ಹಾಸನ

ಆಲೂರಿಗೆ ತಂಪೆರದ ಸೋನೆ ಮಳೆ

Published On :

ಆಲೂರು: ವಾಯುಬಾರ ಕುಸಿತದಿಂದಾಗಿ ಬೆಳಗ್ಗೆ 10ರಿಂದ ಪ್ರಾರಂಭವಾದ ಸೋನೆ ಮಳೆಗೆ ಆಲೂರು ತಾಲೂಕಿನ ಜನಜೀವನ ಅಸ್ತವ್ಯಸ್ತಗೊಂಡಿತು. ಬುಧವಾರದವರೆಗೂ 30ರಿಂದ 35 ಡಿಗ್ರಿ ತಾಪಮಾನ ಇದ್ದ ತಾಲೂಕನ್ನು ಗುರುವಾರ ಬಂದ ಮಳೆ ಏಕಾಏಕಿ ತಂಪಾಗಿಸಿತು.
ವಿದ್ಯಾರ್ಥಿಗಳ ನಿರೀಕ್ಷೆಯಲ್ಲಿ: ವಾತಾವರಣಕ್ಕೆ ಪಟ್ಟಣದಲ್ಲಿ ಜನರ ಓಡಾಟವೇ ಕಾಣದಾಗಿತ್ತು. ದ್ವಿತೀಯ ಪಿಯುಸಿ ಫಲಿತಾಂಶ ಬಂದಿದ್ದರೂ ಸಹ ವಿದ್ಯಾರ್ಥಿಗಳು ಕಂಪ್ಯೂಟರ್ ಪಾರ್ಲರ್‌ಗಳಿಗೆ ಭೇಟಿ ನೀಡದ ಕಾರಣ ಅಂಗಡಿಯವರು ವಿದ್ಯಾರ್ಥಿಗಳಿಗಾಗಿ ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದರು.
ಗುಂಡು, ತುಂಡಿಗೆ ಡಿಮ್ಯಾಂಡ್: ಆಲೂರಿನಲ್ಲಿ ಚಳಿಯ ವಾತಾವರಣದಿಂದಾಗಿ ಮದ್ಯ ಮಾರಾಟ ಭರ್ಜರಿಯಾಗಿ ನಡೆದರೆ ಮಾಂಸದಂಗಡಿಯ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ತೊಂದರೆ: ಪಟ್ಟಣದ ಮುಖ್ಯರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದಾಗಿ ರಸ್ತೆ ತುಂಬೆಲ್ಲ ಗುಂಡಿಗಳಿಗೆ ನೀರು ತುಂಬಿಕೊಂಡು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಆ ವೇಳೆಯಲ್ಲಿ ಪಾದಚಾರಿಗಳಿಗೆ ಕೆಸರೆರಚಿ ತೊಂದರೆ ಉಂಟಾಯಿತು.
ಪಟ್ಟಣ ಪಂಚಾಯ್ತಿವತಿಯಿಂದ ನಡೆಯುತ್ತಿರುವ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗೆ ತೊಂದರೆ ಉಂಟಾಗಿದೆ. ಈ ಮಳೆಯಿಂದಾಗಿ ರೈತರ ಮೊಗದಲ್ಲಿ ಹರ್ಷ ವ್ಯಕ್ತವಾಗಿದ್ದು, ಶುಂಠಿ ಹಾಗೂ ಕಾಫಿ ಬೆಳೆಗಾರರಿಗೆ ಅನುಕೂಲವಾಗಿದ್ದು, ಈಗ ಭೂಮಿಯನ್ನು ಉಳುಮೆ ಮಾಡುವವರು ಬಿತ್ತನೆ ಕಾರ್ಯಕ್ಕೆ ಸಿದ್ಧಗೊಂಡಿದ್ದಾರೆ.  
ವಿದ್ಯುತ್ ಕಣ್ಣಾಮುಚ್ಚಾಲೆ: ಕಳೆದ ಹಲವಾರು ದಿನಗಳಿಂದ ಸತತವಾಗಿ ಬಿಸಿಲಿನಿಂದ ಕಾದ ವಿದ್ಯುತ್ ಕಂಬಗಳು ಪಿನ್ ಇನ್ಸುಲೇಟರ್‌ಗಳು ಏಕಾಏಕಿ ಮಳೆಯಿಂದಾಗಿ ತಂಪಾದ ಪರಿಣಾಮ ಅವುಗಳಲ್ಲಿ ರಂದ್ರಗಳು ಉಂಟಾದ ಪರಿಣಾಮ ಪದೇ ಪದೇ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ನಡೆಯುತ್ತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.