ಹಾಸನ

ತಲೆಮಾರು ಕಾಯುವ ಹಲಸು ಬೆಳೆ

Published On :

ಅರಸೀಕೆರೆ: ಹಲಸು ಕಡಿಮೆ ಖರ್ಚಿನಲ್ಲಿ ಬೆಳೆಯುವ ಬಹೂಪಯೋಗಿ ಹಾಗೂ ಅನೇಕ ತಲೆಮಾರುಗಳನ್ನು ಕಾಯುವಂತಹ ಬೆಳೆಯಾಗಿದೆ ಎಂದು ಬೆಂಗಳೂರಿನ ಕೃಷಿ ವಿವಿ ಕುಲಪತಿ ಡಾ.ಕೆ.ನಾರಾಯಣಗೌಡ ತಿಳಿಸಿದರು.
ಕಂದಲಿಯ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಇಲಾಖೆ ಹಾಗೂ ಕಾರೆಕೆರೆಯ ಕೃಷಿ ಮಹಾವಿದ್ಯಾಲಯದ ವತಿಯಿಂದ ಇತ್ತೀಚೆಗೆ ತಾಲೂಕಿನ ಹಿರೇಸಾದರಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಹಲಸು ಬೆಳೆಗಾರರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮಗಳಲ್ಲಿ ಬೆಳೆಯಾಧಾರಿತ ಸಂಘಗಳನ್ನು ರಚಿಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಬೇಸಾಯ ಪದ್ಧತಿಗಳನ್ನು ಅನುಸರಿಸುವುದರಿಂದ ರೈತರು ಆರ್ಥಿಕವಾಗಿ ತಮ್ಮ ಜೀವನ ಶೈಲಿಯನ್ನು ವೃದ್ಧಿಸಿಕೊಳ್ಳಬಹುದೆಂದು ತಿಳಿಸಿದರು
ಸಂಘಗಳನ್ನು ಸಂಘಟಿಸುವುದರಿಂದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗುವುದಲ್ಲದೆ, ಸರ್ಕಾದಿಂದ ಅನೇಕ ಸೌಲಭ್ಯಗಳು ಕೂಡ ದೊರೆಯುತ್ತವೆ ಎಂದು ತಿಳಿಸಿದರು.
ಕಾರೆಕೆರಯ ಕೃಷಿ ಮಹಾವಿದ್ಯಾಲಯ  ಡೀನ್ (ಕೃಷಿ) ಡಾ.ಎಲ್.ಮಂಜುನಾಥ್ ಮಾತನಾಡಿ, ಹಲಸು ಮೌಲ್ಯವರ್ಧಿತ ಗುಣ ಹೊಂದಿರುವುದರಿಂದ ರೈತರಿಗೆ ಹೆಚ್ಚಿನ ಲಾಭ ನೀಡುವ ಬೆಳೆಯಾಗಿದೆ. ಆದುದರಿಂದ ಹಲಸಿನ ಮೌಲ್ಯವನ್ನು ಅರಿತು ಹಲಸು ಬೆಳೆಗೆ ಹೆಚ್ಚಿನ ಒತ್ತು ನೀಡಬೇಕೆಂದು ತಿಳಿಸಿದರು.
ಹಣ್ಣಿನಲ್ಲಿ ಇರುವ ಅಧಿಕ ಪೊಟ್ಯಾಷಿಯಂ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ನಾರಿನ ಅಂಶವು ನಮ್ಮ ಜಠರ, ಚಿಕ್ಕಕರುಳು, ದೊಡ್ಡಕರುಳನ್ನು ಶುದ್ದಿ ಮಾಡುವ ಸಾಮರ್ಥ್ಯ ಹೊಂದಿದ್ದು ಜೀರ್ಣ ಕ್ರಿಯೆಯನ್ನು ಉತ್ತಮವಾಗಿಸುತ್ತದೆ ಎಂದು ತೋಟಗಾರಿಕಾ ವಿಜ್ಞಾನಿ ಡಾ.ಮಂಜುನಾಥಸ್ವಾಮಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸಿದ್ದಗಂಗಯ್ಯ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಎಸ್. ಚನ್ನಕೇಶವ, ಡಾ. ಟಿ.ಎಸ್. ಮಂಜುನಾಥಸ್ವಾಮಿ, ಡಾ.ಪಂಕಜ, ಗ್ರಾಮ ಪಂಚಾಯಿತಿ  ಅಧ್ಯಕ್ಷ ರಮೇಶ್, ಹಿರೇಸಾದರಹಳ್ಳಿ ಗ್ರಾಮದ ನಿವೃತ್ತ ಮುಖ್ಯೋಪಾಧ್ಯಾಯ ಶಿವನಂಜಪ್ಪ, ಅರಸೀಕರೆ ತಾಲೂಕಿನ ಸಹಾಯಕ ತೋಟಗಾರಿಕಾ ನಿರ್ದೇಶಕ ರಘು, ಗಂಡಸಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಚ್.ಎಸ್.ಹರೀಶ್ ಕುಮಾರ, ಡಿ.ಎಂ.ಕುರ್ಕೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಣಿ.  ಗ್ರಾಮದಲ್ಲಿ ಕಾರ್ಯಕ್ರಮ ನೆರವೇರಿಸಲು ಸಹಕಾರ ನೀಡಿದ ಗಂಗಾಧರಪ್ಪ ಹಾಗೂ ಅನುವುಗಾರ ನಿರಂಜನಮೂರ್ತಿ, ಹಲಸು ಬೆಳೆಗಾರರ ಸಂಘದ ಸದಸ್ಯರು ಮತ್ತು ಗ್ರಾಮದ ಸುಮಾರು 150 ರೈತ ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು.
ಕಣಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಎಸ್.ಬಸವರಾಜು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಹಲಸು ಬೆಳೆಗಾರರ ಸಂಘದ ಸದಸ್ಯರಿಗೆ ಅಂಟುರಹಿತ ಹಲಸಿನ ತಳಿ ಗಿಡಗಳನ್ನು ವಿತರಿಸಲಾಯಿತು.



ನೀರಿನ ಲಭ್ಯತೆ ಕಡಿಮೆ ಇದ್ದರೂ ಬೆಳೆಯಬಹುದಾಗಿದ್ದು, ಎಲ್ಲ ಕಾಲದಲ್ಲೂ ಹಸಿರಾಗಿರುತ್ತದೆ. ಅಂತರ್ಜಲದ ಮಟ್ಟ ಕಡಿಮೆಯಾಗುತ್ತಿರುವ ನಿಟ್ಟಿನಲ್ಲಿ ನೀರಿನ ಸದ್ಬಳಕೆಗೆ ಅನುಕೂಲವಾದ ಬೆಳೆ ಆಯ್ಕೆ ಮುಖ್ಯ ವಾಗಿರುವುದರಿಂದ ಹಲಸು ಬೆಳೆ ಆಯ್ಕೆ ಅತಿ ಸೂಕ್ತ.
- ಡಾ.ಕೆ.ನಾರಾಯಣಗೌಡ, ಬೆಂಗಳೂರಿನ ಕೃಷಿ ವಿವಿ ಕುಲಪತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.