹೇಮೆ ಎಡದಂಡೆ ನಾಲೆ ಆಧುನೀಕರಣಕ್ಕೆ ರು. 562 ಕೋಟಿ

Published On :

ಚನ್ನರಾಯಪಟ್ಟಣ: ಪಟ್ಟಣದ ಹೊರಭಾಗದಲ್ಲಿ ಹಾದು ಹೋಗಿರುವ  ಹೇಮಾವತಿ ಎಡದಂಡೆ ನಾಲೆ ಒಡೆದು ಹಾನಿಯಾಗಿರುವ ಸ್ಥಳಕ್ಕೆ  ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ  ತುಮಕೂರು ಜಿಲ್ಲಾ ಉಸ್ತುವಾರಿ  ಸಚಿವ ಟಿ.ಬಿ ಜಯಚಂದ್ರ ಭೇಟಿ ನೀಡಿ ಪರಿಶೀಲಿಸಿದರು.
 ಕಳೆದ 15 ದಿನಗಳ ಹಿಂದೆ ಹೊಸದಾಗಿ ನಿರ್ಮಾಣವಾಗಿದ್ದ ನಾಲೆ ಒಡೆದ ಪರಿಣಾಮ ತುಮಕೂರು ಜಿಲ್ಲೆಗೆ ಕುಡಿಯುವ ನೀರಿನ ಹಾಹಾಕಾರದ ಹಿನ್ನೆಲೆಯಲ್ಲಿ ನಾಲಾ ಒಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳದಲ್ಲಿದ್ದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ತ್ವರಿತ ಹಾಗೂ ಗುಣಮಟ್ಟದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
    ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ತುಮಕೂರು ಕಡೆಗೆ ನೀರು ಬಿಟ್ಟ ಮೊದಲ ವಾರದಲ್ಲಿಯೇ ಕಳೆದ ಎರಡು ವರ್ಷಗಳಲ್ಲಿ ನಾಲೆ ಒಡೆಯುತ್ತಿರುವುದರಿಂದ ಹಲವು ಅನುಮಾನಗಳನ್ನು ತಮ್ಮ ಜಿಲ್ಲೆಯ ಜನತೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸ್ಥಳ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಆ ರೀತಿಯ ಯಾವುದೇ ಕಾರಣಗಳು ಕಾಣುತ್ತಿಲ್ಲ ಎಂದು ತಿಳಿಸಿದರು.
ಮೊದಲು ನೀರು ಆನಂತರ ತನಿಖೆ: ನಾಲೆ ಒಡೆಯಲು ಕಾರಣ ಏನೆಂದು ಹುಡುಕುವ ಮುನ್ನಾ ನಾಲೆಯನ್ನು ರಿಪೀರಿ ಮಾಡಿ ಜನತೆಗೆ ನೀರು ನೀಡುವುದು ತಮ್ಮ ಮುಖ್ಯ ಗುರಿಯಾಗಿದೆ. ಜಿಲ್ಲೆಯಲ್ಲಿ ಮಳೆಯಿಲ್ಲದೆ ಜನತೆ ನೀರಿಗಾಗಿ ಹಾಹಾಕಾರ ಪಡುತ್ತಿರುವ ಸಂದರ್ಭದಲ್ಲಿ ತಾವು ಮೊದಲು ರಿಪೇರಿಗೆ ಆದ್ಯತೆ ನೀಡಲಾಗಿದೆ.
 ನಾಲೆ ರಿಪೇರಿಯಾದ ನಂತರದಲ್ಲಿ ಸಮಿತಿ ರಚಿಸಿ ತನಿಖೆ ಮಾಡಿಸಲಾಗುವುದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.
 ತಿಪಟೂರು ಶಾಸಕ ಷಡಾಕ್ಷರಿ, ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜನಿಯರ್, ಕೃಷ್ಣೇಗೌಡ, ಸೂಪರೆಂಟೆಂಡಿಗ್ ಎಂಜನಿಯರ್, ಪಧ್ಮನಾಭ್,  ಇಲಾಖೆಯ ಕಾರ್ಯಪಾಲಕ ಎಂಜನಿಯರ್
ನಾರಾಯಣ್, ಸಹಾಯಕ ಕಾರ್ಯಪಾಲಕ ಎಂಜನಿಯರ್ ಚಿಕ್ಕಮಲ್ಲಯ್ಯ ಇದ್ದರು.

ನಾಲೆ ಆಧುನೀಕರಣ
35ವರ್ಷಗಳ ಹಳೆಯದಾದ ಸಾಮರ್ಥ್ಯ ಕಡಿಮೆಯಿರುವ ನಾಲೆಯನ್ನು ಆಧುನಿಕರಿಸುವುದು ಇಂದಿನ ಪರಿಸ್ಥಿತಿಗೆ ಅಗತ್ಯವಿದ್ದು, ಈ ಬಗ್ಗೆ ಕಾವೇರಿ ನೀರಾವರಿ ನಿಗಮದ ವತಿಯಿಂದ 562ಕೋಟಿ ವೆಚ್ಚದಲ್ಲಿ ನಾಲೆ ಆಧುನೀಕರಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಒಡೆದ ನಾಲೆಯನ್ನು ಗುಣಮಟ್ಟದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಮುಂದಿನ ವಾರದಲ್ಲಿ ತುಮಕೂರಿಗೆ ನಾಲೆ ಮುಖೇನ ಕುಡಿಯುವ ನೀರು ಬಿಡುವಂತೆ ಆಗ್ರಹಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.