ಪಾಂಡುರಂಗ ದಿಂಡಿ ಮಹೋತ್ಸವ
ಅರಸೀಕೆರೆ: ಪಟ್ಟಣದ ಶ್ರೀರುಕ್ಮಿಣಿ ಪಾಂಡುರಂಗಸ್ವಾಮಿ ದೇವಾಲಯದ 77ನೇ ವರ್ಷದ ದಿಂಡಿ ಮಹೋತ್ಸವದ ಧಾರ್ಮಿಕ ಸಮಾರಂಭದ ಕೊನೆಯ ದಿನದಂದು ದೇವರ ಉತ್ಸವಮೂರ್ತಿಯನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಮುತ್ತಿನ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆದ್ದೂರಿ ಮೆರವಣಿಗೆಯನ್ನು ಭಾವಸಾರ ಕ್ಷತ್ರಿಯ ಸಮಾಜ ಬಾಂಧವರು ನೆರವೇರಿಸಿದರು.
ಪಟ್ಟಣದ ಶ್ರೀರುಕ್ಮಿಣಿ ಪಾಂಡುರಂಗಸ್ವಾಮಿ ದಿಂಡಿ ಮಹೋತ್ಸವದ ಮುಕ್ತಾಯ ಸಮಾರಂಭವಾಗಿ ರುಕ್ಮಿಣಿ ಪಾಂಡುರಂಗಸ್ವಾಮಿ ಉತ್ಸವಮೂರ್ತಿಗಳನ್ನು ಟ್ಯಾಕ್ಟರ್ನಲ್ಲಿ ಶೃಂಗರಿಸಲಾದ ಮುತ್ತಿನ ಪಲ್ಲಕ್ಕಿಗೆ ವಿವಿಧ ಬಣ್ಣ, ಬಣ್ಣಗಳಿಂದ ಕೂಡಿದ್ದ ವಿದ್ಯುತ್ ದೀಪಗಳು ಹಾಗು ಬಗೆ, ಬಗೆಯ ಪುಷ್ಪಗಳಿಂದ ಶೃಂಗರಿಸಿ ಗ್ರಾಮದೇವತೆ ಶ್ರೀಕರಿಯಮ್ಮ ದೇವಿಯ ರಸ್ತೆಯ ಮಾರ್ಗವಾಗಿ ಪೇಟೆಬೀದಿ, ಬಿ.ಎಚ್.ರಸ್ತೆ, ಲಕ್ಷ್ಮೀಪುರ ಬಡಾವಣೆ ಮಾರ್ಗವಾಗಿ ಸಾಯಿನಾಥ ರಸ್ತೆಯ ಮೂಲಕ ದೇವಾಲಯದಲ್ಲಿ ಮೆರವಣಿಗೆ ಮುಕ್ತಾಯಗೊಳಿಸಲಾಯಿತು.
ಮೆರವಣಿಗೆಯಲ್ಲಿ ಶಿವಮೊಗ್ಗದ ಪಂಡರೀ ಹರಿಕೀರ್ತನೆ ಪ್ರವೀಣ ಹನುಮಂತ ರಾವ್, ದಾವಣಗೆರೆಯ ಹರಿಭಜನಾ ಪ್ರವೀಣರಾದ ದಾಮೋಧರರಾವ್ ಜಿಂಗಾಡೆ ಇವರ ತಂಡದೊಂದಿಗೆ ಸ್ಥಳೀಯ ಭಾವಸಾರ ಕ್ಷತ್ರಿಯ ಸಮಾಜದ ಯುವಕ ಸಂಘದ ಯುವಕ ಶ್ರೀಪಂಡರೀ ಸಾಂಪ್ರದಾಯಿಕ ಸಂಕೀರ್ತನೆ ಹಾಗೂ ಭಜನಾ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಧಾರ್ಮಿಕ ಸಮಾರಂಭದ ಮೆರವಣಿಗೆಯನ್ನು ಭಾವಸಾರ ಕ್ಷತ್ರಿಯ ದೈವ ಮಂಡಲಿ ಅಧ್ಯಕ್ಷ ಶಂಡಿಗೆ ಕೃಷ್ಣಮೂರ್ತಿ ರಾವ್, ಉಪಾಧ್ಯಕ್ಷ ಕೆ.ಜಿ.ಚಂದನನ್ಕ್ಷೀರಸಾಗರೆ, ಕಾರ್ಯದರ್ಶಿ ಕೆ.ಎಸ್. ನಾರಾಯಣ ಕಾಂಗೋಕರ್, ಖಂಜಾಚಿ ಎನ್.ವಿ. ನರೇಶ್ ಕುಮಾರ್, ಮಹಿಳಾ ಮಂಡಳಿ ಅಧ್ಯಕ್ಷ ಪ್ರಿಯಾ. ಎಸ್. ಮಹೇಂದ್ರಕರ್ ಮತ್ತು ನಿರ್ದೇಶಕರು, ಹಾಗೂ ಸಮಾಜ ಬಾಂಧವರು ನೂರಾರು ಸಂಖ್ಯೆಯಲ್ಲಿ ಈ ಮೆರವಣಿಗೆಯಲ್ಲಿ ಇದ್ದರು. ನಂತರ ಎಲ್ಲರಿಗೂ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

