ಶಿವಲಿಂಗ ಸ್ವಾಮೀಜಿ ಸ್ಮರಣೆ
ಹಾಸನ:ಸುಕ್ಷೇತ್ರ ಕೋಡಿಮಠ ಮಹಾಸಂಸ್ಥಾನದಲ್ಲಿ ಮೇ 18 ರಂದು ಬೆಳಗ್ಗೆ 9ಕ್ಕೆ ಶಿವಲಿಂಗ ಸ್ವಾಮೀಜಿ 127ನೇ ವರ್ಷದ ಸ್ಮರಣಾರಾಧನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 6.30ಕ್ಕೆ ಶ್ರೀಕ್ಷೇತ್ರದ ಪದ್ಧತಿಯಂತೆ ಗದ್ದುಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ರಾಜೋಪಚಾರ ಪೂಜೆಗಳು ನಡೆಯಲಿವೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಪೂಜ್ಯರ ಭಾವಚಿತ್ರದೊಂದಿಗೆ ಬೆಳ್ಳಿಪಲ್ಲಕ್ಕಿ ಉತ್ಸವವು ಕ್ಷೇತ್ರದ ಆವರಣದಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮ 12 ಗಂಟೆಗೆ ನಡೆಯಲಿದ್ದು,ಬಳ್ಳಾರಿಯ ಕೊಟ್ಟೂರು ಸ್ವಾಮಿ ಮಠದ ಸಂಗನಬಸವ ಸ್ವಾಮೀಜಿ, ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ, ಒಳಬಳ್ಳಾರಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ದೊಡ್ಡಮೇಟಿ ಕುರ್ಕೆ ವಿರಕ್ತಮಠದ ರಾಜಶೇಖರ ಸ್ವಾಮೀಜಿ, ಸಕ್ರಾಯಪಟ್ನದ ಕರಡೀಗವಿಮಠದ ಶಂಕರಾನಂದ ಸ್ವಾಮೀಜಿ, ಬೊಮ್ಮನಹಳ್ಳಿಯ ವಿರಕ್ತಮಠದ ಶಿವಯೋಗಿ ಸ್ವಾಮೀಜಿ, ರೋಣ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ ಭಾಗವಹಿಸುವರು.ಶಿವಲಿಂಗಶ್ರೀ ಪ್ರಶಸ್ತಿ: ಸಂಗೀತ, ಸಾಹಿತ್ಯ ಸಾಮ್ರಾಟ ಹಾಗೂಲಿಂಗೈಕ್ಯ ಪುಟ್ಟರಾಜ ಗವಾಯಿಗಳ ಶಿಷ್ಯ ಗುರುಸ್ವಾಮಿ ಕಲ್ಕೇರಿ ಅವರಿಗೆ ಶಿವಲಿಂಗಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಚಿತ್ರನಟ ದೊಡ್ಡಣ್ಣ, ತೆರಿಗೆ ಸಲಹೆಗಾರ ಹಾಗೂ ಲೆಕ್ಕಪರಿಶೋಧಕ ಶಾಂತಕುಮಾರ್ ಎಸ್. ಮಾಳಗಿ, ನಿವೃತ್ತ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ, ನಿವೃತ್ತ ಆಯುಕ್ತ ಡಾ.ಚಂದ್ರಶೇಖರ್, ವಾಣಿಜ್ಯೋದ್ಯಮಿ ದಿವಾಕರ್ ಎನ್.ಶೆಟ್ಟಿ ಮತ್ತಿತರರು ಭಾಗವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

