ಈ ಬಾರಿ ಆಲೂ ಬೆಳೆ ಕಡಿಮೆ
ಅಂಗಮಾರಿ ರೋಗ ಕಲಿಸಿದ ಪಾಠ ಟಿ 5 ಸಾವಿರ ಹೆಕ್ಟೇರ್ನಲ್ಲಿ ಶುಂಠಿ ಬಿತ್ತನೆ
ಕನ್ನಡಪ್ರಭ ವಾರ್ತೆ ಹಾಸನ ಮೇ 12
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆ ಬೆಳೆಯ ಪ್ರಮಾಣ ಈ ಬಾರಿ ಕಡಿಮೆಯಾಗಲಿದೆ. ಈ ವರ್ಷ ಜಿಲ್ಲೆಯಲ್ಲಿ ಅಂದಾಜು 4 ಸಾವಿರದಿಂದ 5 ಸಾವಿರ ಹೆಕ್ಟೇರ್ ಶುಂಠಿ ಹೆಚ್ಚಾಗಿ ಬಿತ್ತನೆಯಾಗಿರುವುದೇ ಇದಕ್ಕೆ ಕಾರಣ. ಶುಂಠಿ ಬಿತ್ತನೆಗೊಂಡಿರುವ ಪ್ರದೇಶದ ಪ್ರಮಾಣ ಕಡಿಮೆಯಾಗಿರುವುದರಿಂದ ಈ ಬಾರಿ ಆಲೂ ಬೆಳೆ ಕಡಿಮೆಯಾಗಲಿರುವುದು ಸ್ಪಷ್ಟ.
ಮೂರ್ನಾಲ್ಕು ವರ್ಷಗಳಿಂದ ಆಲೂಗಡ್ಡೆಗೆ ಅಂಗಮಾರಿ ರೋಗ ತಗುಲುತ್ತಿರುವ ಕಾರಣ ರೈತರು ಶುಂಠಿ ಬೆಳೆ ಬೆಳೆದರು. ಇದರಿಂದ ಲಾಭವೂ ಆಯಿತು. ಮಾರುಕಟ್ಟೆಯಲ್ಲಿ, ಶುಂಠಿ ಬೆಲೆ ಏರಿಕೆಯಾಗಿದ್ದರಿಂದ ರೈತರಿಗೆ ಆರ್ಥಿಕ ಬೆಂಬಲ ದೊರೆಯಿತು. ಈ ಯಶಸ್ಸಿನ ಹಿನ್ನೆಲೆಯಲ್ಲಿ, ಈ ಬಾರಿಯೂ ರೈತರು ಶುಂಠಿ ಬೆಳೆಯುವತ್ತ ಚಿತ್ತ ಹರಿಸಿದ್ದಾರೆ. ಹಾಗಾಗಿ, ಆಲೂಗಡ್ಡೆ ಬಿತ್ತನೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿವೆ.
ಕಂದಲಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಟಿ.ಎಸ್. ಮಂಜುನಾಥ ಸ್ವಾಮಿ, ಡಾ ಚನ್ನಕೇಶವ, ಡಾ. ಪಂಕಜ, ಎಚ್.ಕೆ.ಡಾ. ಕೃಷ್ಣಾರೆಡ್ಡಿ ಜಿ.ಎಸ್ ಮತ್ತು ಡಾ. ಬಿ.ಎಸ್. ಬಸವರಾಜು, ಆಲೂ ಬೆಳೆಯುವ ರೈತರಿಗೆ ಕೆಲವು ಉಪಯುಕ್ತ ಮಾಹಿತಿಗಳನ್ನು ನೀಡಿದ್ದಾರೆ.
ಆಲೂ ಬಿತ್ತನೆಗೆ ಗಮನಿಸಬೇಕಾದ ಅಂಶಗಳು: ಆಲೂಗಡ್ಡೆ ನೀರು ಬಸಿದು ಹೋಗುವಂತಹ ಕೆಂಪು ಗೋಡು ಮತ್ತು ಮರಳು ಮಿಶ್ರಿತ ಗೋಡು ಮಣ್ಣಿನ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯುತ್ತದೆ. ತುಂಬಾ ಜೇಡಿ ಮತ್ತು ಚೌಳು ಮಣ್ಣು ಈ ಬೆಳೆಗೆ ಉತ್ತಮವಲ್ಲ. ಈ ಬೆಳೆಯನ್ನು ಮಣ್ಣಿನ ರಸಸಾರ 5.5 ರಿಂದ 7.5 ಇರುವಲ್ಲಿ ಇರುವಲ್ಲಿ ಯಶಸ್ವಿಯಾಗಿ ಬೆಳೆಯಬಹುದು. ಮಣ್ಣು ಪರೀಕ್ಷೆ ಆಧಾರಿತ ರಾಸಾಯನಿಕ ಗೊಬ್ಬರಗಳ ಬಳಕೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ನಿಗದಿತ ಸಮಯದ ಔಷಧೋಪಚಾರದಿಂದ ಅಧಿಕ ಮತ್ತು ಗುಣಮಟ್ಟದ ಇಳುವರಿ ಪಡೆಯಬಹುದು.
