ಮಹರ್ಷಿ ಭಗೀರಥ ಜಯಂತ್ಯುತ್ಸವ
ಹಾಸನ: ಮಾನವ ಕುಲಕೋಟಿಗೆ ಒಳಿತನ್ನು ಬಯಸಿದ ಮಹರ್ಷಿ ಭಗೀರಥನ ತತ್ತ್ವಾದರ್ಶಗಳನ್ನು ಇಂದು ನಾವೆಲ್ಲರೂ ಪಾಲಿಸಬೇಕು. ನಾವೂ ಅವರಂತೆ ವಿಶಾಲವಾದ ಚಿಂತನೆ ನಡೆಸಬೇಕು. ಭಗೀರಥ ಮಾನವೀಯ ಮೌಲ್ಯಗಳ ಹರಿಕಾರ ಎಂದು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಎಸ್.ಜೆ. ನೀಲಪ್ಪ ಹೇಳಿದರು.
ಅವರು ನಗರದ ಮಹಾವೀರ ಭವನದ ಮುಂಭಾಗದ ನಿರ್ಮಾಣ ಹಂತದಲ್ಲಿರುವ ಉಪ್ಪಾರ ಸಮುದಾಯಭವನದಲ್ಲಿ ಹಮ್ಮಿಕೊಡಿದ್ದ ಮಹರ್ಷಿ ಭಗೀರಥ ಜಯಂತ್ಯುತ್ಸವದಲ್ಲಿ ಭಗೀರಥ ಸ್ವಾಮಿಗೆ ಪುಷ್ಪಾರ್ಪನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಭಗೀರಥ ಉಪ್ಪಾರ ಜನಾಂಗದ ಮೂಲಪುರುಷ. ಅವರ ವಂಶಪರಾಂಪರ್ಯದಲ್ಲಿ ಹುಟ್ಟಿದ ಉಪ್ಪಾರ ಜನಾಂಗ ಸಾಮಾಜಿಕವಾಗಿ ಹಿಂದೆ ಬಿದ್ದಿದೆ ಎಂದು ಅವರು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಭೋಜೇಗೌಡ, ಖಜಾಂಜಿ ಸಣ್ಣೇಗೌಡ, ರಾಮೇಗೌಡ, ಕಿಂಡಿಪುರದ ಗ್ರಾಮಸ್ಥಾರು, ಬಲ್ಲೇನಹಳ್ಳಿ ಗ್ರಾಮಸ್ಥರು, ಯಲಗೌಡನಹಳ್ಳಿ ಗ್ರಾಮಸ್ಥರು ಹಾಗೂ ಹಾಸನ ನಗರದ ಉಪ್ಪಾರ ಜನಾಂಗದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

