ಹೊಲಗಳತ್ತ ಮುಖ ಮಾಡಿದ ರೈತರು
ದಯಾಶಂಕರ ಮೈಲಿ
ಹಾಸನ: ಮುಂಗಾರು ಮಳೆರಾಯ ನೇಗಿಲ ಯೋಗಿಗಳು ಭೂಮಿಯತ್ತ ಮುಖ ಮಾಡುವಂತೆ ಮಾಡಿದ್ದಾನೆ. ಈಗ ಬೀಳುತ್ತಿರುವ ಮಳೆಗೆ ಭೂಮಿ ಬಿತ್ತನೆಗೆ ಬೇಕಾದ ತೇವಾಂಶ ಹೊಂದಿ ಹದಗೊಂಡಿದೆ. ಆದ್ದರಿಂದ ರೈತರು ಬಿತ್ತನೆ ಮಾಡಲು ಬೇಕಾದ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಉಳುಮೆ ಕಾರ್ಯ ಆರಂಭಗೊಂಡಿದೆ.
ಜಿಲ್ಲಾದ್ಯಂತ ಈಗ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚೇ ಆಗಿದೆ. ಮೇ 1ರಿಂದ 10 ರವರೆಗೆ ವಾಡಿಕೆಯಂತೆ 26.8 ಮಿ ಮೀಟರ್ ಮಳೆಯಾಗಬೇಕಿತ್ತು. ಆದರೆ 88.3 ಮಿಮೀ ಮಳೆಯಾಗಿದೆ. ಅಂದರೆ, ಶೇ. 230ರಷ್ಟು ಹೆಚ್ಚು ಮಳೆಯಾಗಿದೆ. ಆಲೂಗಡ್ಡೆ, ದ್ವಿದಳ ಬೆಳೆಗಳಾದ ಹಲಸಂದೆ, ಉದ್ದು, ಎಳ್ಳು ಮತ್ತು ಹೊಗೆಸೊಪ್ಪು ಮೆಕ್ಕೆಜೋಳ ಬಿತ್ತನೆ ಕೃಷಿ ದಿನೇ ದಿನೇ ಚುರುಕುಗೊಳ್ಳುತ್ತಿದೆ. ಜುಲೈ 2ನೇ ವಾರದಲ್ಲಿ ಸೂರ್ಯಕಾಂತಿ ಮತ್ತು ಮೆಕ್ಕೆಜೋಳ ಬಿತ್ತನೆ ಕಾರ್ಯ ಆರಂಭಗೊಳ್ಳಲಿದೆ.
8 ತಾಲೂಕುಗಳಲ್ಲಿ ಬಿತ್ತನೆ: ಪ್ರಸಕ್ತ ವರ್ಷ ಜಿಲ್ಲೆಯ 8 ತಾಲೂಕುಗಳಲ್ಲಿ 2, 55, 113 ಹೆಕ್ಟೇರ್ನಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದ್ದು, ಮುಂಗಾರು ಹಂಗಾಮಿಗೆ 3,829 ಹೆಕ್ಟೇರ್ನಲ್ಲಿ ನಾನಾ ಬೆಳೆಗಳ ಬಿತ್ತನೆ ಆಗುತ್ತದೆ.
ಪೊಟ್ಯಾಶ್ ಗೊಬ್ಬರ ಕೊರತೆ: ಈ ನಡುವೆ ರೈತರು ಹೆಚ್ಚು ಬಳಕೆ ಮಾಡಲ್ಪಡುವ ಎಂಓಪಿ ಮಾರ್ಕ್ ಮತ್ತಿತರ ಬಗೆಯ ಪೊಟ್ಯಾಶ್ ಗೊಬ್ಬರಗಳ ಕೊರತೆ ಇದೆ. ಈ ಮಾದರಿ ಗೊಬ್ಬರಗಳನ್ನು ಅಗತ್ಯದಷ್ಟು ರೈತರಿಗೆ ಪೂರೈಕೆ ಮಾಡದಿದ್ದರೆ, ರೈತರು ಜಿಲ್ಲಾಡಳಿತದ ವಿರುದ್ಧ ಹೋರಾಟ ಮಾಡುವ ಸಾಧ್ಯತೆಗಳಿವೆ.
ನಕಲಿ ಗೊಬ್ಬರಗಳ ಹಾವಳಿ: ಬಿತ್ತನೆ ಕಾಲದಲ್ಲಿ ನಕಲಿ ಗೊಬ್ಬರ ಮತ್ತು ನಕಲಿ ಬಿತ್ತನೆ ಬೀಜಗಳನ್ನು ಖಾಸಗಿಯಾಗಿ ಮಾರಾಟ ಮಾಡಿ ರೈತರನ್ನು ವಂಚನೆ ಮಾಡುವ ಅಪಾಯವಿದೆ. ಪ್ರತಿ ವರ್ಷವೂ ಅಧಿಕೃತಗೊಳ್ಳದ ಬೀಜ, ರಸಗೊಬ್ಬಗಳನ್ನು ಮಾರಾಟ ಮಾಡುವ ಪ್ರಕರಣಗಳು ಘಟಿಸುತ್ತಲೇ ಇರುತ್ತವೆ. ಇಂಥ ಅಚಾತುರ್ಯಗಳು ನಡೆಯದಂತೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.
