ಲಕ್ಷ್ಮೀ ನರಸಿಂಹ ರಥೋತ್ಸವ
ಜಾವಗಲ್: ಇತಿಹಾಸ ಪ್ರಸಿದ್ಧ ಲಕ್ಷೀನರಸಿಂಹಸ್ವಾಮಿ ಬ್ರಹ್ಮರಥೋತ್ಸವವು ಸಂಭ್ರಮ ಮತ್ತು ಸಡಗರದಿಂದ ನಡೆಯಿತು. ಬುಧವಾರ ಬೆಳಗ್ಗೆ ರಾಜ್ಯದ ಹಲವೆಡೆಗಳಿಂದ ಬಂದಿದ್ದ ಭಕ್ತರು ದೇಗುಲಕ್ಕೆ ಆಗಮಿಸಿ ಮೂಲದೇವರಿಗೆ ಹಣ್ಣುಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು ಬೆಳಗ್ಗೆ ಚಿಕ್ಕರಥದಲ್ಲಿ ಸೂರ್ಯಮಂಡಲೋತ್ಸವ, ವಸಂತ ಸೇವೆ, ಕೃಷ್ಣ ರಥೋತ್ಸವವೂ ನಡೆಯಿತು.
ವಿಶೇಷವಾಗಿ ಪಂಚ ಕಳಸಗಳನ್ನು ಮೆರವಣಿಗೆಯಲ್ಲಿ ತಂದು ರಥಕ್ಕೆ ಕಳಸ ಹಾಕಿ ರಥೆಳೆಯಿತು. ಉತ್ಸವಮೂರ್ತಿ ಮೆರವಣಿಗೆ ನಡೆಸಿ ಪುಷ್ಪಾಲಂಕೃತ, ದೊಡ್ಡರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಬಲಿ ಪ್ರದಾನ ನಡೆಸಿ ರಥಕ್ಕೆ ತೆಂಗಿನಕಾಯಿ ಒಡೆದು, ನಂತರ ಸಹಸ್ರಾರು ಭಕ್ತರು ರಥ ಎಳೆದು ಕಳಸಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ವೇದಘೋಷ, ಭಜನೆ, ಕೀರ್ತನೆಗಳೊಂದಿಗೆ ನಾದಸ್ವರ ಮಂಗಳವಾದ್ಯಗಳೊಂದಿಗೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಪಾನಕ ಫಲಹಾರ, ಉಪಹಾರ ವಿನಿಯೋಗಿಸಲಾಯಿತು.
ಶಾಸಕ ವೈ.ಎನ್.ರುದ್ರೇಶಗೌಡ, ಅರಸೀಕೆರೆ ತಹಸೀಲ್ದಾರ್ ಮನೋಹರಿ, ತಾಪಂ ಸದಸ್ಯೆ ಲಕ್ಷ್ಮೀ ರವಿಶಂಕರ್, ಮಾಜಿ ಜಿಪಂ ಸದಸ್ಯೆ ಭಾಗ್ಯರಾಜೇಗೌಡ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

