ಘನತ್ಯಾಜ್ಯ ಘಟಕ ಬಿಳಿಯಾನೆ!
ಬೇಲೂರು: ವಿಶ್ವ ವಿಖ್ಯಾತ ಪ್ರವಾಸಿ ಕೇಂದ್ರ ಬೇಲೂರು ಅಂತಾರಾಷ್ಟ್ರೀಯ ಭೂಪಟದಲ್ಲಿ ಗುರುತಿಸಿಕೊಂಡಿದೆ. ಆದರೆ, ಇಲ್ಲಿನ ಪುರಸಭೆಗೆ ಮಾತ್ರ ಪಟ್ಟಣದ ಜ್ವಲಂತ ಸಮಸ್ಯೆಗಳು ಗೋಚರವಾಗದಿರುವುದು ವಿಪರ್ಯಾಸವಾಗಿದೆ.
ನಮ್ಮ ಹತ್ತಿರ ಇರುವ ಅಮೂಲ್ಯ ವಸ್ತುಗಳು, ಸಂಸ್ಕೃತಿ, ಪರಂಪರೆಗಳು ಆಚಾರ ವಿಚಾರಗಳು ಹೊರಗಿನವರಿಗೆ ಆಪ್ತವಾಗಿ ಉತ್ಸಾಹದಿಂದ ಕಾಣಲು ಬರುತ್ತಾರೆ. ಆದರೆ, ನಮಗೆ ಮಾತ್ರ ಅವುಗಳ ಮಹತ್ವ ತಿಳಿಯುವುದಿಲ್ಲ. ನಮ್ಮ ತಾಲೂಕಿನಲ್ಲಿ ಹೊಯ್ಸಳ ಅತ್ಯಮೂಲ್ಯ ಶಿಲಾ ಶಾಸನಗಳು, ದೇಗುಲಗಳು, ಐತಿಹಾಸಿಕ ಸ್ಥಳ ಪುರಾಣಗಳಿವೆ.
ಇದರ ಜೊತೆಗೆ ಮೂಲಭೂತ ಸೌಕರ್ಯಗಳಿಲ್ಲದ ಗ್ರಾಮಗಳು, ಘನ ತ್ಯಾಜ್ಯ ವಸ್ತುಗಳಿಂದ ಗಬ್ಬೆದ್ದು ನಾರುತ್ತಿರುವ ವಾರ್ಡ್ಗಳು, ಬಡಾವಣೆಗಳು, ಮೂಲ ಸೌಕರ್ಯ ಇಲ್ಲದೆ ಹಿಡಿಶಾಪ ಹಾಕುವ ಪ್ರವಾಸಿಗರು ಕಾಣಸಿಗುತ್ತಾರೆ. ಬೇಲೂರು ಉತ್ತಮ ಪ್ರವಾಸಿ ಕೇಂದ್ರ ಹಾಗೂ ಪಟ್ಟಣವಾಗದಿರಲು ಸ್ಥಳಿಯ ಜನಪ್ರತಿನಿಧಿಗಳ, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಕಾರಣವಾಗಿದೆ. ಬೇಲೂರು ಪಟ್ಟಣ 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, 23 ವಾರ್ಡ್ಗಳಿವೆ. ಪಟ್ಟಣದ ವ್ಯಾಪ್ತಿ ವಿಸ್ತೀರ್ಣಗೊಂಡಂತೆ ಜನ ಸಂಖ್ಯೆಯೂ ಬೆಳೆಯುತ್ತಿದೆ. ಇದರ ಜೊತೆಗೆ ಮೂಲಭೂತ ಸೌಕರ್ಯಗಳ ಕೊರತೆಯ ಸರಮಾಲೆಯೂ ಹೆಚ್ಚುತ್ತಿದೆ. ವಾರ್ಡ್ಗಳಲ್ಲಿನ ಘನತ್ಯಾಜ್ಯಗಳನ್ನು ಸಂಗ್ರಹಿಸಿ ನಂತರ ಅವನ್ನು ಪ್ರಸಾದಿಹಳ್ಳಿಯಲ್ಲಿರುವ ಘನತ್ಯಾಜ್ಯ ಘಟಕಕ್ಕೆ ಸಾಗಿಸಲಾಗಿತ್ತದೆ.
ಕಸ ವಿಲೆವಾರಿಗೆ 13 ಕಾಯಂ, 24 ಹೊರ ಗುತ್ತಿಗೆ ಕಾರ್ಮಿಕರು, 5 ಆಟೋ ಟಿಪ್ಪರ್, 2 ಟ್ರಾಕ್ಟರ್ ಇದ್ದು, ವರ್ಷಕ್ಕೆ ಒಟ್ಟು ಸರಾಸರಿ 40 ರಿಂದ 50 ಲಕ್ಷ ಕಸ ವಿಲೇವಾರಿಗಾಗಿ ವ್ಯಯಿಸಲಾಗುತ್ತಿದೆ.
ಘಟಕದಲ್ಲಿ ಕಸವನ್ನು ಯಾವ ಮಾನದಂಡವನ್ನು ಅನುಸರಿಸಿ ವಿಂಗಡಣೆ ಮಾಡಲಾಗುತ್ತಿದೆ? ಘನತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆಯಾ? ಹಾಗಾದರೆ ಗೊಬ್ಬರವನ್ನು ಹೇಗೆ? ಎಲ್ಲಿ? ಯಾರಿಗೆ ವಿತರಿಸಲಾಗಿತ್ತಿದೆ? ಇದಕ್ಕಾಗಿ ಖರ್ಚು ಮಾಡುತ್ತಿರುವ ಹಣವೆಷ್ಟು? ಇದರ ನಿರ್ವಹಣೆಯನ್ನು ಯಾರು ಮಾಡುತ್ತಿದ್ದಾರೆ? ಎಂಬುದರ ಬಗ್ಗೆ ಎಲ್ಲವನ್ನೂ ನಿಗೂಢವಾಗಿ ಇಡಲಾಗುತ್ತಿದೆ ಎಂಬುದು ಪ್ರತಿಪಕ್ಷ ಸದಸ್ಯ ಗಮನಾರ್ಹ ಆರೋಪ.
ಎ. ರಾಘವೇಂದ್ರ ಹೊಳ್ಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