ಬಿತ್ತನೆ ಗಡ್ಡೆಗಳ ಆಯ್ಕೆ ಮತ್ತು ತೂಕ: ಶೈತ್ಯಾಗಾರಗಳಿಂದ ಬಿತ್ತನೆ ಆಲೂಗಡ್ಡೆ ತೆಗೆದ ನಂತರ ಕನಿಷ್ಟ 10-15 ದಿವಸ ಹದಗೊಳಿಸಿ ಮೊಳಕೆ ಬಂದ ತದನಂತರ ಬಿತ್ತನೆ ಮಾಡಬೇಕು. ಬಿತ್ತನೆ ಗಡ್ಡೆಗಳು 30-35 ಗ್ರಾಂ ತೂಕವಿರಬೇಕು. ಗಾತ್ರ ದೊಡ್ಡದಿದ್ದಲ್ಲಿ ಅಂತಹ ಗಡ್ಡೆಗಳನ್ನು 30-40 ಗ್ರಾಂ ಇರುವಂತೆ ಕತ್ತರಿಸಬೇಕು.
ಮಣ್ಣಿಗೆ ಯಾವುದೇ ಗೊಬ್ಬರ ಕೊಡುವಾಗ ಮಣ್ಣಿನ ತೇವಾಂಶ ನೋಡಿಕೊಂಡು ರಾಸಾಯನಿಕ ಗೊಬ್ಬರಗಳನ್ನು ಕೊಡುವುದು ಸೂಕ್ತ ಹಾಗೂ ಗೊಬ್ಬರಗಳನ್ನು ಕೊಟ್ಟ ನಂತರ ಮಣ್ಣು ಮುಚ್ಚಬೇಕು. ಇದರಿಂದ ಗೊಬ್ಬರಗಳು ಪೋಲಾಗುವುದನ್ನು ತಡೆಗಟ್ಟಬಹುದು.
ನೀರಾವರಿ: ಬಿತ್ತನೆಯ ನಂತರ ತೆಳುವಾಗಿ ನೀರನ್ನು ಹಾಯಿಸಬೇಕು. ಮಣ್ಣಿನ ತೇವಾಂಶವನ್ನು ನಿರ್ಧರಿಸಿ ವಾರಕ್ಕೊಮ್ಮೆ ನೀರು ಹಾಯಿಸಬೇಕು. ಅಲೂಗಡ್ಡೆ ಬಿತ್ತನೆ ಮಾಡುವಾಗ 6:1ರ ಅನುಪಾತದಲ್ಲಿ ತೊಗರಿಯನ್ನು ಅಂತರ ಬೆಳೆಯಾಗಿ ಬೆಳೆಯುವುದು ಅವಶ್ಯಕ. ಇದರಿಂದ ಭೂಮಿಯ ಪಲವತ್ತತೆ ಅಗುವುದರ ಜೊತೆಗೆ ಉತ್ತಮ ಇಳುವರಿ ಬರುತ್ತದೆ.
ಹವಾಮಾನವೂ ಪ್ರಮುಖ ಕಾರಣ
ಆಲೂಗಡ್ಡೆ ಬೆಳೆಯುವ ಪ್ರದೇಶದಲ್ಲಿ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ಇದ್ದರೆ ಗಡ್ಡೆಗಳು ಚೆನ್ನಾಗಿ ಕಟ್ಟುತ್ತವೆ. ಈ ಬೆಳೆಯನ್ನು ಸರಾಸರಿ ನಮ್ಮ ರಾಜ್ಯದಲ್ಲಿ 30 ಸಾವಿರ ಹೆಕ್ಟೇರ್ಗಳಲ್ಲಿ ಬೆಳೆಯಲಾಗುತ್ತಿದ್ದು, ಇದರ ಉತ್ಪಾದನೆ 5.36 ಲಕ್ಷ ಟನ್ಗಳಷ್ಟಿದ್ದು ಸರಾಸರಿ ಇಳುವರಿ 14.2 ಟನ್ಗಳಷ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

