ಹಾಸನ

ಸಮುದಾಯ ಭವನಕ್ಕೆ ಹಣದ ಕೊರತೆ

Published On :

ಆಲೂರು: ಪಟ್ಟಣದ ಆಶಾ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸವಿತಾ ಸಮಾಜ ಸಮುದಾಯ ಭವನ ಕಾಮಗಾರಿಯನ್ನು ಪೂರ್ಣಗೊಳಿಸಲು ಅಗತ್ಯ ಸಹಕಾರ ನೀಡುವುದಾಗಿ ರಾಜ್ಯ ಸವಿತಾ ಸಮಾಜದ ಗೌರವಾಧ್ಯಕ್ಷರು ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಸದಸ್ಯರಾದ ಹೆಚ್.ವಿ. ನರಸಿಂಹಯ್ಯ ತಿಳಿಸಿದರು.
ಅವರು ಇತ್ತೀಚೆಗೆ ಪಟ್ಟಣಕ್ಕೆ ಭೇಟಿ ನೀಡಿ ಸವಿತ ಸಮಾಜದ  ಮುಖಂಡರೊಂದಿಗೆ ಸಮುದಾಯ ಭವನದ ಉಳಿದ ಕಾಮಗಾರಿಗೆ ಬೇಕಾಗುವ ಹಣವನ್ನು ಜನಪ್ರತಿನಿಧಿಗಳಿಂದ ಕ್ರೋಡೀಕರಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಸಮುದಾಯಭವನವು ಉದ್ಘಾಟನೆಗೊಂಡು  ಸಮಾಜದ ಎಲ್ಲರ ಅನುಕೂಲಕ್ಕೆ ಉಪಯೋಗ ಆಗುವಂತೆ  ಮಾಡಬೇಕೆಂದು ತಿಳಿಸಿದರು.
ಹಣದ ಕೊರತೆ: ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಸೋಮಣ್ಣ ಮಾತನಾಡಿ ಈಗಾಗಲೇ ಹಲವರ ಸಹಕಾರದಿಂದ ಕಟ್ಟಡ ಕಾಮಗಾರಿಯು ಪ್ರಾರಂಭಗೊಂಡಿದ್ದು, ಇದು ಸಂಪೂರ್ಣವಾಗಲು ಇನ್ನೂ ಸಹ ಸಾಕಷ್ಟು ಹಣದ ಅವಶ್ಯಕತೆ ಇದೆ. ಈಗಾಗಲೆ ಲೋಕಸಭಾ ಸದಸ್ಯರ ಅನುದಾನದಲ್ಲಿ ರು. 2 ಲಕ್ಷ, ಶಾಸಕರ ನಿಧಿಯಿಂದ 3 ಲಕ್ಷ, ಮಾಜಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಂದ 5 ಲಕ್ಷ, ಹಾಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಂದ 10 ಲಕ್ಷ, ಸಮಾಜದ ವತಿಯಿಂದ 4 ಲಕ್ಷ   ಸಂದಾಯವಾಗಿದೆ. ಆದರೂ ಇನ್ನೂ ರು. 20 ಲಕ್ಷ ಅಗತ್ಯವಿದೆ ಎಂದರುದರು. ರಾಜ್ಯ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಆಂಜನೇಯ, ಸದಸ್ಯ ಯು.ಕೃಷ್ಣಮೂರ್ತಿ, ತಾಲೂಕು ಸವಿತಾ  ಸಮಾಜದ ಉಪಾಧ್ಯಕ್ಷ ಶ್ರೀನಿವಾಸ್, ಸಲಹೆಗಾರರಾದ ಎನ್. ನಾರಾಯನ್, ಎಸ್. ಶ್ರೀನಿವಾಸ್, ಹಾಗೂ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.