23ರಿಂದ ಸಂಗೀತೋತ್ಸವ
ಅರಕಲಗೂಡು: ತಾಲೂಕಿನ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಮೂರು ದಿನಗಳ ಸಂಗೀತೋತ್ಸವ ಕಾರ್ಯಕ್ರಮದ ಸಿದ್ಧತೆ ಭರದಿಂದ ಸಾಗಿದ್ದು, ಸಂಗೀತ ಕಲಾ ರಸಿಕರಿಗೆ ಸಂಗೀತ ರಸದೌತಣ ನೀಡಲು ಗ್ರಾಮ ಸಿದ್ದವಾಗುತ್ತಿದೆ.
ಮೇ 23ರಿಂದ 25ರ ವರೆಗೆ ಪ್ರತಿವರ್ಷದಂತೆ ಈ ವರ್ಷವೂ ಸಂಗೀತೋತ್ಸವ ನಡೆಯಲಿದೆ. ಸಿದ್ಧತೆ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಪ್ರತಿಷ್ಠಾನ ಅಧ್ಯಕ್ಷ ಆರ್.ಕೆ.ಪದ್ಮನಾಭ, 23ರ ಸಂಜೆ 5 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಕುಮಾರಿ ವೈಷ್ಣವಿ ದತ್ತ ಅವರಿಂದ ಗಾಯನ, 6ರಿಂದ 6.30 ರುದ್ರಪಟ್ಟಣ ವೀಣಾ ಸಹೋದರರಾದ ಮಾ.ಆರ್.ಪಿ.ಪ್ರಶಾಂತ್ ಮತ್ತು ಮಾ.ಆರ್.ಪಿ.ಪ್ರಮೋದ್ ವೀಣಾ ವಾದನ, 6.45ರಿಂದ 7.15ರವರೆಗೆ ಬಿಂದು, ಕು.ಸಿಂಧು, ಕು.ವಿಭಾಶ್ರೀ ಇವರಿಂದ ಗಾಯನ, 7.30ರಿಂದ 8.45ರವರೆಗೆ ಬೆಂಗಳೂರಿನ ಕು.ಅಪೂರ್ವ ಅವರಿಂದ ಗಾಯನ ಮತ್ತು ರಾತ್ರಿ 8.15ರಿಂದ 8.45ರವರೆಗೆ ಕು.ಹಂಸ ನಟರಾಜ್ ಇವರಿಂದ ನೃತ್ಯ ಕಾರ್ಯಕ್ರಮವಿದೆ.
24ರಂದು ಬೆಳಿಗ್ಗೆ 6.30ಕ್ಕೆ ಕಾವೇರಿ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ದಿನವಿಡೀ ವಿವಿಧ ಸಂಗೀತ ವಿದ್ವಾಂಸರುಗಳಿಂದ ಸಂಗೀತ ಕಾರ್ಯಕ್ರಮ, ಸಂಜೆ 7.45ಕ್ಕೆ ತೆಪ್ಪೋತ್ಸವ, ಕಾವೇರಿ ತಟದಲ್ಲಿ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ಕಾರ್ಯಕ್ರಮವಿದೆ. ಇದೇ ಸಂದರ್ಭದಲ್ಲಿ ಪ್ರಸಿದ್ದ ಮೃದಂಗ ವಿದ್ವಾನ್ ಟಿ.ಎ.ಎಸ್ ಮಣಿ ಅವರಿಗೆ ನಾಚಾರಮ್ಮ ಪ್ರಶಸ್ತಿ ಮತ್ತು ಲಯವಾದ್ಯ ಕಲಾ ಸ್ಪರ್ಶಮಣಿ ಎಂಬ ಬಿರುದು ಪ್ರದಾನ ಮಾಡಲಿದ್ದು, ಈ ವೇಳೆ ಆದಿ ಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಅತಿಥಿಗಳಾಗಿ ಕುಲಪತಿ ಡಾ.ಎಂ.ಆರ್.ಜಯರಾಮ್,ಮತ್ತು ಶಾಸಕ ಎ.ಮಂಜು ಭಾಗವಹಿಸುವರು. ಮೇ 25ರಂದು ಬೆಳಗ್ಗೆ ನಗರ ಸಂಕೀರ್ತನೆ ಮತ್ತು ಸಂಗೀತ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

