ಅರಸೀಕೆರೆಗೆ ನಗರಸಭೆ ಗರಿ
ಪಿ. ಶಾಂತಕುಮಾರ್
ಅರಸೀಕೆರೆ: ಇಲ್ಲಿನ ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೆ ಏರುವ ಕಾಲ ಸನ್ನಿಹಿತವಾಗುತ್ತಿದ್ದು, ಇದರಿಂದ ಬಹುದಿನಗಳ ನಾಗರಿಕರ ಕನಸು ನನಸಾಗಲಿದೆ.
53, 265 ಜನಸಂಖ್ಯೆಯನ್ನು ಹೊಂದಿರುವ, ಕಲ್ಪತರು ನಾಡು ಎಂದು ಹೆಸರಾಗಿರುವ ಅರಸೀಕೆರೆ ಹಾಸನ ಜಿಲ್ಲೆಯಲ್ಲೇ ಪ್ರಮುಖ ತಾಲೂಕು ಕೇಂದ್ರ. ರೈಲ್ವೆ ಸೇರಿದಂತೆ ತಾಲೂಕು ಕೇಂದ್ರವು ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆ ಹೊಂದಿಗೆ.
ಹತ್ತಾರು ಗ್ರಾಮ ನಗರಸಭೆಗೆ ಸೇರ್ಪಡೆ: ಇಂತಹ ಪ್ರದೇಶಗಳೆಲ್ಲವೂ ಪಟ್ಟಣದ ಸುತ್ತಮುತ್ತಲಿನ 3.5 ಕಿ.ಮೀ. ವ್ಯಾಪ್ತಿಯಲ್ಲಿ ತಿರುಪತಿ, ಗುಂಡ್ಕಾನಹಳ್ಳಿ, ಗೀಜಿಹಳ್ಳಿ, ಹೆಂಜಗೊಂಡನಹಳ್ಳಿ, ಕೋಡಿಹಳ್ಳಿ, ಭೈರನಾಯ್ಕನಹಳ್ಳಿ, ಗೊಲ್ಲರಹಟ್ಟಿ, ಜಾಜೂರು, ಮುದ್ದನಹಳ್ಳಿ ಅಂಚೆಕೊಪ್ಪಲು ಇನ್ನೂ ಮುಂತಾದ ಕೆಲ ಪ್ರದೇಶಗಳು ನಗರಸಭಾ ವ್ಯಾಪ್ತಿಗೆ ಸೇರ್ಪಡೆಯಾಗಲಿವೆ. ಹಿಂದೆ ಇದ್ದ 21 ವಾರ್ಡಾಗಳಿಗೆ ಬದಲಾಗಿ ಕಳೆದ ಬಾರಿಯ ಪುರಸಭಾ ಚುನಾವಣೆಯಲ್ಲಿ 27 ವಾರ್ಡಗಳನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿಯೇ ಅನೇಕರು ಪುರಸಭೆಯೂ ನಗರಸಭೆಯಾಗಿ ಪರಿವರ್ತನೆ ಆಗುವ ನಿರೀಕ್ಷೆಯನ್ನು ಹೊಂದಿದ್ದರು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ನೇತೃತ್ವದಲ್ಲಿ ಪುರಸಭಾ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಈ ಬಗ್ಗೆ ಸರ್ವಾನುಮತದ ತೀರ್ಮಾನ ಕೈಗೊಂಡು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತ್ತು. ಇದರ ಆಧಾರದ ಮೇಲೆ ಅಂದಿನ ಬಿಜೆಪಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಸುರೇಶ್ ಕುಮಾರ್ ನಗರಸಭೆಯನ್ನಾಗಿ ಪರಿವರ್ತಿಸಲು ಆದೇಶ ನೀಡಿದ್ದರು. ಆದರೆ ಕಾರಣಾಂತರಗಳಿಂದ ಅದು ಜಾರಿಗೆ ಬಂದಿರಲಿಲ್ಲ.
ಸದ್ಯದಲ್ಲೇ ಪ್ರಕಟ: ಅರಸೀಕೆರೆಯನ್ನು ನಗರಸಭೆಯನ್ನಾಗಿ ಪರಿವರ್ತಿಸಲು ಕೆಲವು ಅಂಕಿ ಅಂಶಗಳು ಮತ್ತು ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದೆ. ರಾಜ್ಯ ಸರ್ಕಾರ ಸದ್ಯದಲ್ಲೇ ಸೂಕ್ತ ನಿರ್ಧಾರವನ್ನು ಪ್ರಕಟಿಸುವ ಮೂಲಕ ನಗರದ ಜನತೆಯ ಬಹುದಿನಗಳ ಕನಸನ್ನು ಈಡೇರಿಸಲಿಗೆ. ಮುಂದಿನ ಚುನಾವಣೆ ವೇಳೆಗೆ 31 ಅಥವಾ 33 ವಾರ್ಡ್ ರಚನೆಯಾಗುವ ಸಾಧ್ಯತೆ ಇದೆ.
ನಗರಸಭೆಯಾಗಿ ಪರಿವರ್ತನೆಗೊಳ್ಳುತ್ತಿರುವುದರಿಂದ ನಾಗರಿಕರಿಗೆ ಲಾಭ-ನಷ್ಟ ಎರಡೂ ಉಂಟಾಗಲಿದೆ. ನಿವೇಶನ, ಕಟ್ಟಡಗಳ ತೆರಿಗೆ ಹೆಚ್ಚಾಗಲಿದೆಯಿಲ್ಲದೆ ನೀರಿನ ತೆರಿಗೆ ಕೂಡ ದ್ವಿಗುಣವಾಗುವ ಸಂಭವವಿದೆ. ಈಗ ಇರುವ ಮುಖ್ಯಾಧಿಕಾರಿಗಳ ಬದಲಿಗೆ ಆಯುಕ್ತರು ಬರುತ್ತಾರೆ. 3 ಜನ ಎಂಜಿನಿಯರ್, 3 ಜನ ಆರೋಗ್ಯಾಧಿಕಾರಿಗಳು, ಪೌರ ಕಾರ್ಮಿಕರ ಸಂಖ್ಯೆ 35-100ಕ್ಕೆ ಏರಿಕೆಯಾಗುತ್ತದೆ. ಸಿಬ್ಬಂದಿಗಳು ಹೆಚ್ಚಾಗಿ ನಿಯೋಜನೆಗೊಳ್ಳುತ್ತಾರೆ.
ಅನುದಾನ ಹೆಚ್ಚಳ: ಪುರಸಭೆಗೆ ನಗರೋತ್ಥಾನ, ಎಫ್.ಎಫ್.ಸಿ. 13ನೇ ಹಣಕಾಸು ಆಯೋಗ, ಫರ್ಪಾಮೆನ್ಸ್ ಫಂಡ್, ಈ ರೀತಿ ನಾಲ್ಕು ರೀತಿಯ ಆದಾಯ ಬರುತ್ತಿದೆ. ಈ ಎಲ್ಲವುಗಳಿಂದ 9 ಕೋಟಿ ಅನುದಾನ ಬರುತ್ತಿದ್ದು ಇದು ಮುಂದೆ ನಗರಸಭೆಯಾಗಿ ಮಾರ್ಪಟ್ಟಾಗ 20-25 ಕೋಟಿಗಳಾಗುತ್ತವೆ. ಇದರಿಂದ ಇಲ್ಲಿನ ಜನತೆಗೆ ಮೂಲಭೂತ ಸೌಕರ್ಯಗಳು ದೊರಕಲಿವೆ ಎಂಬ ನಿರೀಕ್ಷೆ ಹೊಂದಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

