ಬಡಾವಣೆ ಕಾಮಗಾರಿಗೆ ಆಗ್ರಹ
ಹಾಸನ: ನಗರಾಭಿವೃದ್ಧಿ ಪ್ರಾಧಿಕಾರದ ಎಸ್.ಎಂ. ಕೃಷ್ಣ ಬಡಾವಣೆ ಕೆಲಸ ಶೀಘ್ರ ಪ್ರಾರಂಭಿಸುವಂತೆ ಆಗ್ರಹಿಸಿ ಉದ್ಭವ ರಾಮೇಶ್ವರ ನೊಂದ ರೈತರ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಭೂವನಹಳ್ಳಿ, ಸಂಕೇನಹಳ್ಳಿ ಮತ್ತು ದೊಡ್ಡಪುರ ಗ್ರಾಮಗಳ ರೈತರಿಗೆ ಸೇರಿದ 453 ಎಕರೆ ಜಮೀನನ್ನು ನಗರಾಭಿವೃದ್ಧಿ ಪ್ರಾಧಿಕಾರವು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಸರ್ಕಾರದಿಂದ 2002 ರಲ್ಲಿ ವಸತಿ ಯೋಜನೆಗೆ ಅನುಮಿತಿ ಪಡೆದರೂ, ಈ ಯೋಜನೆ ಕಾರ್ಯಗತಗೊಳಿಸುವ ಬದಲು ರೈತರಿಂದ ಪಡೆದುಕೊಂಡ ಜಮೀನನ್ನು ಬೇಕಾದವರಿಗೆ ಎಕರೆಗಟ್ಟಲೆ ನೀಡುವ ಮೂಲಕ ಪ್ರಾಧಿಕಾರ ಕೈಬಿಟ್ಟಿತು.
ನ್ಯಾಯಾಲಯದ ಆದೇಶ: ಬಡಾವಣೆಗಾಗಿ ಜಮೀನು ಕೊಟ್ಟ ಭೂ ಮಾಲೀಕರು ಪ್ರಾಧಿಕಾರದ ಕ್ರಮ ಪ್ರಶ್ನೆ ಮಾಡಿ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದರ ಪರಿಣಾಮ ಜ.2, 2013 ರಂದು ವಸತಿ ಯೋಜನೆ ಮುಂದುವರೆಸಲು ಮತ್ತು ಭೂ ಮಾಲೀಕರಿಗೆ ಶೇ. 40 ರಷ್ಟು ಅಭಿವೃದ್ಧಿಪಡಿಸಲಾದ ನಿವೇಶನಗಳ ಪರಿಹಾರ ಹಣ ತೆಗೆದುಕೊಂಡ ರೈತರು ಬಡ್ಡಿ ಸಮೇತ ಮರುಪಾವತಿ ಮಾಡುವ ಷರತ್ತುಗಳೊಂದಿಗೆ ನೀಡುವಂತೆ ಆದೇಶ ಮಾಡಲಾಗಿತ್ತು.
ಈಗ ರೈತರುಗಳು ತೆಗೆದುಕೊಂಡ ಪರಿಹಾರ ಹಣವನ್ನು ಬಡ್ಡಿ ಸಮೇತ ನ್ಯಾಯಾಲಯದ ಆದೇಶದಂತೆ 3 ತಿಂಗಳಿನೊಳಗೆ ಮರುಪಾವತಿಸಲಾಯಿತು. ಉಚ್ಚನ್ಯಾಯಾಲಯದ ಆದೇಶವನ್ನು ಸರ್ಕಾರವು ಫೆಬ್ರವರಿ 2013ರ ರಲ್ಲಿ ಒಪ್ಪಿಗೆ ನೀಡಿ ಯೋಜನೆಗೆ ಸಂಬಂಧಿಸಿದಂತೆ ಕೂಡಲೇ ಸಲ್ಲಿಸಲು ಪ್ರಾಧಿಕಾರಕ್ಕೆ ಆದೇಶ ನೀಡಲಾಗಿದೆ ಎಂದರು.
ಕಾಮಗಾರಿ ಆರಂಭಿಸಲು ಆಗ್ರಹ: ನ್ಯಾಯಾಲಯದ ಆದೇಶ ಮಾಡಿ ಈಗಾಗಲೇ 17 ತಿಂಗಳು ಕಳೆದಿದ್ದರೂ ಪ್ರಾಧಿಕಾರ ಯೋಜನೆ ಕೆಲಸ ಇನ್ನು ಪ್ರಾರಂಭಿಸಿಲ್ಲ. ಇನ್ನು ಹೆಚ್ಚಿನ ವಿಳಂಬವಾದರೇ ಜಮೀನು ನೀಡಿದ ಭೂ ಮಾಲೀಕರು ಸಾಲಗಾರರ ಒತ್ತಡಕ್ಕೆ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅಲವತ್ತುಕೊಂಡರು. ತಕ್ಷಣ ಈ ಯೋಜನೆಯನ್ನು ಪ್ರಾರಂಭಗೊಳಿಸುವ ಬಗ್ಗೆ ಗಮನ ನೀಡಿ ಸರ್ಕಾರ ನೀಡಬೇಕಾಗಿರುವ ಎಲ್ಲಾ ಅನುಮತಿ ಪಡೆದು ಪ್ರಾಧಿಕಾರಕ್ಕೆ ಕೆಲಸ ಪ್ರಾರಂಭಿಸಲು ಆದೇಶ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉದ್ಭವ ರಾಮೇಶ್ವರ ನೊಂದ ರೈತರ ಸಂಘದ ಖಜಾಂಚಿ ದೇವೇಗೌಡ, ಸದಸ್ಯರಾದ ಬಾಲಕೃಷ್ಣ, ರಂಗೇಗೌಡ, ಮಂಜುನಾಥ್, ಸೋಮಣ್ಣ, ರಂಗನಾಥ್, ಚಂದ್ರಶೇಖರ್, ಮಹೇಶ್, ಕುಮಾರ್, ರಾಜು ಹಾಗೂ ಇತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

