ಹಾಸನ

ಜೂಜು: 19 ಮಂದಿ ಸೆರೆ

Published On :

ಹಾಸನ: ನಗರದ ಬಿ.ಎಂ.ರಸ್ತೆಯಲ್ಲಿರುವ ಕ್ವಾಲಿಟಿ ಬಾರ್‌ನ ಒಂದನೇ ಮಹಡಿಯಲ್ಲಿ ಅಂದರ್-ಬಾಹರ್ ಜೂಜಾಡುತ್ತಿದ್ದ 19 ಮಂದಿಯನ್ನು  ಪೊಲೀಸರು ಬಂಧಿಸಿರುವ ಘಟನೆ  ಬುಧವಾರ ನಡೆದಿದೆ.
ಆಡುವಳ್ಳಿಯ ಮುಖ್ಯ ರಸ್ತೆ ನಿವಾಸಿ ರವಿ (37), ಆಜಾದ್ ರಸ್ತೆಯ ಬಾಲರಾಜ (40), ಆಡುವಳ್ಳಿಯ ಸುಬ್ರಹ್ಮಣ್ಯ (40), ದೇವಾಂಗ ಬೀದಿಯ ಗೋಪಿ (33) ಬಿ.ಕಾಟೀಹಳ್ಳಿ ಕೊಪ್ಪಲಿನ  ವಿನೋದ್ (33), ದೊಡ್ಡಗರಡಿ ಬೀದಿಯ ರಾಜೇಂದ್ರ (30), ಸಿದ್ದಯ್ಯನಗರದ  ಶಶಿಧರ (35), ರಾಜಘಟ್ಟದ ಅಣ್ಣಪ್ಪ (33)  ಬಿ.ಕಾಟೀಹಳ್ಳಿಯ ಅಶೋಕ (45), ಚನ್ನಪಟ್ಟಣ  ರಾಮಂದಿರ ಹಿಂಭಾಗದ ವಾಸಿ ಮಹದೇವ (37),  ವಲ್ಲಭಾಯಿ ರಸ್ತೆಯ   ದಿವಾಕರ (42), ಉದಯಗಿರಿ ಬಡಾವಣೆಯ ನಾಗರಾಜ (35), ಅಗಿಲೆ ಗ್ರಾಮದ  ಸ್ವಾಮಿ (44), ಆಕಾಶವಾಣಿ ಎದುರಿನ ವಾಸಿ  ಹೇಮಂತ್‌ಕುಮಾರ್ (25), ಹೇಮಾವತಿ ನಗರದ ಮಹೇಶ (40), ಲಕ್ಷ್ಮೀಪುರ ಬಡಾವಣೆಯ ಆದರ್ಶಕುಮಾರ್ (40), ಬಿ.ಕಾಟಿಹಳ್ಳಿಯ  ದೇವರಾಜ (36), ಪಿಡಬ್ಲ್ಯುಡಿ ಕ್ವಾಟ್ರಸ್‌ನ  ಕುಮಾರ (42), ಬಿ.ಎಂ. ರಸ್ತೆಯ ವಾಸಿ ಹರೀಶ (41) ಎಂಬುವರೇ ಬಂಧಿತ ಆರೋಪಿಗಳು.
ಜೂಜಾಟದಲ್ಲಿ ಪಣಕ್ಕಿಟ್ಟಿದ್ದ  ರು.13,475 ನಗದು ವಶಪಡಿಸಿಕೊಂಡಿರುವ ಬಡಾವಣೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.