ಹಾಸನ

ಚರಂಡಿ ಗಲೀಜು ವಿಲೇವಾರಿ

Published On :

ಅರಸೀಕೆರೆ: ಅನೇಕ ವರ್ಷಗಳಿಂದ ಪಟ್ಟಣದ ಹಾಸನ ರಸ್ತೆಯ ಎರಡು ಬದಿಗಳ ಚರಂಡಿಗಳಲ್ಲಿ ಲಾರಿ ಗಟ್ಟಲೆ ಇದ್ದ ಕಸದ ರಾಶಿಯನ್ನು ಹೊರ ತೆಗೆದು ಹಾಕುವಲ್ಲಿ ಇಲ್ಲಿನ ಪುರಸಭೆಯ ಪೌರ ಕಾರ್ಮಿಕರು ಗುರುವಾರ ಇನ್ನಿಲ್ಲದ ಹರಸಾಹಸವನ್ನು ಮಾಡಿದರು.
ಪುರಸಭೆ ಅನೇಕ ವರ್ಷಗಳಿಂದ ವಿಲೇವಾರಿಯಾಗದೇ ಉಳಿದಿದ್ದ ಚರಂಡಿಗಳಲ್ಲಿನ ಕಸದ ರಾಶಿ ಕುರಿತು ಕನ್ನಡಪ್ರಭ ವರದಿ ಮಾಡಿತ್ತು. ಈ ವರದಿಯಿಂದ ಎಚ್ಚೆತ್ತುಕೊಂಡು ಪುರಸಭೆ ಕಸದ ರಾಶಿಯನ್ನು ವಿಲೇವಾರಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪುರಸಭಾ ಅಧ್ಯಕ್ಷ ಮೋಹನ್‌ಕುಮಾರ್, ಈ ರಸ್ತೆಯೂ ರಾಜ್ಯ ಹೆದ್ದಾರಿ ಇಲಾಖೆಗೆ ಸಂಬಂಧಿಸಿದ್ದು, ಇದರ ಸಂಪೂರ್ಣ ನಿರ್ವಹಣೆ ಲೋಕೋಪಯೋಗಿ ಇಲಾಖೆ ಮಾಡಬೇಕಾಗಿದೆ. ಆದಕಾರಣ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಾವು ಪುರಸಭೆ ಆಡಳಿತದ ಮೂಲಕ ನೋಟಿಸ್ ನೀಡಿರುವುದಾಗಿ ಹೇಳಿದರು.  ಹಾಸನ ರಸ್ತೆಯ ರೇಲ್ವೆ ಕೆಳಸೇತುವೆ ಎರಡು ಬದಿಗಳ ಚರಂಡಿಗಳನ್ನು ಲೊಕೋಪಯೋಗಿ ಇಲಾಖೆ ನಿರ್ಮಿಸಿ ಅನೇಕ ವರ್ಷಗಳೇ ಕಳೆದಿವೆ. ಈ ಚರಂಡಿಯಲ್ಲಿನ ಕಸದ ರಾಶಿಯನ್ನು ತೆಗೆದು ಹೊರ ಹಾಕುವ ಕಾರ್ಯವನ್ನು ಕೈಗೊಂಡಿರಲಿಲ್ಲ. ಕಾರಣ ಈ ಭಾಗದಲ್ಲಿ ನೈರ್ಮಲ್ಯದ ಕೊರತೆ ಸಾರ್ವಜನಿಕರನ್ನು ಕಾಡುತ್ತಿದ್ದು, ಪುರಸಭಾ ಆಡಳಿತ ಇಂಥ ಭೀಕರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂಬುವುದು ನಾಗರಿಕರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.