ಕರಗ ಮಹೋತ್ಸವ ಇಂದು
ಅರಸೀಕೆರೆ: ಪಟ್ಟಣದ ಹಾಸನ ರಸ್ತೆ ಬಲಭಾಗದಲ್ಲಿರುವ ಕಟ್ಟೆ ಮಾರಿಯಮ್ಮ ದೇವಿ 29ನೇ ವರ್ಷದ ಕರಗ ಮಹೋತ್ಸವ ಮೇ 13ರ ಮಂಗಳವಾರ ಮಧ್ಯಾಹ್ನ ಜರುಗಲಿದೆ ಎಂದು ದೇವಾಲಯ ಸಮಿತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ದೇವಿಯ ಮೆರವಣಿಗೆಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಕಂತೇನಹಳ್ಳಿ ಕೆರೆಯ ಅಂಗಳದಿಂದ ದೇವಿಯ ಕರಗವನ್ನು ಅಲಂಕರಿಸಿ ಮೆರವಣಿಗೆ ಕರೆತರಲಾಗುವುದು. ಕರಗ ಮಹೋತ್ಸವದಲ್ಲಿ ತಮಿಳುನಾಡಿನ ಖ್ಯಾತ ಕಲಾವಿದರಾದ ಗಜೇಂದ್ರನ್ ಮತ್ತು ತಂಡದವರಿಂದ ಆಕರ್ಷಕ ಕರಗ ನೃತ್ಯ ಆಯೋಜಿಸಲಾಗಿದೆ. ಅಲ್ಲದೇ ಅಂದು ಸಂಜೆ 5 ಗಂಟೆಗೆ ಮಾಲಾಧಾರಿಗಳು 25 ಅಡಿ ಎತ್ತರದ ಕಂಬದ ಮೇಲೆ ಕಬ್ಬಿಣದ ಕೊಂಡಿಯಿಂದ ದೇವಿಗೆ ಪುಷ್ಪಾರ್ಚನೆ ಸಲ್ಲಿಸಲಾಗುವುದು. ಮೇ 14ರಂದು ಸಂಜೆ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಅಮ್ಮನವರ ಮೆರವಣಿಗೆ ನಡೆಸಲಾಗುವುದು. ಮೇ 15ರಂದು ಬೆಳಗ್ಗೆ ವಿಶೇಷ ಅಭಿಷೇಕ ಹಾಗೂ ಮಧ್ಯಾಹ್ನ ಅನ್ನದಾನ ಏರ್ಪಡಿಸಲಾಗಿದೆ ಎಂದು ತಿಳಿಸಿದೆ.
ವ್ಯಕ್ತಿ ಮೃತ ದೇಹ ಪತ್ತೆ
ಹಾಸನ: ವ್ಯಕ್ತಿಯೋರ್ವನ ಮೃತ ದೇಹ ರೇಲ್ವೆ ಹಳಿಯ ಮೇಲೆ ಲಭ್ಯವಾಗಿರುವ ಘಟನೆ ಸೋಮವಾರ ನಡೆದಿದೆ. ನಗರದ ತಣ್ಣಿರುಹಳ್ಳ ಸಮೀಪದ ರೇಲ್ವೆ ಹಳಿಯ ಮೇಲೆ ಅಪರಿಚಿತ ವ್ಯಕ್ತಿಯ ರುಂಡ ಬೇರೆಯಾಗಿರುವುವ ಮೃತದೇಹ ಪತ್ತೆಯಾಗಿದೆ. ವ್ಯಕ್ತಿಯ ಮೃತ ದೇಹದ ಬಳಿ ಮದ್ಯದ ಬಾಟಲ್, ಸಿಗರೇಟ್ ಇದ್ದು, ರೇಲ್ವೆ ಕಂಬಿಗೆ ತಲೆ ನೀಡಿ ಮಲಗಿದ ಸಂದರ್ಭದಲ್ಲಿ ರೈಲು ವ್ಯಕ್ತಿಯ ಕುತ್ತಿಗೆ ಮೇಲೆ ಹರಿದು ರುಂಡ ತುಂಡಾಗಿರಬಹುದು ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

