ಜಾನಪದ ಪೋಷಿಸಿ ಬೆಳೆಸಿ
ಕನ್ನಡಪ್ರಭ ವಾರ್ತೆ, ಹೊಳೆನರಸೀಪುರ ಜು. 25
ಜನಪದ ಕಲಾ ಪರಿಷತ್ ಮತ್ತು ಶ್ರೀರಾಮಕಲಾವೃಂದ ಶ್ರೀರಾಮನಗರ ವತಿಯಿಂದ ಇತ್ತೀಚೆಗೆ ತಾಲೂಕಿನ ಎಳ್ಳೇಶಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಾನಪದ ಗೀತ ಗಾಯನ ಸ್ಪರ್ಧೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಶಿಕ್ಷಕ ಡಾ. ಎನ್. ರಂಗ ನೆರವೇರಿಸಿ ಮಾತನಾಡಿ, ಜನ ಸಾಮಾನ್ಯರು ಅದರಲ್ಲೂ ರೈತರು, ತಮ್ಮ ನಿತ್ಯ ಜೀವನದ ಕೆಲಸ ಕಾರ್ಯಗಳಲ್ಲಿ ಶ್ರಮದ ಭಾರ ಕಳೆಯಲು ತಮ್ಮ ಅನುಭವದ ನುಡಿಗಳನ್ನು ನುಡಿಯುವುದೇ ಜನರ ಪದ ಜನಪದ ಗೀತೆಯಾಗಿದೆ. ನೈತಿಕತೆ ಧಾರ್ಮಿಕತೆ ಉಳಿಸಿ ಬೆಳಸಿಕೊಳ್ಳುವ ದಿಸೆಯಲ್ಲಿ ಬಹಳ ಉಪಯುಕ್ತವಾಗಿದೆ ಎಂದರು.
ಸಂಸ್ಕೃತಿಯ ಪ್ರತೀಕ: ಉಪನ್ಯಾಸಕ ಪಿ.ಚನ್ನರಾಯಿ ಮಾತನಾಡಿ, ಪ್ರತಿದಿನ ಸೂರ್ಯೋದಯದಿಂದ ಪ್ರಾರಂಭವಾದ ರೈತ ಜೀವನ ಚಟುವಟಿಕೆಯ ಪ್ರತೀ ಹಂತದಲ್ಲೂ ಜನಪದ ಕಂಡಿದೆ. ಧಾರ್ಮಿಕ, ನೈತಿಕ ವಿಚಾರ ಮತ್ತು ಸಂಸ್ಕೃತಿಯ ಪ್ರತೀಕವಾದ ಜನಪದ ಸಾಹಿತ್ಯ ಪೋಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಶಿಕ್ಷಕ ಶಿವರಾಜು ಮಾತನಾಡಿದರು. ಕಾರ್ಯಕ್ರಮದ ಧ್ಯೇಯೋದ್ಧೇಶಗಳ ಕುರಿತು ಸಂಘದ ಅಧ್ಯಕ್ಷ ಹೆಚ್.ಎನ್.ಕೃಷ್ಣ, ಕಾರ್ಯದರ್ಶಿ ಪಿ.ಶಂಕರ್, ಮಹಿಳಾ ಘಟಕದ ಅಧ್ಯಕ್ಷ ಕುಸುಮ ಗುಣಶೇಖರ್ ಮಾತನಾಡಿದರು. ಪ್ರೌಢಶಾಲಾ ವಿಭಾಗದ ವಿಜೇತರಾದ ಶತನ್ ರಾಜ್ (ಪ್ರಥಮ), ಹೆಚ್.ಟಿ.ರೂಪ (ದ್ವಿತೀಯ), ದಿವ್ಯಶ್ರೀ (ತೃತೀಯ ), ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಎಂ.ಪಿ. ವೇದ (ಪ್ರಥಮ), ಸಿಂಧು (ದ್ವಿತೀಯ), ಎಲ್.ಅಂಜು (ತೃತೀಯ) ಅವರಿಗೆ ಪ್ರಶಸ್ತಿ ಪಾರಿತೋಷಕ , ಬಹುಮಾನ ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

