ಸೂಚನಾ ಫಲಕ ಹಾಕಲು ಆಗ್ರಹ
ಅರಸೀಕೆರೆ: ಬೆಂಗಳೂರು ಮತ್ತು ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಪಟ್ಟಣದ ಸಮೀಪ ದೂರದ ಜಾಜೂರು ಗ್ರಾಮದ ಮಧ್ಯೆ ಹಾದು ಹೋಗಿದ್ದು, ರಸ್ತೆಯ ಎರಡೂ ಭಾಗದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಇದೆ.
ಅಲ್ಲದೇ ನಾಗತೀಹಳ್ಳಿ ಗ್ರಾಮಕ್ಕೆ ಹೋಗುವ ತಿರುವು ರಸ್ತೆಯಿದ್ದು, ಯಾವುದೇ ಸೂಚನಾ ಫಲಕ ಅಳವಡಿಸದ ಕಾರಣ ರಸ್ತೆ ಅಪಘಾತಗಳಿಂದ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದಕಾರಣ ಈ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಸೂಚನಾ ಫಲಕ ಅಳವಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪಟ್ಟಣದ ತಾಲೂಕು ಕಚೇರಿಯಿಂದ ಕೂಗಳತೆಯ ದೂರದಲ್ಲಿರುವ ಜಾಜೂರು ಗ್ರಾಮದ ಎರಡು ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತುಂಬಾ ಇಳಿಜಾರಿನಲ್ಲಿದ್ದು ಅತೀ ವೇಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಶಾಲೆಗೆ ಮಕ್ಕಳು ಹೋಗುವ ಸಂದರ್ಭದಲ್ಲಿ ಭೀತಿಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕೂಡಲೇ ಸೂಚನಾ ಫಲಕಗಳನ್ನು ಹಾಕಿ ವಾಹನ ಚಾಲಕರಿಗೆ ಶಾಲೆ ಇರುವ ಬಗ್ಗೆ ಮಾಹಿತಿ ನೀಡಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.
ನಾಗತೀಹಳ್ಳಿ ಗ್ರಾಮದ ತಿರುವಿನ ಜಾಗದಲ್ಲಿ ರಸ್ತೆಯ ಎರಡು ಕಡೆಗಳಿಂದ ಬರುವ ವಾಹನಗಳನ್ನು ಚಾಲಕರು ವೀಕ್ಷಿಸಲು ಸಾಧ್ಯವಾಗದೆ ಏಕಾಏಕಿ ನುಗ್ಗುವ ಕಾರಣ ಅಪಘಾತಗಳು ಸಂಭವಿಸಿಅನೇಕ ಜನರು ಪ್ರಾಣ ಕಳೆದುಕೊಂಡರೆ ಕೆಲವರು ಅಂಗವಿಕಲರಾಗಿದ್ದಾರೆ.
ಆದ್ದರಿಂದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಇಂತಹ ಸೂಕ್ಷ್ಮ ಪ್ರದೇಶದಲ್ಲಿ ವಾಹನ ಚಾಲಕರಿಗೆ ಅನುಕೂಲವಾಗುವ ಸೂಚನಾ ಫಲಕಗಳನ್ನು ತಕ್ಷಣ ಆಳವಡಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

