ಮಹಿಳೆಯರು ಆತ್ಮರಕ್ಷಣೆಗೆ ಪ್ರತಿದಾಳಿ ನಡೆಸಿ
ಆಲೂರು: ಮಹಿಳೆಯರು ಲೈಂಗಿಕ ದೌರ್ಜನದಿಂದ ಪಾರಾಗಲು ಸ್ವಯಂ ಆತ್ಮ ರಕ್ಷಣೆಗೆ ಮುಂದಾಗಬೇಕು ಹಾಗೂ ಪ್ರತಿದಾಳಿ ನಡೆಸಿ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳುವಂತೆ ಸಕಲೇಶಪುರ ಡಿವೈಎಸ್ಪಿ ಸ್ನೇಹ ಸಲಹೆ ನೀಡಿದರು.
ಜಿಲ್ಲಾ ಪೋಲೀಸ್ ಇಲಾಖೆ, ತಾಲೂಕು ಜಯಕರ್ನಾಟಕ ಸಂಘಟನೆ, ಪದವಿ ಪೂರ್ವ ಕಾಲೇಜು ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಮಹಿಳೆಯರು- ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರ ತಡೆ ಜಾಗೃತಿ ಅರಿವು ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪೆಪ್ಪರ್ ಸ್ಪ್ರೇ ಇಟ್ಟುಕೊಳ್ಳಿ: ಅಪರಾಧಗಳು ವಿಕೃತ ಮನಸ್ಸಿನಿಂದ ಆಗುತ್ತಿದೆ. ಇಂತಹ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೆಣ್ಣು ಮಕ್ಕಳು ತಲೆ ಎತ್ತಿ ಸುತ್ತ ಮುತ್ತ ತಮ್ಮ ಅಕ್ಕ ಪಕ್ಕದಲ್ಲಿ ಅಪರಿಚಿತ ವ್ಯಕ್ತಿಗಳು ಇದ್ದಲ್ಲಿ ಜಾಗೃತರಾಗಿರಬೇಕು. ಬ್ಯಾಗಿನಲ್ಲಿ ಪೆಪ್ಪರ್ ಸ್ಪ್ರೇ (ಖಾರಪುಡಿ) ಯಂತಹ ಆಪತ್ಬಾಂಧವ ವಸ್ತುಗಳನ್ನು ಜೊತೆಯಲ್ಲಿಟ್ಟುಕೊಂಡು ಓಡಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ದಂಡಾಧಿಕಾರಿ ಮಹದೇವಯ್ಯ, ಇಂಥ ಕೃತ್ಯಗಳಿಂದ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಸಂವಿಧಾನದ 4 ಅಂಗಗಳು ಸಹ ಈ ಬಗ್ಗೆ ಜಾಗೃತವಾಗಬೇಕು. ಲೈಂಗಿಕ ಶಿಕ್ಷಣವನ್ನು ಶಾಲಾ ಕಾಲೇಜುಗಳಲ್ಲಿ ಅಳವಡಿಸಿ ಅವರಿಗೆ ಅದರ ಬಗ್ಗೆ ಅರಿವು ಮೂಡಿಸಬೇಕೆಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಎ.ಟಿ.ಮಲ್ಲೇಶ್, ದೌರ್ಜನ್ಯ ಕಂಡು ಬಂದಲ್ಲಿ ಸನಿಹದ ಆಲೂರು ಸಿಡಿಪಿಒ ಕಚೇರಿ ಸಂಖ್ಯೆ 218220 ಮಹಿಳಾ ಸಹಾಯ ವಾಣಿ ಸಂಖ್ಯೆ -218822 ಅಥವಾ ಹಾಸನ ಉಪ ನಿರ್ದೇಶಕರು 08172-267218 ಸಂಪರ್ಕಿಸಲು ಕೋರಿದರು.
ಉಗ್ರ ಶಿಕ್ಷೆ ನೀಡಿ: ಅಧ್ಯಕ್ಷತೆ ವಹಿಸಿ ಮಾತನಾಡಿದ ಸಪಪೂ ಕಾಲೇಜು ಪ್ರಾಂಶುಪಾಲ ಯು.ಎ.ವೆಂಕಟರಾಮು, ದೇಶದಲ್ಲಿ, ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚುತ್ತಿದ್ದು, ಇಂಥ ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡಬೇಕು. ತಮ್ಮನ್ನು ತಾವು ಸಂರಕ್ಷಿಸಿಕೊಳ್ಳುವ ಕರೆಯನ್ನು ಪ್ರತಿಯೊಬ್ಬ ಹೆಣ್ಣು ರೂಪಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ತಾ ಜಯ ಕರ್ನಾಟಕ ಅಧ್ಯಕ್ಷ ಹನುಂತೇಗೌಡ, ಕಾರ್ಯದರ್ಶಿ ಎಚ್.ಡಿ.ಪ್ರದೀಪ್ ಕುಮಾರ್ ಎಸ್ಸಿ ಮತ್ತು ಎಸ್ಟಿ ಘಟಕದ ಅಧ್ಯಕ್ಷ ವಿನುತ್ ಕುಮಾರ್, ಉಪಾಧ್ಯಕ್ಷ ಶಿವು, ಜಿಪಂ ಎಇಇ ಶಿವಕುಮಾರಪ್ಪ ಕಾಲೇಜಿನ ಎಲ್ಲಾ ಉಪನ್ಯಾಸ ವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

