ಹಾಸನ

ಅರಸೀಕೆರೆ ಪರಿಸರ ದಿನಾಚರಣೆ

Published On :

ಅರಸೀಕೆರೆ: ಮಾನವನ ಸ್ವಾರ್ಥ ಹಾಗೂ ದುರಾಸೆಗೆ ಸಿಲುಕಿ ನಲುಗುತ್ತಿರುವ ಭೂತಾಯಿಯನ್ನು ಸಂರಕ್ಷಿಸಲು ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿಕೊಂಡು ಸಸ್ಯ ಸಂಪತ್ತು ಹಾಗೂ ಅರಣ್ಯ ಸಂಪತ್ತನ್ನು ರಕ್ಷಿಸಲು ಮುಂದಾಗಬೇಕು ಎಂದು ಮಾಡಾಳು ಬಸವೇಶ್ವರ ಕೈಗಾರಿಕಾ ತರಬೇತಿ ಕಾಲೇಜಿನ ಉಪನ್ಯಾಸಕ ಬಸವರಾಜು ಹೇಳಿದರು.
ತಾಲೂಕಿನ ಮಾಡಾಳು ಗ್ರಾಮದ ಹೊರ ಭಾಗದಲ್ಲಿರುವ ಬಸವೇಶ್ವರ ಕೈಗಾರಿಕಾ ತರಬೇತಿ ಕಾಲೇಜಿನ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಂಗವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಸಸಿನೆಟ್ಟು  ಅವರು ಮಾತನಾಡಿದರು.
ಶಿಕ್ಷಕಿ ಸುಕನ್ಯಾ ಮಾತನಾಡಿ,  ಪರಿಸರ ಎಲ್ಲ ಜೀವಿಗಳ ನಡುವೆ ಸರಪಳಿಯಂತೆ ಸಂಬಂಧ ಹೆಣೆದುಕೊಂಡಿದೆ. ಈ ವ್ಯವಸ್ಥೆ ಯಲ್ಲಿ ಮನುಷ್ಯ ಮಧ್ಯೆ ಪ್ರವೇಶಿಸಿ ಸರಪಳಿಯ ಯಾವುದಾದರೂ ಒಂದು ಕೊಂಡಿಗೆ ಕೈಹಾಕಿದರೂ ಅಸಮತೋಲನ ಉಂಟಾಗಿ ಪರಿಸರ ನಾಶದ ಜತೆ ಜೀವಿಗಳು ವಿನಾಶವಾಗುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಉಳಿವಿಗೆ ಪ್ರಯತ್ನಿಸಬೇಕು ಎಂದರು.
ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಜತೆ ಸಸಿ ನೆಟ್ಟರು. ಉಪನ್ಯಾಸಕ ಟಿ.ಜಿ. ಭರತ್, ಮಧು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.