ಕೃಷಿ ಸಚಿವರ ದಿಢೀರ್ ಭೇಟಿ
ಆಲೂರು: ಕೃಷಿ ಸಚಿವ ಭೈರೇಗೌಡ ಮಂಗಳವಾರ ತೋಟಗಾರಿಕೆ, ಕೃಷಿ ಹಾಗೂ ಜಲಾನಯನ ಇಲಾಖೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲಿಗೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಅವರು ಅಲ್ಲಿದ್ದ ರೈತರೊಂದಿಗೆ ಮಾತು ಕತೆ ನಡೆಸಿ, ಕುಂದು ಕೊರತೆಗಳನ್ನು ವಿಚಾರಿಸಿದರು. ಆಗ ರೈತರು ಸಚಿವರಲ್ಲಿ, ಖಾಸಗಿಯವರು ಗೊಬ್ಬರಗಳನ್ನು ಜಾಸ್ತಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂದು ದೂರನ್ನಿತ್ತರು. ಬತ್ತ, ಜೋಳವನ್ನು ಬೆಂಬಲ ಬೆಲೆಗೆ ಕೊಳ್ಳುತ್ತಿರುವುದರಿಂದ ನಮಗೆ ಅನುಕೂಲವಾಗಿದೆ ಎಂದು ಅವರು ತಿಳಿಸಿದರು.
ರೈತ ಸಂಪರ್ಕ ಅಧಿಕಾರಿಗಳಿಂದ ಈ ಸಂಬಂಧ ಮಾಹಿತಿ ಪಡೆದ ಸಚಿವರು ಬಿತ್ತನೆ ಬೀಜದ ದಾಸ್ತಾನು ಹಾಗೂ ಇಲಾಖೆಯ ಸೌಲಭ್ಯಗಳನ್ನು ರೈತರಿಗೆ ಸೂಕ್ತ ರೀತಿಯಲ್ಲಿ ತಲುಪಿಸುತ್ತೀರೋ ಅಥವಾ ನೀವು ನೀಡಿದ್ದನ್ನು ಅವರು ಪಡೆಯಬೇಕೇ ಎಂದು ಅವರು ಪ್ರಶ್ನಿಸಿದರು.
ಸಲಹೆ: ನಂತರ ಕೃಷಿ ಇಲಾಖೆಯ ನೂತನ ಕಟ್ಟಡ ವೀಕ್ಷಿಸಿದ ಅವರು ಕೆ. ಕಿಸಾನ್ ಕಾರ್ಡ್ ಅನ್ನು ರೈತರು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಕೆಲವರ ಖಾತೆ ಬದಲಾವಣೆಯಾಗದಿದ್ದಲ್ಲಿ ಈಗ ಬಿತ್ತನೆಗೆ ಅನುಕೂಲ ಮಾಡಿಕೊಟ್ಟು ಆನಂತರ ಸಮಸ್ಯೆ ಸರಿಪಡಿಸುವಂತೆ ತಿಳಿಸಿದರು. ಮುಸುಕಿನ ಜೋಳಕ್ಕೆ ಜಿಪ್ಸಂ, ಜಿಂಕ್ನಂತಹ ಲಘು ಪೋಷಕಾಂಶಗಳನ್ನು ಬಳಸುವಂತೆ ತಿಳಿಸಿದರು. ರಾಗಿಯನ್ನು ಹೆಚ್ಚಾಗಿ ಬೆಳೆಯದಿರುವುದರ ಬಗ್ಗೆ ರೈತರಿಂದ ಮಾಹಿತಿ ಪಡೆದರು.
ಅಧಿಕಾರಿಗಳು ತರಾಟೆಗೆ: ನಂತರ ತೋಟಗಾರಿಕಾ ಇಲಾಖೆಗೆ ಭೇಟಿ ನೀಡಿದ ಅವರು, ಅಲ್ಲಿ ಸೂಕ್ತ ನಿರ್ವಹಣೆಯಿಲ್ಲದೇ, ಸಪೋಟ, ತೆಂಗು ಮುಂತಾದ ಗಿಡಗಳು ಸೊರಗಿ ಹೋಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ತೋಟಗಾರಿಕಾ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ನಂತರ ಸಿಂಗೋಡನಹಳ್ಳಿ ಗ್ರಾಮದಲ್ಲಿ ಕೃಷಿಹೊಂಡ, ಪಾಳ್ಯ ಗ್ರಾಮದ ರೈತ ಸಂಪರ್ಕ ಕೇಂದ್ರ, ಸಿಂಗಾಪುರ ಗ್ರಾಮದ ಪ್ಲಾಂಟೇಶನ್ ಹಾಗೂ ಬಾಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಸೂಕ್ತ ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

