ಹಾಸನ

ಕೊಬ್ಬರಿಗೆ ದಾಖಲೆ ಬೆಲೆ

Published On :

ಅರಸೀಕೆರೆ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮೇ 16 ರಂದು ಶುಕ್ರವಾರ ನಡೆದ ಟೆಂಡರ್‌ನಲ್ಲಿ ಕೊಬ್ಬರಿ ಕ್ವಿಂಟಲ್‌ಗೆ ಕನಿಷ್ಠ ಬೆಲೆ 12.025 ರು.ಗೆ ನಿಂತಿದ್ದು, ಮೇ 20 ರಂದು ಮಂಗಳವಾರ ಕೇವಲ ನಾಲ್ಕು ದಿನಗಳ ಅಂತರದಲ್ಲಿ ಕೊಬ್ಬರಿಗೆ ಗರಿಷ್ಠ ಬೆಲೆ 13.800 ರು.ಗೆ  ಏರಿರುವುದು ಆಶ್ಚರ್ಯಕರವಾಗಿದೆ.
ತಾಲೂಕಿನ ತೆಂಗು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ ಹಾಗೂ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಮತ್ತು ಕೊಬ್ಬರಿಗೆ ಸೂಕ್ತ ಬೆಂಬಲ ಬೆಲೆ ದೊರಕುತ್ತಿಲ್ಲ ಎಂದು ರೈತರು ಅನೇಕ ಬಾರಿ ಬೀದಿಗಿಳಿದು ಹೋರಾಟ ಮಾಡಿದ ಫಲವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಂಗು ಬೆಳೆಗಾರರ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಕೊಬ್ಬರಿ ಖರೀದಿಗೆ ನಾಫೆಡ್ ಕೇಂದ್ರವನ್ನು ಪ್ರಾರಂಭಿಸಿ ಸರ್ಕಾರದ ಪ್ರೋತ್ಸಾಹ ಹಣ ಪ್ರತಿ ಕ್ವಿಂಟಲ್‌ಗೆ 600 ರು  ಘೋಷಣೆ ಮಾಡಿ ಖರೀದಿ ಕಾರ್ಯಕ್ಕೆ ಮುಂದಾದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಸಾವಿರಾರು ಲೋಡ್‌ಗಟ್ಟಲೆ ಕೊಬ್ಬರಿ ರವಾನೆ ಆಗುವ ಮೂಲಕ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳ ನಿದ್ದೆಗೆಡಿಸುವಂತಹ ಪರಿಸ್ಥಿತಿ ಉಂಟಾಗಿತ್ತು. ಅಲ್ಲದೆ ಸ್ವತಃ ಶಾಸಕರೇ ಮಾರುಕಟ್ಟೆಯಲ್ಲಿ ಹಾಜರಿದ್ದು, ಪ್ರತಿಯೊಬ್ಬ ರೈತರ ಕೊಬ್ಬರಿಯನ್ನು ಅಧಿಕಾರಿಗಳು ಖರೀದಿಸಲು ತಾಕೀತು ಮಾಡಿದ್ದರು.
ಇದರಿಂದಾಗಿ ರೈತರಿಗೆ ದೊರತ ಹಣ ಕ್ವಿಂಟಾಲಲ್ಕೊಬ್ಬರಿಗೆ ಗರಿಷ್ಟ ಬೆಲೆ 8 ಸಾವಿರಕ್ಕೂ ಕಡಿಮೆಯಾಗಿದ್ದು, ಅದನ್ನು ಪಡೆದುಕೊಳ್ಳಲು ರೈತರು ಇನ್ನಿಲ್ಲದ ಹರಸಾಹಸವನ್ನೇ ಮಾಡಬೇಕಾಗಿತ್ತು.
ಆದರೆ ನೂತನ ವರ್ಷ 2014 ರಲ್ಲಿ ಕೊಬ್ಬರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಪ್ರಮಾಣ ಹೆಚ್ಚಾದ ಕಾರಣ ಕಳೆದ ಏ.4 ರಂದು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಗರಿಷ್ಠ ಬೆಲೆ 11.700 ರು.ಗೆ   ಟೆಂಡರ್ ಹರಾಜು ನಿಲ್ಲುವ ಮೂಲಕ ದಾಖಲೆ ಪ್ರಮಾಣದಲ್ಲಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು, ತದನಂತರ ಮೇ.16 ರಂದು ನಡೆದ ಟೆಂಡರ್ ಹರಾಜಿನಲ್ಲಿ ಪ್ರತಿ ಕ್ವಿಂಟಲ್‌ಗೆ 11.100 ರಿಂದ 12.025 ರು. ಗಳಿಗೆ ನಿಂತಿತ್ತು.
ಆದರೆ ಕಳೆದ ನಾಲ್ಕು ದಿನಗಳಲ್ಲಿ ಪುನಃ ಕೊಬ್ಬರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವ ಕಾರಣ ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಸಂಗ್ರಹಣೆ ಮಾಡಿಟ್ಟಿದ್ದ ಕೊಬ್ಬರಿ ಮಾತ್ರ ಮಾರುಕಟ್ಟೆಗೆ ಬರುತ್ತಿದ್ದು, ಕೇವಲ 526 ಕ್ವಿಂಟಲ್ ಕೊಬ್ಬರಿ ಮಂಗಳವಾರ ಮಾರುಕಟ್ಟೆ ಪ್ರವೇಶಿಸಿದ್ದ ಪರಿಣಾಮ ಟೆಂಡರ್ ಪ್ರಕ್ರಿಯೆಯಲ್ಲಿ ಕನಿಷ್ಠ  ಬೆಲೆಯು 11.800 ರು.ನಿಂದ  ಪ್ರಾರಂಭವಾಗಿ ಗರಿಷ್ಠ ಬೆಲೆಯು 13.800 ರು.ಗೆ ನಿಲ್ಲುವಂತಾಗಿದೆ.
ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಹೊಸದಾಗಿ ಸಂಗ್ರಹಣೆ ಮಾಡಿರುವ ಕೊಬ್ಬರಿ ಶ್ರವಣ ಮಾಸದಲ್ಲಿ ಕೃಷಿ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಅಲ್ಲಿಯವರೆಗೂ ಈ ಪೈಪೋಟಿ ಮುಂದುವರಿಯುವ ಲಕ್ಷಣಗಳು ಕಂಡು ಬರುತ್ತವೆ ಎಂಬ ಅಭಿಪ್ರಾಯವು ಇಲ್ಲಿನ ಕೆಲವು ವರ್ತಕರದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.