ಹಾಸನ

ನಗರ ಮಧ್ಯೆ ತ್ಯಾಜ್ಯ ಬೆಟ್ಟ ನಿರ್ಮಾಣ

Published On :

ಹಾಸನ: ತ್ಯಾಜ್ಯ ವಿಲೇವಾರಿ ಟೆಂಡರ್ ಪಡೆದವರು ನಗರದ ಹೊರಭಾಗದಲ್ಲಿ ತ್ಯಾಜ್ಯ ಸುರಿಯುವಂತೆ ಟೆಂಡರ್ನಲ್ಲಿ ಸೂಚಿಸಲಾಗಿದೆ. ಆದರೆ ತ್ಯಾಜ್ಯವನ್ನು  ನಗರದ ಮಧ್ಯೆ ಭಾಗದಲ್ಲಿ ಸುರಿಯಲಾಗುತ್ತಿದೆ. ಹಿಂದಿನಿಂದಲೂ ಕಸದ ಟೆಂಡರ್ದಾರನಿಗೆ ನಗರಸಭೆ ಆಡಳಿತ ಅನುಕೂಲ ಮಾಡುತ್ತಿದೆ ಎಂದು  ನಗರಸಭೆ ಮಾಜಿ ಸದಸ್ಯ ಹಾಗೂ  ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ಪ್ರಸನ್ನಕುಮಾರ್ ಆರೋಪಿಸಿದ್ದಾರೆ.   ನಗರದಲ್ಲಿ ಕಸದ ಸಮಸ್ಯೆ ಹೆಚ್ಚುತ್ತಿದೆ ಮಳೆ ಪ್ರಾರಂಭವಾಗಿರುವುದರಿಂದ  ಮಳೆ ನೀರಿಗೆ ಕಸ ಕರಗಿ ಹಾಸನ ನಗರದ ಜನತೆ ಸಾಂಕ್ರಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ
ಕಸದ ರಾಶಿ: ನಗರ ಸಭೆ ಕಾರ್ಯಾಲಯದ ಹಿಂಭಾಗ ಹಲವಾರು ವರ್ಷಗಳಿಂದ ಬೆಟ್ಟದಂತಿರುವ ಕಸದ ರಾಶಿ ಅದು ನಗರದ ಮಧ್ಯೆ ಭಾಗದಲ್ಲಿ ಕಸದ ಗುಡ್ಡವೊಂದು ಬೆಳೆದು ನಿಂತಿದ್ದು ದುರ್ವಾಸನೆ ನಡುವೆಯು ಜನ ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.
ದಿನಕ್ಕೆ 65 ಟನ್ ತ್ಯಾಜ್ಯ: ಒಂದು ವರ್ಷದ ಅವಧಿಯಲ್ಲಿ ಕಸದ ರಾಶಿಯನ್ನು ಕರಗಿಸಿ ಗೊಬ್ಬರಮಾಡಿ ರೈತರಿಗೆ ನೀಡಲಾಗುವುದು ಇದಕ್ಕೆ ಯಂತ್ರಗಳನ್ನು ತರಿಸಿದ್ದೇವೆ ಎಂದು ಆಯುಕ್ತರು ಸಮಜಾಯಿಷಿ ನೀಡಿದ್ದಾರೆ. ಆದರೆ ಹಾಸನ ನಗರದಲ್ಲಿ ದಿನಕ್ಕೆ 60 ರಿಂದ 65 ಟನ್ಗಳಷ್ಟು  ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅ ಕಸವನ್ನು ಸಹ ಇದೆ ರಾಶಿಗೆ ಹಾಕಲಾಗುತ್ತಿದೆ.  ಕನಿಷ್ಠ  ಜ್ಞಾನವು ಇಲ್ಲದ ರೀತಿ ನಗರ ಸಭೆ ಆಡಳಿತ ನಡೆದುಕೊಳ್ಳುತ್ತಿದೆ ನಿತ್ಯ 60 ರಿಂದ 65 ಟನ್ಗಳಷ್ಟು ತ್ಯಾಜ್ಯವನ್ನು ನಗರ ಹೊರ ಭಾಗದಲ್ಲಿ ನಿಗದಿತ ಸ್ಥಳಕ್ಕೆ ಹಾಕಬಹುದಲ್ಲವೆ. ದಿನ ನಿತ್ಯ ಕಸದ ರಾಶಿ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.  ಟೆಂಡರ್ ನಿಗದಿ ಪಡಿಸಿದ ಸ್ಥಳದಲ್ಲಿ ಹಾಕಿಸುತ್ತಿಲ.್ಲ  . ಹಾಸನ ನಗರದ ಜನತೆ ಒಂದು ದಿನವು ಸಿಬ್ಬಂದಿಗಳು ಈ ವಸ್ತುಗಳನ್ನು ಧರಿಸಿರುವುದನ್ನು ನೋಡಿಲ್ಲ.  ಹಸಿಕಸ, ಒಣಕಸ ವಿಂಗಡೆಣೆಗಾಗಿ ಬಕೇಟ್ ನೀಡಲಾಗಿದೆ. ಕೋಟಿ ಗಟ್ಟಲೆ ಹಣ ಖರ್ಚಾಗಿದ್ದರೂ ನಿಮದಂತೆ ಸ್ವಚ್ಛತಾ ಬಿಲ್ಲಿನಲ್ಲಿ ಸೇವಾ ತೆರಿಗೆ ಕಡಿತ ಮಾಡಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.