ಹಾಸ್ಟೆಲ್ಗೆ ಅರ್ಜಿ ಕರೆ
ಅರಸೀಕೆರೆ: 2014-15ನೇ ಸಾಲಿಗೆ ತಾಲವೂಕಿನ ಬಿಸಿಎಂ ಇಲಾಖೆಯಿಂದ ನಡೆಯುತ್ತಿರುವ ಈ ಕೆಳಕಂಡ ಮೆಟ್ರಿಕ್ ಪೂರ್ವ ಬಾಲಕ- ಬಾಲಕಿಯರ ವಿದ್ಯಾರ್ಥಿ ನಿಲಯಗಳು, ಆಶ್ರಮ ಶಾಲೆಗಳು ಮತ್ತು ಖಾಸಗಿ ಅನುದಾನಿತ ವಿದ್ಯಾರ್ಥಿನಿಲಯಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಆಶ್ರಮ ಶಾಲೆಗೆ ಸೇರ ಬಯಸುವ ವಿದ್ಯಾರ್ಥಿಗಳು 1 ರಿಂದ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುವವರಾಗಿರಬೇಕು ಹಾಗೂ ಜನ್ಮ ದಿನಾಂಕ, ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ಪತ್ರ ಸಲ್ಲಿಸಬೇಕು. ನಿಲಯಕ್ಕೆ ಸೇರ ಬಯಸುವ ವಿದ್ಯಾರ್ಥಿಗಳು ಆಯಾ ನಿಲಯಗಳಿಂದಲೇ ಅರ್ಜಿ ಪಡೆಯಬಹುದಾಗಿದೆ. ಜೂನ್ 10 ಕೊನೆಯ ದಿನವಾಗಿದೆ. ಅರಸೀಕೆರೆ, ಗಂಡಸಿ, ತಳಲುತೊರೆ, ಜಾವಗಲ್, ಚಿಕ್ಕಮ್ಮನಹಳ್ಳಿ, ಜೆ.ಸಿ.ಪುರ, ಚಗಚಗೆರೆ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಅರಸೀಕೆರೆ ಪಟ್ಟಣ, ಹಂದ್ರಾಳು, ಮೆಟ್ರಿಕ್ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ, ತಿಮ್ಮನಹಳ್ಳಿ ಆಶ್ರಮ ಶಾಲೆಗಳಿಗೆ ಅರ್ಜಿ ಸಲ್ಲಿಸಬಹದು. ಅಲ್ಲದೆ, ಅನುದಾನಿತ ನಿಲಯಗಳಾದ ಕೋಡಿ ಮಠದ ಶಿವಲಿಂಗೇಶ್ವರ ನಿಲಯ, ಹರಳಕಟ್ಟದ ಶಿವನಂಜುಂಡೇಶ್ವರ ಪ್ರಸಾದ ನಿಲಯಗಳಲ್ಲಿ ಅರ್ಜಿ ಸಲ್ಲಿಸಬಹುದು.
ಮನೆ-ಮನೆ ಸಾಹಿತ್ಯ ಗೋಷ್ಠಿ
ಬೇಲೂರು: ರಾಮಾಯಣ ಮತ್ತು ಮಹಾಭಾರತವನ್ನು ಜನ-ಸಾಮಾನ್ಯರಿಗೆ ಹೆಚ್ಚು ಪ್ರಚಲಿತಗೊಳಿಸುವಲ್ಲಿ ರಂಗಭೂಮಿ ಪಾತ್ರ ಪ್ರಮುಖ ಸ್ಥಾನವಿದೆ. ಆ ಮೂಲಕ ಭಾರತದ ಮಹಾಕಾವ್ಯಗಳು ಜೀವಂತವಾಗಿವೆ ಎಂದು ವೈಡಿಡಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಪ್ರೊ.ಜಯಣ್ಣಗೌಡ ಅಭಿಪ್ರಾಯಪಟ್ಟರು.ಸಾಹಿತಿ ಹಾಗೂ ರಂಗಕರ್ಮಿ ಡಾ. ರಾಜಶೇಖರ ಮಠಪತಿ ಪಟ್ಟಣದ ಗೃಹದಲ್ಲಿ ವೇಲಾಪರಿ ಸಾಹಿತ್ಯ ವೇದಿಕೆ ಏರ್ಪಡಿಸಿದ್ದ ಮನೆ-ಮನೆ ಸಾಹಿತ್ಯ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಡಾ.ರಾಜಶೇಖರ್ಮಠಪತಿ ಮಾತನಾಡಿದರು.ಪದ್ಮಾಮಠಪತಿ ಉದ್ಘಾಟಿಸಿದರು. ಶತನಾಟಕ ಸಾರ್ವಭೌಮ ಬೇಲೂರು ಕೃಷ್ಣಮೂರ್ತಿ, ರಂಗಕಲಾವಿದ ಕೃಷ್ಣಮೂರ್ತಿ, ವೇದಿಕೆ ಕಾರ್ಯದರ್ಶಿ ಮ.ಶಿವಮೂರ್ತಿ, ರೋಟರಿ ರಾಜೇಗೌಡ, ಆನಂದ್, ವೈ.ಎಸ್.ಸಿದ್ದೇಗೌಡ, ನಾಗಮ್ಮ, ಶಿಕ್ಷಕ ಕುಮಾರಸ್ವಾಮಿ, ಚಂದನ್ ನೃತ್ಯ ತಂಡದ ಕುಮಾರ್ ಸೇರಿದಂತೆ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

