ಸಾವಿನ ದಾರಿ ತೋರುವ ಮರ
ಹಾಸನ: ತಾಲೂಕಿನ ಸಾಲಗಾಮೆ ರಸ್ತೆಯ ಮಾವಿನಹಳ್ಳಿ ಮತ್ತು ಗ್ಯಾರಳ್ಳಿ ಸಮೀಪ ಸಂಪೂರ್ಣ ಒಣಗಿ ಗೆದ್ದಲು ಹಿಡಿದು ನಿಂತಿರುವ ಮರವೊಂದು ರಸ್ತೆಯ ಮೇಲೆ ಆಗಲೋ ಈಗಲೋ ಬೀಳುವಂತಿದೆ.
ಸಾಲಗಾಮೆ ರಸ್ತೆಯಲ್ಲಿ ಮಾವಿನಹಳ್ಳಿ ಮತ್ತು ಗ್ಯಾರಳ್ಳಿ ನಡುವೆ ಇರುವ ವಿದ್ಯುತ್ ವಿತರಣಾ ಕೇಂದ್ರದ ಸಮೀಪ ರಸ್ತೆ ಬದಿಯಲ್ಲಿ ಇರುವ ಈ ಮರವು ಹಲವಾರು ತಿಂಗಳುಗಳಿಂದ ಸಂಪೂರ್ಣ ಒಣಗಿ ನಿಂತಿದೆ. ಮರದ ಬುಡದಿಂದ ತುದಿಯವರೆಗೂ ಗೆದ್ದಲು ಹಿಡಿದು ಸಂಪೂರ್ಣ ಜೀರ್ಣವಾಗಿರುವ ಈ ಮರವು ಅಪಾಯಕಾರಿ ಸ್ಥಿತಿಯಲ್ಲಿ ಬಾಗಿಕೊಂಡಿದೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ದ್ವಿಚಕ್ರ ವಾಹನಗಳು ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತವೆ. ಈಗ ಗಾಳಿ ಮತ್ತು ಮಳೆಯ ಸಂದರ್ಭವಾಗಿರುವುದರಿಂದ ಒಣಗಿ ನಿಂತಿರುವ ಈ ಮರ ಯಾವಾಗಲಾದರೂ ರಸ್ತೆಯ ಮೇಲುರುಳಿ ಅನಾಹುತ ಉಂಟುಮಾಡುವ ಅಪಾಯ ಇದೆ.
ರಸ್ತೆ ಬದಿಯಲ್ಲಿರುವ ಇಂಥ ಮರವನ್ನು ನೋಡಿಯೂ ಅರಣ್ಯ ಇಲಾಖೆ ಸುಮ್ಮನಿದೆ. ಇದೇ ರೀತಿ ತವರದೇವರಕೊಪ್ಪಲು ಸಮೀಪವೂ ಒಂದು ಮರದ ಬುಡವೂ ಹೀಗೇ ಗೆದ್ದಲು ಹಿಡಿದು ಬೀಳುವಂತಿದೆ.
ಅರಣ್ಯ ಇಲಾಖೆಯು ತಕ್ಷಣ ಎಚ್ಚೆತ್ತು ಯಾವುದೇ ಪ್ರಾಣಾಪಾಯವಾಗುವ ಮೊದಲು ಈ ಮರಗಳನ್ನು ತೆರವುಗೊಳಿಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