ಶೇ. 88.3ರಷ್ಟು ಅಧಿಕ ಮಳೆ: ಮೇ 1ರಿಂದ ಮೇ 9ರವರೆಗೆ ವಾಡಿಕೆಯಂತೆ 26.8 ಮಿಮೀನಷ್ಟು ಮಳೆಯಾಗಬೇಕಿತ್ತು. ಆದರೆ ತಮಿಳುನಾಡಿನ ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಶೇ. 88.3 ಮಿಮೀರಷ್ಟು ಮಳೆಯಾಗಿದೆ. ಶೇ. 230 ರಷ್ಟು ಹೆಚ್ಚು ಮಳೆಯಾಗಿದೆ. ಇದು ಭೂಮಿ ಬಿತ್ತನೆ ಹದಗೊಳ್ಳಲು ಕಾರಣವಾಗಿ, ರೈತರು ಹರ್ಷಗೊಳ್ಳುವಂತೆ ಆಗಿದೆ.
ಎಷ್ಟೆಷ್ಟು ಬಿತ್ತನೆ?
ಧವಸ, ಧಾನ್ಯ ಪ್ರದೇಶ (ಹೆಕ್ಟೇರ್ಗಳಲ್ಲಿ)
ಟ ಹಲಸಂದೆ 900
ಟ ಉದ್ದು 300
ಟ ಎಳ್ಳು 250
ಟ ಕಬ್ಬು 150
ಟ ತಂಬಾಕು 450
ಟ ಮೆಕ್ಕೆಜೋಳ,
ಸೂರ್ಯಕಾಂತಿ 2000
ಬಿರುಸುಗೊಂಡ ಆಲೂಗಡ್ಡೆ ಬಿತ್ತನೆ
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆಯನ್ನು ಬೆಳೆಯಲು ಮುಂದಾಗಿದ್ದಾರೆ. ಈಗಾಗಲೇ ಬಿತ್ತನೆ ಆಲೂಗಡ್ಡೆಯ ಮಾರಾಟ ಭರಾಟೆ ಜೋರಾಗಿಯೇ ನಡೆಯುತ್ತಿದೆ. ರೈತರು ಅಧಿಕೃತ ಅಂಗಡಿಗಳಲ್ಲಿ ಅಲ್ಲದೇ ಸಿಕ್ಕ ಕಡೆ ಬಿತ್ತನೆ ಆಲೂಗಡ್ಡೆ ಖರೀದಿಸುತ್ತಿದ್ದಾರೆ.
ಹಾಸನ ತಾಲೂಕಿನಲ್ಲೇ ಹೆಚ್ಚು ಆಲೂಗಡ್ಡೆ ಬೆಳೆಯುತ್ತಿದ್ದು, ಹೊಳೆನರಸೀಪುರ, ಆಲೂರು, ಬೇಲೂರು ತಾಲೂಕುಗಳ ಕೆಲವೆಡೆ ಆಲೂಗಡ್ಡೆ ಬೆಳೆಯಲಾಗುತ್ತದೆ.
'ಗೊಬ್ಬರಕ್ಕೆ ತೊಂದರೆ ಆಗಲ್ಲ'
ಕೃಷಿ ಇಲಾಖೆ ಕೂಡ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ವಿತರಣೆ ಬಗ್ಗೆ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಈಗಾಗಲೇ 15 ಸಾವಿರ ಟನ್ ರಸಗೊಬ್ಬರ ದಾಸ್ತಾನು ಮಾಡಿದ್ದು, 6 ಸಾವಿರ ಟನ್ ವಿತರಣೆಯಾಗಿದೆ. ಅಲ್ಲದೇ ಬಿತ್ತನೆ ಬೀಜಗಳ ಸಮರ್ಪಕ ವಿತರಣೆಗೂ ಕ್ರಮ ತೆಗೆದುಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಬೀಜ ನಿಗಮ ಮತ್ತು ರಾಷ್ಟ್ರೀಯ ಬೀಜ ನಿಗಮಗಳಿಂದ ಬಿತ್ತನೆ ಬೀಜಗಳನ್ನು ತರಿಸಿಕೊಳ್ಳಲಾಗಿದೆ. ಎಂಒಪಿ ಪೊಟ್ಯಾಶ್ ಗೊಬ್ಬರ ತ್ವರಿತವಾಗಿ ಪೂರೈಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸದ್ಯದಲ್ಲೇ ಗೊಬ್ಬರ ಬರಲಿದೆ. ತೊಂದರೆಯೇನೂ ಆಗದು ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವರಾಜ್.
ಎಲ್ಲೆಲ್ಲಿ ಎಷ್ಟೆಷ್ಟು ಮಳೆ?
(ಮೇ 9ರವರೆಗೆ)
ತಾಲೂಕುವಾರು ಮಳೆ ಪ್ರಮಾಣ
ಆಲೂರು
65.3 ಮಿಮೀ
ಅರಕಲಗೂಡು
108.2 ಮಿಮೀ
ಅರಸೀಕೆರೆ
61.9 ಮಿಮೀ.
ಬೇಲೂರು
97.4 ಮಿಮೀ.
ಚನ್ನರಾಯಪಟ್ಟಣ
78.1 ಮಿಮೀ
ಹಾಸನ
78.9 ಮಿಮೀ.
ಹೊಳೆನರಸೀಪುರ 97.6 ಮಿಮೀ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

